LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಸುರಕ್ಷತಾ ಕಾಮಗಾರಿ ಕಾರಣ ಹುಬ್ಬಳ್ಳಿ-ಬೆಂಗಳೂರು ವಿಶೇಷ ರೈಲುಗಳು 2 ದಿನ ರದ್ದು

ಹುಬ್ಬಳ್ಳಿ, ಏಪ್ರಿಲ್​ 03: ನೈಋತ್ಯ ರೈಲ್ವೆ ಬೆಂಗಳೂರು ವಲಯದಲ್ಲಿ ಸುರಕ್ಷತಾ ಕಾಮಗಾರಿ ಕೈಗೊಂಡಿರುವ ಕಾರಣ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ . ಇನ್ನು ಕೆಲವು ರೈಲುಗಳನ್ನು ಭಾಗಶಃ ರದ್ದುಗಳಿಸಲಾಗಿದೆ. ವಂದೇ ಭಾರತ ರೈಲಿನ ಸಮಯವನ್ನು ಪರಿಷ್ಕರಿಸಲಾಗಿದೆ. ಹಾಗಿದ್ದರೆ ಯಾವ ಯಾವ ರೈಲುಗಳು ರದ್ದಾಗಿವೆ.

ರೈಲು ಸಂಖ್ಯೆ 07339/07340 ಶ್ರೀ ಸಿದ್ಧಾರೂಢ ಸ್ವಾಮಿ (SSS) ಹುಬ್ಬಳ್ಳಿ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು ಮಧ್ಯೆ ಸಂಚರಿಸುವ ಎಸ್​ಎಸ್​ಎಸ್​ ಹುಬ್ಬಳ್ಳಿ ವಿಶೇಷ ರೈಲು ಏಪ್ರಿಲ್​ 6 ಮತ್ತು 7 ರಂದು ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 06255 ಕೆಎಸ್​ಆರ್​ ಬೆಂಗಳೂರು-ಮೈಸೂರು ಮೆಮು ವಿಶೇಷ ಮತ್ತು ರೈಲು ಸಂಖ್ಯೆ 06650 ಮೈಸೂರು KSR ಬೆಂಗಳೂರು ಮೆಮು ವಿಶೇಷ ರೈಲು ಏಪ್ರಿಲ್ 7 ಮತ್ತು 8 ರಂದು ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 17391/17392 ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರಿನ ಯಶವಂತಪುರ ನಡುವೆ ಸಂಚರಿಸುವ ರೈಲು ಏಪ್ರಿಲ್​ 7, 8 ಮತ್ತು 9 ರಂದು ಭಾಗಶಃ ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 06243 ಬೆಂಗಳೂರು ಹೊಸಪೇಟೆ ಮತ್ತು ರೈಲು ಸಂಖ್ಯೆ 06244 ಹೊಸಪೇಟೆ- ಬೆಂಗಳೂರು ರೈಲು ಏಪ್ರಿಲ್ 7, 8 ಮತ್ತು 9 ರಂದು ಭಾಗಶಃ ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 16512 ಕೆಎಸ್​​ಆರ್​ ಬೆಂಗಳೂರು-ಕಣ್ಣೂರು ರೈಲು ಏಪ್ರಿಲ್​ 7 ಮತ್ತು 8 ರಂದು ಕೆಎಸ್​ಆರ್​ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 20661 ಕೆಎಸ್​ಆರ್​ ಬೆಂಗಳೂರು ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಏಪ್ರಿಲ್​ 8 ರಂದು ಕೆಎಸ್​ಆರ್​ ಬೆಂಗಳೂರಿನಿಂದ 30 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ.

ರೈಲು ಸಂಖ್ಯೆ 16591 ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಮೈಸೂರು ಹಂಪಿ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 8 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ 90 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ.

ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು ನಿಂದ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ಅನ್ನು ಏಪ್ರಿಲ್ 8 ಮತ್ತು 9 ರಂದು ಕ್ರಮವಾಗಿ ಕೆಎಸ್‌ಆರ್ ಬೆಂಗಳೂರಿನಿಂದ 30 ನಿಮಿಷ ಮತ್ತು 75 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್