Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ತಮ ಸಮಾಜಕ್ಕೆ ಆರೋಗ್ಯವಂತ ಜನರೇ ಆಸ್ತಿ:  ವಿಜಯಕುಮಾರ

ಬೈಲಹೊಂಗಲ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಇದರ ವತಿಯಿಂದ   ಮೂಗಬಸವ ಗ್ರಾಮದಲ್ಲಿ  ಶ್ರೀ ಮೂಗಬಸವೇಶ್ವರ  ಜ್ಞಾನವಿಕಾಸ ಕೇಂದ್ರದಲ್ಲಿ ಮತ್ತು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಎಸ್ ಡಿ ಎಂ  ನಾರಾಯಣ ಹೃದಯಾಲಯ ಆಸ್ಪತ್ರೆ ಧಾರವಾಡ  ಶ್ರೀ ಸಾಯಿ ದೀಪ ಕಣ್ಣಿನ ಆಸ್ಪತ್ರೆ  ಶ್ರೀ ಆರ್ತೋ   ಆಸ್ಪತ್ರೆ  ಬೆಳಗಾವಿ ಇವರ ಸಹಯೋಗದಲ್ಲಿ  ಉಚಿತ  ಹೃದಯ ತಪಾಸಣೆ ,ಕಣ್ಣಿನ ತಪಾಸಣೆ ಮತ್ತು ಎಲಬು ಕೀಲು, ಬಿಪಿ ಶುಗರ್ ತಪಾಸಣೆ   ಶಿಬಿರವನ್ನು  ಶ್ರೀ ಮೂಗ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಗ್ರಾಮ ಪಂಚಾಯತ   ಮಾಜಿ ಅಧ್ಯಕ್ಷರಾದ ಶ್ರೀಮತಿ ಭಾರತಿ ಬಸಯ್ಯ ಪೂಜಾರ, ಕಾರ್ಯಕ್ರಮದ ಉದ್ಘಾಟಕರಾಗಿ ಪಿ ಕೆ ಪಿ ಎಸ್ ಅಧ್ಯಕ್ಷ  ಸಂಗಪ್ಪ ಹುಲ್ಲೂರು , ತಾಲೂಕಿನ ಯೋಜನಾಧಿಕಾರಿಗಳಾದ ವಿಜಯಕುಮಾರ, ಪಿ ಕೆ ಪಿ ಎಸ್ ಉಪಾಧ್ಯಕ್ಷ  ಬಾಬು  ಇಟಗಿ,ಮಹಾಂತೇಶ ಅಬ್ಬಾಯಿ, ಪರಮೇಶ್ವರ ಲಿಂಗದಳ್ಳಿ, ಬಸವರಾಜ ಹೊಂಡೆದ,ಡಾ. ಪ್ರಕಾಶ ವೈದ್ಯರು, ಎಸ್ ಡಿ ಎಂ ನಾರಾಯಣ ಹೃದಯಾಲಯ ,ಧಾರವಾಡ, ಶ್ರೀ ಸಾಯಿ ದೀಪ ಕಣ್ಣಿನ  ಅಸ್ಪತ್ರೆ ಬೆಳಗಾವಿ ,ಶ್ರೀ ಆರ್ತೋ  ಆಸ್ಪತ್ರೆ ಬೆಳಗಾವಿ ಇವರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು. ಕಾರ್ಯಕ್ರಮದ  ಮುಖ್ಯ ಅತಿಥಿಗಳಾದ ಬಾಬು ಇಟಗಿ ಅವರು ಮಾತನಾಡಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡದಿರುವ ಕಾರ್ಯಗಳಿಲ್ಲ, ಆರೋಗ್ಯ ತಪಾಸಣೆ ಶಿಬಿರಗಳು  ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ, ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಬಡವರಿಗೆಂದೇ ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾರ್ಯಕ್ರಮಗಳ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು,ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುದರೊಂದಿಗೆ ಕುಟುಂಬ ನಿರ್ವಹಣೆಯನ್ನು  ಜಾಣ್ಮೆಯಿಂದ ನಿರ್ವಹಿಸುವುದು ಅಗತ್ಯವಾಗಿದೆ. ಹಾಗೂ ಎಲ್ಲರೂ ಅನಾವಶ್ಯಕ ಖರ್ಚು ಮಾಡದೆ ಸ್ವ ಉದ್ಯೋಗ ರೂಪಿಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಿ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಡೀ ಕರ್ನಾಟಕದಾದ್ಯಂತ ವ್ಯಾಪಿಸಿದ್ದು ಅದೆಷ್ಟೋ ಕುಟುಂಗಳಿಗೆ ದಾರಿದೀಪವಾಗಿದೆ.ತಮ್ಮ ಅವಶ್ಯಕತೆಗೆ ಪೂರಕವಾಗಿ ಸಾಲ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.  
ತಾಲೂಕಿನ ಯೋಜನಾಧಿಕಾರಿಗಳಾದ ವಿಜಯಕುಮಾರ ಅವರು ಮಾತನಾಡಿ  ಯೋಜನೆ ಕಾರ್ಯಕ್ರಮಗಳ ಬಗ್ಗೆ  ಸಮುದಾಯ ಅಭಿವೃದ್ಧಿ ಮಾಶಾಸನ ವಾತ್ಸಲ್ಯ, ಸುಜ್ಞಾನಿಧಿ ಶಿಷ್ಯವೇತನ ಜಲಮಂಗಳ ಆರೋಗ್ಯ ರಕ್ಷಾ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಬಗ್ಗೆ  ಕುರಿತು ಮಾಹಿತಿ ನೀಡಿದರು.ಉತ್ತಮ ಸಮಾಜಕ್ಕೆ ಆರೋಗ್ಯವಂತ ಜನರೇ ಆಸ್ತಿ ಎಂದು ಆರೋಗ್ಯದ ಮಹತ್ವ ತಿಳಿಸಿದರು.
 ಕಾರ್ಯಕ್ರಮದಲ್ಲಿ 200 ಊರಿನ ಜನರು  ಬಂದು  ಈ ಉಚಿತ ತಪಾಸಣೆಯಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಪರೀಕ್ಷೆ ಮತ್ತು ಕಣ್ಣಿನ ತಪಾಸಣೆ , ಬಿ ಪಿ ಶುಗರ್ ಮತ್ತು ಎಲಬು ಕೀಲು ತಪಾಸಣೆ  ಮಾಡಿಸಲಾಯಿತು. ಈ ಸಂದರ್ಭದಲ್ಲಿ    ನಿರೂಪಣೆ ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ ಜಕ್ಕನವರ,
ಸ್ವಾಗತ ವಲಯದ ಮೇಲ್ವಿಚಾರಕರು  ಸಂತೋಷ
ಧನ್ಯವಾದವನ್ನು  ಸೇವಾ ಪ್ರತಿನಿಧಿ ಮಂಜುನಾಥ, ಹಾಗೂ ಒಕ್ಕೂಟ ಅಧ್ಯಕ್ಷರು ,ಜ್ಞಾನ ವಿಕಾಸ  ಕೇಂದ್ರದ ಅಧ್ಯಕ್ಷರು ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಂದಗಿ ಈಶ್ವರ ಖಂಡ್ರೆ – ಸಾಗರ ಖಂಡ್ರೆ ನಿರಂತರ ಪ್ರಯತ್ನದ ಫಲ: ಬೀದರ್ ಜಿಲ್ಲೆಯ ರೈತರಿಗೆ 246 ಕೋಟಿ ರೂ. ಅತ್ಯಧಿಕ ಬೆಳೆ ವಿಮೆ ಪರಿಹಾರ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಲ್ಲ ಉಚಿತ ಪ್ತಯಾಣದ ಸೌಲಭ್ಯ..!ಉತ್ತಮ ಸಮಾಜಕ್ಕೆ ಆರೋಗ್ಯವಂತ ಜನರೇ ಆಸ್ತಿ:  ವಿಜಯಕುಮಾರಜಿಲ್ಲೆಯಲ್ಲಿ ನಿರಂತರ ಮಳೆ: ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಲು ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಸೂಚನೆಮಕ್ಕಳಲ್ಲಿ ವೈಜ್ಞಾನಿಕ ಮೌಲ್ಯಗಳ ಜಾಗೃತಿ ಮೂಡಿಸುವಲ್ಲಿ,ಪಾಲಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು : ಡಾ.ಎ.ಎಸ್. ಕಿರಣ ಕುಮಾರಸಿಎಂ ನೇತೃತ್ವದಲ್ಲಿ ಕಾಮಗಾರಿಗಳ ಉದ್ಘಾಟನೆ: ಶಾಸಕ ನಾರಾ ಭರತ್ ರೆಡ್ಡಿಯೋಗದಿAದ ರೋಗಮುಕ್ತ ಜೀವನ ಸಾಧ್ಯ: ಆಶಾಲತಾಬಳ್ಳಾರಿ ಜಿಲ್ಲೆಯಲ್ಲಿ ಬೃಹತ್ ಲೋಕ್ ಅದಾಲತ್‌ಗಳ ಸರಣಿ ಮತ್ತು ‘ಸಮಾಧಾನ ಸಮಾರೋಹ' ಆಂದೋಲನ: ನ್ಯಾ.ಸಿದ್ಧಲಿಂಗ ಪ್ರಭುಬಳ್ಳಾರಿ ಮಹಾನಗರ ಪಾಲಿಕೆ: ಶಿಥಿಲಗೊಂಡ ಕಟ್ಟಡ, ಕಾಂಪೌAಡ್, ಗೋಡೆ ಕಂಡುಬAದಲ್ಲಿ ಮಾಹಿತಿ ನೀಡಲು ಮನವಿ