ಮಹಾಲಿಂಗಪುರ, ಸೆ.೯: ಶ್ರೀ ಮುರುಗೇಶ ಆರ್. ನಿರಾಣಿ ಅವರ ಹುಟ್ಟುಹಬ್ಬದ ಪ್ರಯುಕ್ತ ಎಂ.ಆರ್.ಎನ್. (ನಿರಾಣಿ) ಫೌಂಡೇಶನ್, ಲಯನ್ಸ್ ಕ್ಲಬ್ ಮಹಾಲಿಂಗಪುರ ಗ್ರೀನ್ ಚೇನ್ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ನಗರದ ಕೆಂಗೇರಿಮಡ್ಡಿ ಸಾಯಿಬಾಬಾ ದೇವಸ್ಥಾನದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆಯಿತು.
ಶಿಬಿರದಲ್ಲಿ ನರರೋಗ, ಹೃದಯರೋಗ ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆ ನಡೆಸಿ, ಅಗತ್ಯವಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಹಾಗೂ ಮುಂದಿನ ಚಿಕಿತ್ಸೆಯ ಕುರಿತು ತಜ್ಞ ವೈದ್ಯರಿಂದ ಸಲಹೆ ಮತ್ತು ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ತಾಳಿಕೋಟಿ, “ಆರ್ಥಿಕ ತೊಂದರೆಯಿಂದಾಗಿ ಯಾವುದೇ ಬಡ ವ್ಯಕ್ತಿ ಚಿಕಿತ್ಸೆಯಿಂದ ವಂಚಿತನಾಗಬಾರದು. ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ಸೇವೆ ದೊರಕಬೇಕು ಎಂಬ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದರು.
ಶೇಖರ ಅಂಗಡಿ ಮಾತನಾಡಿ, “ಸುತ್ತಮುತ್ತಲಿನ ಗ್ರಾಮಗಳ ಜನರು ದೂರದ ನಗರಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಕ?. ಅವರ ಬಳಿಗೇ ತಜ್ಞ ವೈದ್ಯರನ್ನು ಕರೆತಂದು ತಪಾಸಣೆ ಮಾಡುತ್ತಿರುವುದು ಉತ್ತಮ ಕಾರ್ಯ.ಅಗತ್ಯವಿರುವ ರೋಗಿಗಳಿಗೆ ಮುಂದಿನ ಚಿಕಿತ್ಸೆಯಲ್ಲಿಯೂ ಸಹಕಾರ ನೀಡಲಾಗುವುದು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶೈಲಾ ಶೆಟ್ಟರ, ಪ್ರಶಾಂತ ಅಂಗಡಿ,ಶ್ರೀಶೈಲ ಉಳ್ಳಾಗಡ್ಡಿ, ಶ್ರೀಶೈಲ ವಜ್ಜರಮಟ್ಟಿ, ಶ್ರೀಶೈಲ ಹಿಪ್ಪರಗಿ,ಪರಶುರಾಮ ಅಮರಾವತಿ, ಮಹಾಲಿಂಗ ಶಿವನಿಗೆ, ಸೋಮು ಸಂಶಿ, ರಮೇಶ ಶೆಟ್ಟರ, ಮಹಾಲಿಂಗ ನರಗಟ್ಟಿ, ಸಂತೋ? ತಾಳಿಕೋಟಿ, ಕಿರಣ ಸಣ್ಣಕ್ಕಿ, ಶಶಿಧರ ಉಳೆಗಡ್ಡಿ, ಮಹಾಂತೇಶ ತೀರಕನ್ನವರ, ರೋಹಿತ್ ಅಂಬಿ, ಹುಚ್ಚೇಶ ವಡ್ಡರ, ಸಿದ್ದು ನಕಾತಿ, ವಿವೇಕ ಢಪಳಾಪುರ,ಮಹಾನಂದ ತಾಳಿಕೋಟಿ, ಪೂಜಾ ಅಂಗಡಿ, ಸುಕನ್ಯಾ ನಕಾತಿ, ಮಂಗಳ ತಾಳಿಕೋಟಿ ಹಾಗೂ ಶಶಿಕಲಾ ವಡ್ಡರ ಉಪಸ್ಥಿತರಿದ್ದರು.
ಕೆಂಗೇರಿಮಡ್ಡಿ ಸಮಾಜದ ಹಿರಿಯರು ಹಾಗೂ ಸುತ್ತಮುತ್ತಲಿನ ಎಲ್ಲ ಹಳ್ಳಿಗಳ ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.