ಬೈಲಹೊಂಗಲ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ
ಅನಿಗೋಳ ವಲಯದ ಸರಕಾರಿ ಪ್ರೌಢ ಶಾಲೆ ಹೈಸ್ಕೂಲಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಎಂ ಪಿ ಬೋಳಶಟ್ಟಿ , ಉದ್ಘಾಟಕರಾಗಿ , ಸಂಪನ್ಮೂಲ ವ್ಯಕ್ತಿ ಶಾಲೆಯ ಮುಕ್ಯೋಪಾಧ್ಯಾಯರು ದೀಪ ಬೆಳಸುವ ಮೂಲಕ ಉದ್ಘಾಟನೆಗೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ನಯನಗರ ಪ್ರೌಢಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ನಾರಾಯಣ ಶ್ರೀರಂಗ ನಲವಡೆ ಮಕ್ಕಳಿಗೆ ದುಷ್ಟಗಳ ಕಾರ್ಯಗಳ ಬಗ್ಗೆ ಮತ್ತು ಮಧ್ಯವಸನದ ಬಗ್ಗೆ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕರಾದ ಜಗದೀಶ ಕುಂಬಾರ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕ ಮಾತನಾಡಿದರು ಹಾಗೂ ಶಾಲೆಯ ಸಹ ಶಿಕ್ಷಕರು,ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
