Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಗೃಹಲಕ್ಷ್ಮಿ ಹಣದಲ್ಲಿ ಸ್ವಾವಲಂಬನೆ, ಆರೋಗ್ಯ ರಕ್ಷಣೆ: ಫಲಾನುಭವಿಗಳೊಂದಿಗೆ ಸಂವಾದ

ಸಿರುಗುಪ್ಪ19: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ ₹2,000 ಸಹಾಯಧನದ ಸದ್ಬಳಕೆ ಕುರಿತು ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ  ಕಚೇರಿಯಲ್ಲಿ ಬುಧವಾರ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಫಲಾನುಭವಿಗಳು, ಯೋಜನೆಯ ಹಣ ತಮ್ಮ ಬದುಕಿಗೆ ಹೇಗೆ ಆಸರೆಯಾಗಿದೆ ಎಂಬುದನ್ನು ಮನಬಿಚ್ಚಿ ಹಂಚಿಕೊಂಡರು.
ಸಂವಾದದಲ್ಲಿ ಮಾತನಾಡಿದ ಫಲಾನುಭವಿಗಳು, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಉಳಿತಾಯ ಮಾಡಿ ಹಾಗೂ ನಿತ್ಯದ ಅಗತ್ಯಗಳಿಗೆ ಬಳಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಿರುವ ಯಶೋಗಾಥೆಗಳನ್ನು ವಿವರಿಸಿದರು. ಕೆಲವರು ಈ ಹಣದಿಂದ ಟೀ ಸ್ಟಾಲು, ಕಿರಾಣಿ ಅಂಗಡಿ ಹಾಗೂ ಬಟ್ಟೆ ಅಂಗಡಿಗಳನ್ನು ತೆರೆದು ಸ್ವ-ಉದ್ಯೋಗ ಕಂಡುಕೊಂಡಿದ್ದರೆ, ಮತ್ತೆ ಕೆಲವರು ಕುಟುಂಬದ ನಿರ್ವಹಣೆಗಾಗಿ ಮನೆ ಬಾಡಿಗೆ ಕಟ್ಟಲು, ಮನೆಯ ಗೃಹಬಳಕೆ ವಸ್ತುಗಳ ಖರೀದಿಗೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಇನ್ನೂ ಹಲವು ಕುಟುಂಬಗಳಿಗೆ ಈ ಹಣ ಸಂಜೀವಿನಿಯಂತೆ ಕೆಲಸ ಮಾಡಿದ್ದು, ಪಾರ್ಶ್ವವಾಯು ಪೀಡಿತರ ಮಾತ್ರೆ ಹಾಗೂ ಔಷಧೋಪಚಾರ, ಕಣ್ಣಿನ ಚಿಕಿತ್ಸೆ, ಥೈರಾಯ್ಡ್ ಮತ್ತು ಕಿಡ್ನಿ ಸ್ಟೋನ್ ಚಿಕಿತ್ಸೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳ ವೆಚ್ಚ ಭರಿಸಲು ನೆರವಾಗಿದೆ. ಇದರೊಂದಿಗೆ ಹಿರಿಯರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಹಾಗೂ ಅಂಧರಿಗೆ ಆಶ್ರಯ ಕಲ್ಪಿಸುವಂತಹ ಮಾನವೀಯ ಕಾರ್ಯಗಳಿಗೂ ಈ ಹಣ ಸದ್ಬಳಕೆಯಾಗುತ್ತಿರುವುದು ಸಂವಾದದಲ್ಲಿ ಗಮನ ಸೆಳೆಯಿತು.
ಶಿಶು ಯೋಜನಾಭಿವೃದ್ದಿ ಅಧಿಕಾರಿ ಜಿ.ಪ್ರದೀಪ್ ಮಾತನಾಡಿ,  ತಾಲ್ಲೂಕಿನ ಗೃಹಲಕ್ಷ್ಮಿ ಯೋಜನೆಯ ಪ್ರಗತಿಯ ಅಂಕಿಅಂಶಗಳ ಮಾಹಿತಿಯನ್ನೂ ಹಂಚಿಕೊಳ್ಳಲಾಯಿತು. ಅಕ್ಟೋಬರ್-2026ರ ವರದಿಯಂತೆ ಸಿರುಗುಪ್ಪ ತಾಲ್ಲೂಕಿನಲ್ಲಿ ಒಟ್ಟು 66,810 ಅರ್ಹ ಫಲಾನುಭವಿಗಳಿದ್ದು, ಈ ಪೈಕಿ 63,573 ಫಲಾನುಭವಿಗಳಿಗೆ ₹12.71 ಕೋಟಿ ವೆಚ್ಚದಲ್ಲಿ ಹಣ ಪಾವತಿಸುವ ಮೂಲಕ ಶೇ.95.15ರಷ್ಟು ಪ್ರಗತಿ ಸಾಧಿಸಲಾಗಿದೆ. ಉಳಿದಂತೆ 520 ಮಂದಿ ಆದಾಯ ತೆರಿಗೆ/ಜಿಎಸ್ಟಿ ಪಾವತಿದಾರರಾಗಿದ್ದು, 223 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣ ಹಣ ಜಮೆಯಾಗಿಲ್ಲ ಎಂದರು.
ಯೋಜನೆ ಆರಂಭವಾದ ಆಗಸ್ಟ್-2023 ರಿಂದ ಅಕ್ಟೋಬರ್-2026ರ ವರೆಗೆ ಸಿರುಗುಪ್ಪ ತಾಲ್ಲೂಕಿನಲ್ಲಿ ಒಟ್ಟು 21,33,280 ಫಲಾನುಭವಿಗಳಿಗೆ ಒಟ್ಟು ₹426,65,60,000 (ಸುಮಾರು ₹426.65 ಕೋಟಿ) ವೆಚ್ಚದಲ್ಲಿ ಸಹಾಯಧನ ವಿತರಿಸಲಾಗಿದೆ. ಬ್ಯಾಂಕ್ ಖಾತೆ ಲಿಂಕ್ ಆಗದ ಫಲಾನುಭವಿಗಳು ಶೀಘ್ರವೇ ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಳ್ಳುವಂತೆ ಸೂಚಿಸಿದರು. 
ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಕರಿಬಸಪ್ಪ, ರೇಷ್ಮೆ ಕೃಷಿ ನಿಗಮದ ಸದಸ್ಯ ಎಚ್.ಗಣೇಶ ಮಾತನಾಡಿದರು.
ಮುಖಂಡ ಉಮೇಶ, ಸಿಡಿಪಿಒ ಕಚೇರಿಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳಾ ಫಲಾನುಭವಿಗಳು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೊಸ ಗೆಣಿಕೆಹಾಳ್ ಗ್ರಾಮದಲ್ಲಿ ನವಜಾತ ಶಿಶು ಆರೈಕೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮನೇಕಾರರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ: ಶಾಸಕ ಭರತ್ ರೆಡ್ಡಿ ಭರವಸೆನೇಕಾರರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ: ಶಾಸಕ ಭರತ್ ರೆಡ್ಡಿ ಭರವಸೆಒಂದು ದೇಶ ಹಲವು ವೈವಿಧ್ಯಮಯ ಸಂಸ್ಕೃತಿ  ಆದರ್ಶ ವಿದ್ಯಾಲಯದಲ್ಲಿ ಕಾಣಬಹುದು : ಡಾಕ್ಟರ್ ಶಿವಲಿಂಗಪ್ಪ ಹಂದಿಹಾಳ್ ಗೃಹಲಕ್ಷ್ಮಿ ಹಣದಲ್ಲಿ ಸ್ವಾವಲಂಬನೆ, ಆರೋಗ್ಯ ರಕ್ಷಣೆ: ಫಲಾನುಭವಿಗಳೊಂದಿಗೆ ಸಂವಾದ22ರಂದು ಡಾ.ಅಶೋಕಕುಮಾರ ಜಾಧವಗೆ ಸಿರಿಗನ್ನಡ ಸಾಧಕ ಪ್ರಶಸ್ತಿ ಪ್ರದಾನಹ್ಯಾಂಡ್‌ಬಾಲ್ ಕ್ರೀಡಾಕೂಟದಲ್ಲಿ ಅಥಣಿ ಜೆ.ಎ. ಕಾಲೇಜಿಗೆ ದ್ವಿಪ್ರಥಮ/ ಬಾಲಕ ಮತ್ತು ಬಾಲಕಿಯರ ತಂಡ ರಾಜ್ಯಮಟ್ಟಕ್ಕೆ ಆಯ್ಕೆಸನ್ಮಾರ್ಗ ಕಾಲೇಜಿನ ಫುಟ್‌ಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆನಾಗರಮಡುವು ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸಮುದಾಯ ಕಾಮಗಾರಿಗೆ ಜಿಲ್ಲಾ ಹಾಗೂ ತಾಲೂಕು ಐಇಸಿ ಸಂಯೋಜಕರ ಭೇಟಿ, ಪರಿಶೀಲನೆನ.೨೨ರಂದು ಸಂಗಮ ಸಿರಿ ಪ್ರಶಸ್ತಿ ಪ್ರದಾನ