ಹುಬ್ಬಳ್ಳಿ: ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿ?ನದ ಮೂಲಕ ನೀಡುವ "ಸಂಗಮ ಸಿರಿ" ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ನ.೨೨ರಂದು ಮುಂ.೧೦-೩೦ಕ್ಕೆ ಕೆಎಲ್ಇ ಸಂಸ್ಥೆಯ ಪಿ. ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಸೆಮಿನಾರ್ ಹಾಲ್ ನಲ್ಲಿ ನಡೆಯಲಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಹಿರಿಯ ವೈದ್ಯ ಸಾಹಿತಿಗಳಾದ ಡಾ. ದಯಾನಂದ ನೂಲಿ ಅವರಿಗೆ ಸಂಗಮ ಸಿರಿ ಪ್ರಶಸ್ತಿ ಹಾಗೂ ೧೦ ಸಾವಿರ ರೂ. ನಗದು ನೀಡಿ ಗೌರವಿಸಲಾಗುವುದು. ಸಮಾರಂಭದ ಸಾನಿಧ್ಯವನ್ನು ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದು ಕಾರ್ಯಕ್ರಮವನ್ನು ಕೆ ಎಲ್ ಇ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಶಂಕರಣ್ಣ ಮುನವಳ್ಳಿ ಉದ್ಘಾಟಿಸಲಿದ್ದಾರೆ. ಪ್ರತಿ?ನದ ಅಧ್ಯಕ್ಷ ಜಿ. ಬಿ .ಗೌಡಪ್ಪಗೊಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಕೆಎಂಸಿಯ ಡಾ. ಎಸ್.ವೈ.ಮುಲ್ಕಿಪಾಟೀಲ್ ಹಾಗೂ ಕನ್ನಡಪರ ಹೋರಾಟಗಾರ ವೆಂಕಟೇಶ ಮರೆಗುದ್ದಿ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ಪ್ರತಿ?ನದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಉಪಸ್ಥಿತಿಯಲ್ಲಿ ಪುರಸ್ಕೃತರ ಕುರಿತು ಕವಿ ಮಹಾಂತಪ್ಪ ನಂದೂರು ಮಾತನಾಡಲಿದ್ದು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಶಸ್ತಿಗಳನ್ನು ಕಳೆದ ಐದು ವ?ಗಳಿಂದ ನೀಡುತ್ತಾ ಬರಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಡಾ. ಪ್ರಭು ಗಂಜಿಹಾಳ ತಿಳಿಸಿದ್ದಾರೆ.