ಮುದ್ದೇಬಿಹಾಳ: ಸ್ಥಳೀಯ ಬಸವ ನಗರದಲ್ಲಿರುವ ಕ್ಷತ್ರೀಯ ಮರಾಠಾ ಸಮಾಜದ ಕುಲದೇವತೆಯಾದ ಶ್ರೀ ಅಂಬಾಭವಾನಿ ದೇವಸ್ಥಾನದ ವಾರ್ಷಿಕೋತ್ಸವವು ಭಕ್ತಿಭಾವದ ಸಂಪ್ರದಾಯದೊಂದಿಗೆ ವಿಜೃಂಭಣೆಯಿಂದ ಜರುಗಿತು.
ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ದೇವಿಗೆ ಮಹಾಭಿಷೇಕ, ಪುಷ್ಪಾರ್ಚನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ನಂತರ ಕಿಲ್ಲಾ ಗಲ್ಲಿಯ ಗುಂಡಪ್ಪನ ಬಾವಿಯಲ್ಲಿ ಗಂಗಸ್ಥಳ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತಲ್ಲದೇ ಸುಮಂಗಲೆಯರ ಕಳಸ, ಕುಂಭಮೇಳದ ಭವ್ಯ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ದೇವಸ್ಥಾನ ತಲುಪಿತು.
ನಂತರ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಶ್ರೀಮತಿ ಸುಜಾತ ಅಶೋಕ ಭೋಸಲೆ ಪರಿವಾರದವರಿಂದ ನೆರವೇರಿಸಲಾಯಿತು. ಇದೇ ಸಮಯದಲ್ಲಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.
ಶ್ರೀ ದೇವಿಯ ಭಕ್ತರಾದ ವಿಜಯಸಿಂಗ್ ಠಾಕೂರ್ ಅವರಿಂದ ಶ್ರೀ ದೇವಿಗೆ ಭಂಡಾರದ ತುಲಾಭಾರ ಸೇವೆ ಸಮರ್ಪಿಸಲಾಯಿತು.
ಈ ಸಮಯದಲ್ಲಿ ಮರಾಠಾ ಸಮಾಜದ ಅಧ್ಯಕ್ಷ ನೇತಾಜಿ ನಲವಡೆ ಮಾತನಾಡಿ, ನಮ್ಮ ಸಮಾಜದ ವತಿಯಿಂದ ಪ್ರತಿವರ್ಷವೂ ಶ್ರೀ ಅಂಬಾಭವಾನಿ ದೇವಿಯ ವಾರ್ಷಿಕೋತ್ಸವವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಶ್ರೀದೇವಿಯ ಭಕ್ತರಾದ ವಿಜಯಸಿಂಗ್ ಠಾಕೂರ್ ಅವರು ತಮ್ಮ ತೂಕದಷ್ಟು ಭಂಡಾರವನ್ನು ಶ್ರೀ ದೇವಿಗೆ ಸಮರ್ಪಿಸಿರುವುದು ಅವರ ಅಪಾರ ಭಕ್ತಿ ಹಾಗೂ ಶ್ರದ್ಧೆಗೆ ಸಾಕ್ಷಿಯಾಗಿದೆ. ಅವರ ಈ ಧಾರ್ಮಿಕ ಸೇವಾ ಕಾರ್ಯಕ್ಕೆ ಸಮಾಜ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ಇದೇ ಸಮಯದಲ್ಲಿ ವಿಜಯಸಿಂಗ್ ಠಾಕೂರ್ ಕುಟುಂಬದವರಿಗೆ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತಲ್ಲದೇ ವಿವಿದ ಗಣ್ಯಮಾನ್ಯರಿಗೂ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸಮಸ್ತ ಭಕ್ತಾದಿಗಳಿಗೆ ಮಹಾಪ್ರಸಾದ ಜರುಗಿತು.
ಈ ವಾರ್ಷಿಕೋತ್ಸವದಲ್ಲಿ ಸಮಾಜದ ಗೌರವಾಧ್ಯಕ್ಷ ರಾಜೇಂದ್ರ ಭೋಸಲೆ, ಉಪಾಧ್ಯಕ್ಷರಾದ ರಾಘವೇಂದ್ರ ಘಾಟಗೆ, ಅಣ್ಣಾಜಿ ಪವಾರ, ಕಾರ್ಯದರ್ಶಿ ಡಾ.ಕೃಷ್ಣಾಜೀ ಪವಾರ, ಖಜಾಂಚಿ ರಮೇಶ ಥೋರಾತ, ಲಕ್ಷ್ಮಣ ಘಾಟಗೆ, ರಾಘವೇಂದ್ರ ನಲವಡೆ, ಸಂತೋಷ ಚವ್ಹಾಣ, ಭೀಮಾಜೀ ಘಾಟಗೆ, ರವಿ ಭೋಸಲೆ, ಸಚಿನ್ ಸಾಳುಂಕೆ, ಸಂತೋಷ ಸಾಳುಂಕೆ, ಅಂಬಾಜಿ ಘಾಟಗೆ, ವಿನಾಯಕ ಘಾಟಗೆ, ಮಾರುತಿ ನಲವಡೆ, ಅನೀಲ್ ಜಾಧವ, ರಾಜು ಪವಾರ, ಶಂಕರ್ ಪವಾರ್, ವಿನಾಯಕ ಜಾಧವ, ಲೋಹೀತ್ ಘಾಟಗೆ, ಕಿರಣ್ ಪವಾರ, ರಜತ್ ಭೋಸಲೆ, ಅನಿಲ್ ಪವಾರ್, ಆಕಾಶ ಪವಾರ, ಗಜಾನನ ನಲವಡೆ, ತಾನಾಜಿ ಘೋರ್ಪಡೆ, ಪಾಂಡುರಂಗ ಥೋರಾತ, ಅಜಯ ಭೋಸಲೆ, ಹಾಗೂ ಗಣ್ಯರಾದ ಶಾಂತಗೌಡ ಪಾಟೀಲ್(ನಡಹಳ್ಳಿ), ಸಂಗನಗೌಡ ಬಿರಾದಾರ, ಸುನೀಲ್ ಜಾಧವ, ಶರಣು ಸಜ್ಜನ, ಪ್ರಭುರಾಜ ಕಲಬುರಗಿ, ವಿಕ್ರಮ್ ಓಸ್ವಾಲ್, ಮೋಹನಲಾಲ್ ಓಸ್ವಾಲ್, ಯಶವಂತ ಕಲಾಲ, ವಿಜಯಕುಮಾರ್ ಬಡಿಗೇರ, ತಾನಾಜಿ ಜಗತಾಪ, ಸಂಜಯ ಓಸ್ವಾಲ್, ಪುಟ್ಟು ಕುಲಕರ್ಣಿ, ಉದಯಸಿಂಗ್ ರಾಯಚೂರು, ಶರಣಗೌಡ ಮಾಡಗಿ, ಪುಟ್ಟು ಪಾಟೀಲ್, ಶೋಭಾ ಘಾಟಗೆ, ವಿಜಯಲಕ್ಷ್ಮಿ ನಲವಡೆ, ಚಂದ್ರಬಾಗ ಘಾಟಗೆ, ಪಾರ್ವತಿ ಸೇಲರ್, ಲಕ್ಷ್ಮೀ ನಲವಡೆ, ಸಂಗೀತಾ ಭೋಸಲೆ, ವಿದ್ಯಾ ನಲವಡೆ, ಮೇಘಾ ಭೋಸಲೆ, ಶಾರಧಾ ಘಾಟಗೆ, ಆಶಾ ಘಾಟಗೆ, ಮೊದಲಾದವರು ಪಾಲ್ಗೊಂಡಿದ್ದರು.
ಸಾಯಂಕಾಲ ೬ ಘಂಟೆಗೆ ಭಜನಾಮಂಡಳಿಯವರಿಂದ ಭಕ್ತಿಗೀತೆಗಳು, ಭಜನೆ ಜರುಗಿದವು.
ಅಖಂಡ ರಾತ್ರಿ ದೇವಸ್ಥಾನದಲ್ಲಿ ಅಂಬಾಭವಾನಿ ದೇವಿಯ ಪಾರಂಪರಿಕ ವಿಶೇಷ ಗೊಂಧಳ ಕಾರ್ಯಕ್ರಮ ಶ್ರೀ ದೇವಿಯ ಕಥೆಯೊಂದಿಗೆ ಜರುಗಿತು.