*ಪಾಲ್ತೂರು20:..ಶ್ರೀ ಸಂತ ಶಿಶುನಾಳ ಶರೀಪರ ತತ್ವಪದ ಜಾನಪದ ಸಂಸ್ಕೃತಿ ಕಲಾ ಟ್ರಸ್ಟ್ ರಿ. ಶಂಕರಬಂಡೆ ಇವರ ವತಿಯಿಂದ "ಗಡಿನಾಡು ಸಾಂಸ್ಕೃತಿಕ ಸಂಭ್ರಮ" ಕಾರ್ಯಕ್ರಮವನ್ನು ಸೋಮವಾರ ಕರೆ ಶಂಕರೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಪಂಚಾಂಗ ಕರ್ತ ಶ್ರೀ ನಾಗರಾಜ ಸ್ವಾಮಿ ಉದ್ಘಾಟಿಸಿದರು. ಮಾತನಾಡಿದ ಅವರು ಗಡಿನಾಡಿನಲ್ಲಿ ಸಂಗೀತ, ನಾಟಕ, ತತ್ವಪದಗಳು ಹಾಗೂ ಜಾನಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಂತೋಷದ ವಿಷಯವಾಗಿದೆ. ಇನ್ನೂ ಮುಂದೆ ಗಡಿಭಾಗದಲ್ಲಿ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ಹೊನ್ನರ ಸ್ವಾಮಿ, ನಾಗೇಂದ್ರ, ರಾಧಸ್ವಾಮಿ, ಬಿ. ಮಾನಯ್ಯ ಸೇರಿದಂತೆ ಹಲವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ತದನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿ. ನಾಗರಾಜ ಅವರ ತಂಡದಿಂದ ರಂಗಗೀತೆಗಳು, ಹೊನ್ನರಮ್ಮ ಅವರ ತಂಡದಿಂದ ತತ್ವಪದಗಳು, ಭೀಮನಗೌಡ ಅವರ ತಂಡದಿಂದ ವಚನ ಗಾಯನ ಪ್ರದರ್ಶನಗೊಂಡವು. ಕಲಾವಿದರ ಪ್ರದರ್ಶನಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಗಡಿನಾಡಿನ ಜನರಲ್ಲಿ ಕನ್ನಡ ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು.