ಯರಗಟ್ಟಿ: ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ದಿನನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ರಾಮದುರ್ಗ ಬಿಜೆಪಿ ಮಂಡಳ ಅಧ್ಯಕ್ಷ ಡಾ. ಕೆ. ವ್ಹಿ ಪಾಟೀಲ ಅಭಿಪ್ರಾಯಪಟ್ಟರು.ಪಟ್ಟಣದ ಸಾಯಿರಾಮ ಮಲ್ಟಿಸ್ಪೆ?ಲಿಟಿ ಆಸ್ಪತ್ರೆಯಲ್ಲಿ ಗಾಂಧಿಜೀ ಜಯಂತಿ ನಿಮಿತ್ಯ ಶುಕ್ರವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿದಿನ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು ಎಂದರು.
ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಂಡು ಜೀವನ ಶೈಲಿಸಾಧ್ಯವಾದ? ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದರು.ಈ ವೇಳೆ ಕಿವಿ, ಮೂಗು ಮತ್ತು ಗಂಟಲು, ನರ ಹಾಗೂ ಮನೋರೋಗ, ಚರ್ಮರೋಗ ಸೇರಿದಂತೆ ಎಲುಬು ಕಿಲಗಳ ತಪಾಸಣೆ ಮಾಡಲಾಯಿತು. ನರ ಹಾಗೂ ಮನೋ ವೈದ್ಯಕೀಯ ತಜ್ಞ ಡಾ. ಮಂಜುನಾಥ ಬಡಿಗೇರ, ಕಿವಿ ಮೂಗು ಗಂಟಲು ತಜ್ಞ ಡಾ. ಸಂಜನಾ ಪಾಟೀಲ, ಚರ್ಮರೋಗ ತಜ್ಞ ಡಾ. ಭಾಗ್ಯಶ್ರೀ ಅಂಕದವರ ಸೇರಿದಂತೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.