ರನ್ನ ಬೆಳಗಲಿ, ಆ.೧೮: ಬೇಧಭಾವ ಮರೆತು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯನ್ನು ಬಲಪಡಿಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ. ಕಾರಜೋಳ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ಶ್ರೀ ಬನದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಭಾರತೀಯ ಜನತಾ ಪಕ್ಷದ ಮುಧೋಳ ನಗರ ಹಾಗೂ ಗ್ರಾಮೀಣ ಮಂಡಲಗಳ ಆಶ್ರಯದಲ್ಲಿ ಆಯೋಜಿಸಿದ್ದ ಸಂಘಟನಾತ್ಮಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‌ಐಆರ್ (Sಠಿeಛಿiಚಿಟ Iಟಿಣeಟಿsive ಖevisioಟಿ) ಕಾರ್ಯವನ್ನು ಅತ್ಯಂತ ಕಾಳಜಿ ಹಾಗೂ ಜವಾಬ್ದಾರಿಯಿಂದ ಪೂರ್ಣಗೊಳಿಸಿದ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ ಅವರು, ಮುಧೋಳ ಮತಕ್ಷೇತ್ರದಲ್ಲಿ ಸುಮಾರು ೨೯,೯೨೮ ಮತದಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ರಾಜ್ಯಾದ್ಯಂತವೂ ಸುಮಾರು ಒಂದು ಕೋಟಿಗೂ ಅಧಿಕ ಮತದಾರರು ಅತಂತ್ರ ಸ್ಥಿತಿಯಲ್ಲಿದ್ದು, ಈ ಕುರಿತು ಪಕ್ಷದ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ರೈತರು ಸಂಕ?ಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರ ರೈತರ ಸಮಸ್ಯೆಗಳತ್ತ ಸಮರ್ಪಕವಾಗಿ ಗಮನಹರಿಸುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಪ್ರಸ್ತುತ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಎಲ್ಲೇ ಇದ್ದರೂ ಮುಧೋಳದ ಜನರ ಸೇವೆಯ ಬಗ್ಗೆ ನನ್ನ ಮನಸ್ಸು ಸದಾ ಮಿಡಿಯುತ್ತದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿರಬೇಕು, ಎಂದ ಕಾರಜೋಳ, ಮುಗಳಖೋಡ ಗ್ರಾಮದಲ್ಲಿ ಕಬ್ಬಿಣ ತಂತ್ರಜ್ಞಾನ ಕಾಲೇಜು ನಿರ್ಮಾಣಕ್ಕಾಗಿ ೩೦೦ ಎಕರೆ ಜಮೀನು ಮೀಸಲಿಡಲಾಗಿದೆ. ಮಹಿಳಾ ವಸತಿ ಪದವಿ ಮಹಾವಿದ್ಯಾಲಯ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಧರೆಪ್ಪ ಸಾಂಗ್ಲಿಕರ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಪಕ್ಷದ ಸಂಘಟನಾ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುವ ಸಮೂಹಕ್ಕೆ ಜನಸೇವೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದ್ದು, ಯುವಜನತೆ ದೇಶದ ಭವಿ?ದ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದರು.ಸದೃಢ ಆರೋಗ್ಯದೊಂದಿಗೆ ಸದೃಢ ರಾ? ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಬಸವರಾಜ ಮಳಲಿ ಅವರು ಎಸ್‌ಐಆರ್‌ಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಸಭೆಯಲ್ಲಿ ವಿವರಿಸಿದರು.
ಸಭೆಯಲ್ಲಿ ಸಿದ್ದುಗೌಡ ಪಾಟೀಲ, ಸದಾಶಿವ ಸಂಕ್ರಟ್ಟಿ, ಮಹಾಂತೇಶ ಹಿಟ್ಟಿನಮಠ, ಆರ್.ಟಿ. ಪಾಟೀಲ, ಸಂಗನಗೌಡ ಕಾತರಕಿ, ನಾಗಪ್ಪ ಅಂಬಿ, ಬಸಪ್ಪ ಬಿಳ್ಳೂರ, ಹಣಮಂತ ಇಟಾಣಿ, ಪಂಡಿತ ಪೂಜಾರ, ರಾಮನಗೌಡ ಪಾಟೀಲ, ಚಿಕ್ಕಪ್ಪ ನಾಯಕ, ಅಶೋಕ ಸಿದ್ದಾಪುರ, ಮಹಾಲಿಂಗ ಪುರಾಣಿಕ, ಲಕ್ಕಪ್ಪ ಮೆಡ್ಯಾಗೋಳ, ಸದಾಶಿವ ಇಟಕನ್ನವರ, ಭೀಮಶಿ ಹೊಸಮನಿ, ಪ್ರವೀಣ ಬರಮನಿ,ಶ್ರೀಶೈಲಗೌಡ ಪಾಟೀಲ, ದುಂಡಪ್ಪ ಕಣಬೂರ, ಮಲ್ಲಪ್ಪ ಕ್ವಾನ್ಯಾಗೋಳ, ಲಕ್ಷ್ಮಣ ಶಿರೋಳ, ಸದಾಶಿವ ಮುಧೋಳ, ನಿಂಗಪ್ಪ ಕಂಬಾರ, ನಂದು ಹೊಸಪೇಟಿ, ಶಂಕರ ಕಡಪಟ್ಟಿ, ದತ್ತಾತ್ರೇಯ ಕುಲಕರ್ಣಿ, ಶಿವಲಿಂಗ ಹುನ್ನೂರ, ಮಹಾದೇವ ಮುರನಾಳ, ಶಿವಪ್ಪ ಕಣಬೂರ, ಅರ್ಜುನ ಸರವಿ, ಮಹಾದೇವ ನೇಸುರ ಹಾಗೂ ಶಿವಪ್ಪ ಮಂಟೂರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.