ಘಟಪ್ರಭಾ. ಇಲ್ಲಿನ ರೇಲ್ವೆ ಸ್ಟೇಶನ್ ದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ವರ್ಗಾವಣೆ ಹೊಂದಿರುವ ಸಬ್ ಇನ್ಸ್ಪೆಕ್ಟರ್ ತ್ರಿಕಾಲ ತಿರಿಪಾಲ ಹಾಗೂ ಕಾನ್ಸಟೇಬಲ್ ಮಲ್ಲಿಕಾರ್ಜುನ ಇಂಗಳೆ ಅವರಿಗೆ ರೇಲ್ವೆ ಇಲಾಖೆಯ ಸಿಬ್ಬಂದಿಗಳು ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ ರಾಮ ಪ್ರಭಾತ ಶಾಖೆ, ಹಿರಿಯ ನಾಗರಿಕರ ಸಂಘಗಳ ಪರವಾಗಿ ಹೃತ್ಪೂರ್ವಕವಾಗಿ ಸನ್ಮಾನ ಮಾಡಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ, ಹಿರಿಯರಾದ ಸುರೇಶ್ ಪಾಟೀಲ ಭೂಪಾಲ ಖೆಮಲಾಪುರೆ, ಶ್ರೀಕಾಂತ ಬಿ ಕುಲಕರ್ಣಿ, ಬಸವರಾಜ ಬೆಳ್ಳಣ್ಣವರ, ಸುಭಾಸ ಗಾಯಕವಾಡ, ಮಲ್ಲಪ್ಪಾ ಹುಕ್ಕೇರಿ, ಸುಭಾಸ ದಡ್ಡೀಕರ, ಕೆಂಚಪ್ಪಾ ನಾಯಿಕ ಆನಂದ ದೇಶಪಾಂಡೆ, ಡಾ ಕಿರಣ ವಾಲಿ, ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿ ಶುಭ ಹಾರೈಸಿದರು.
