EAr : ವಾಲ್ಮೀಕಿ ನಿಗಮದ ಹಣವನ್ನು ನುಂಗಿ ನೀರು ಕುಡಿದ ಸಿದ್ರಾಮಯ್ಯ ಸರ್ಕಾರದ ಬಿ. ನಾಗೇಂದ್ರ ರವರ ವಿರುದ್ಧ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಅಮಾನತ್ತು ಗೊಳಿಸುವಂತೆ ಉಗ್ರವಾಗಿ ಹೋರಾಟ ನಡೆಸಿದರು, ಡಿಕೆಶಿ ಸರ್ಕಾರ ಇಂತಹ ಆರೋಪ ಹೊತ್ತ ಸಚಿವರನ್ನು ಮತ್ತೆ ಇನ್ನೊಂದು ಇಲಾಖೆಯ ಜವಾಬ್ದಾರಿ ಕೊಡೋದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಸಚಿವರು ಅಪ್ಪಸಾಹೇಬ್ ಪಟ್ಟಣಶೆಟ್ಟಿ ಬಳ್ಳೊಳ್ಳಿ ಗ್ರಾಮದ ತಮ್ಮ್ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಈಗಾಗಲೇ ಒಂದು ಸಮುದಾಯದ ಹಣ ನುಂಗಿ ನೀರು ಕುಡಿದದ್ದು ಸಾಬೀತಾಗಿದ್ದರು, ಇಂತಹ ವ್ಯಕ್ತಿಗೆ ಇನ್ನೊಂದು ಇಲಾಖೆ ಕೊಡೋದು ಅಂದರೆ ಮಂಗನ ಕೈಲಿ ಮಾಣಿಕ್ಯ ಕೊಟ್ಟು ಆಟ ಆಡಿದಂತೆ ಎಂದರು, ಬಡವರ ಪರ ಕಾಳಜಿ ವಹಿಸದೆ ತಮ್ಮದೇ ದರ್ಪ ಶಾಹಿ ಆಡಳಿತ ನಡೆಸೋದು, ಜನರಿಗೆ ಅತೃಪಿಕರ ಸರ್ಕಾರ ಇದಾಗಿದೆ, ಬರದ ಛಾಯೆ ಅವರಿಸಿದ್ದು ಅದನ್ನು ಲೆಕ್ಕಿಸದೆ ಮತ್ತೆ ಜನರ ಜೀವದ ಜ್ಯೋತೆ ಚಲ್ಲಾಟ ಆಡುತ್ತಿದೆ ಎಂದರು, ಕೂಡಲೇ ರಾಜಪಾಲರು ಸಿ.ಬಿ.ಆಯ್ ತನಿಖೆಗೆ ಅನುಮತಿ ನೀಡಿ, ಇಂತಹ ಲೂಟಿಕೋರರಿಗೆ ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದರು.