ಬೈಲಹೊಂಗಲ.ದೇಶದ ವಾಸಿಯಾದ ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಮನೆಯ ಮಕ್ಕಳ ಹಾಗೆ ಪೊಸಿಸಿ ಬೆಳೆಸಿದರೆ ನಮ್ಮ ದೇಶದ ಪರಿಸರ ಉತ್ತಮವಾಗಿ ಬೆಳೆದು ಮಾನವನ ಅರೋಗ್ಯ ಉತ್ತಮವಾಗಿರಲು ಸಹಕಾರಿ ಆಗುತ್ತದೆ ಎಂದು ಬೈಲಹೊಂಗಲ ಸಿವಿಲ್ ನ್ಯಾಯಾದೀಶರಾದ ರವಿ ಬಿ ಚವ್ಹಾಣ ಹೇಳಿದರು.
ಅವರು ನಗರದ ಕೋರ್ಟ್ ಆವರಣದಲ್ಲಿ ಶುಕ್ರವಾರದಂದು ಬೈಲಹೊಂಗಲ ಕಾನೂನು ಸೇವಾ ಸಮಿತಿ, ಬೈಲಹೊಂಗಲ ವಕೀಲರ ಸಂಘ, ಅರಣ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕೋರ್ಟ್ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನೇಸರಗಿ ವಲಯ ಅರಣ್ಯಾಧಿಕಾರಿಗಳಾದ ಪ್ರಸನ್ನ ಬೆಲ್ಲದ ಮಾತನಾಡಿ ಅರಣ್ಯ ರಕ್ಷಣೆ ಮತ್ತು ಪರಿಸರ ರಕ್ಷಣೆಗೆ ಎಲ್ಲ ಕಡೆಗಳಲ್ಲಿ ಸಸಿ ನೆಡುವ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಸಹಕಾರ ನೀಡುತ್ತಿದ್ದು ಇದರ ಸದುಪಯೋಗ ಸಾರ್ವಜನಿಕರು ಉಚಿತ ಸಸಿಗಳನ್ನು ಪಡೆದು ನೆಟ್ಟು ಪೊಸಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ದಿವಾಣಿ ನ್ಯಾಯಾದೀಶ ಶ್ರೀಮತಿ ರೋಹಿಣಿ ಬಸಾಪುರ, ಸರ್ಕಾರಿ ಅಭಿಯೋಜಕರಾದ ಕುಮಾರಿ ಸರೋಜಿನಿ ಬಟಕುರ್ಕಿನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ ಎಚ್ ಹೊಸಮನಿ, ಸರ್ಕಾರಿ ವಕೀಲ ರಮೇಶ ಕೊಲಕಾರ, ಸರ್ಕಾರಿ ಅಭಿಯೋಜಕ ಗುರುನಾಥ ಶಿರೂರ, ಉಪನ್ಯಾಸಕ ವೀರೇಶ ಅಂಡೋಲಿ, ಉಪ ಅರಣ್ಯ ಅಧಿಕಾರಿ ಸುರೇಶ ನಾಯ್ಕ, ಎನ್ ಎನ್ ಬಡವಣ್ಣವರ, ಶ್ರೀಮತಿ ಬಿ ಬಿ ದಳವಾಯಿ, ಶ್ರೀಮತಿ ಜೆ ಎಸ್ ಕುಲಕರ್ಣಿ, ಅಶೋಕ ಬಿಜಗತ್ತಿ, ನ್ಯಾಯವಾದಿಗಳ ಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ನೇಸರಗಿ ಕುವೆಂಪು ಮಾದರಿ ಪ್ರಾಥಮಿಕ ಶಾಲೆ, ಮಲ್ಲಾಪುರ ಕೆ ಎನ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ದೇಶನೂರ ಪ್ರಾಥಮಿಕ ಶಾಲೆಗಳಲ್ಲಿ ಸಸಿ ನೆಟ್ಟು, ಅನೇಕ ತರಹದ ಸಸಿಗಳನ್ನು ವಿದ್ಯಾರ್ಥಿಗಳಿಗೆ ನೀಡುವದರ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ನೇಸರಗಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷ, ಸದಸ್ಯರು, ವಿದ್ಯಾರ್ಥಿಗಳು, ನೇಸರಗಿ ಭಾಗದ ಮುಖಂಡರು ಭಾಗವಹಿಸಿದ್ದರು.
