Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು: ನಾಮದೇವ ಲಮಾಣಿ 

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ



ಮಹಾಲಿಂಗಪುರ, ಜೂನ್,೦೮: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಹಾಲಿಂಗಪುರ ಪುರಸಭೆಯ ವತಿಯಿಂದ ೭ನೇ ವಾರ್ಡ್‌ನ ಉದ್ಯಾನವನದಲ್ಲಿ ಗಿಡ ನೆಡುವ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ, ನಾಮದೇವ ಲಮಾಣಿ “ಇಂದು ಪರಿಸರ ಮಾಲಿನ್ಯ ಹಾಗೂ ಹವಾಮಾನ ವೈಪರೀತ್ಯಗಳು ವಿಶ್ವದಾದ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿವೆ. ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರೂ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಮರಗಳು ನಮಗೆ ಆಮ್ಲಜನಕ, ನೆರಳು ಹಾಗೂ ಆರೋಗ್ಯಕರ ವಾತಾವರಣವನ್ನು ಒದಗಿಸುತ್ತವೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಅಧಿಕಾರಿ ಎಸ್ ಎಂ ಪಾಟೀಲ “ನಗರ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಹಸಿರು ಪ್ರದೇಶಗಳು ಕಡಿಮೆಯಾಗುತ್ತಿವೆ. ಇದರಿಂದ ಉ?ಂಶ ಹೆಚ್ಚಳ, ನೀರಿನ ಕೊರತೆ ಮತ್ತು ವಾಯು ಮಾಲಿನ್ಯದಂತಹ ಸಮಸ್ಯೆಗಳು ಉಂಟಾಗುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗಿಡ ನೆಡುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಸಾರ್ವಜನಿಕರು ತಮ್ಮ ಮನೆ, ಶಾಲೆ ಹಾಗೂ ಕಚೇರಿ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆಸಬೇಕು” ಎಂದು ತಿಳಿಸಿದರು.
ಇನ್ನೋರ್ವ ಅಧಿಕಾರಿ ರವಿ ಹಲಸಪ್ಪಗೋಳ ಮಾತನಾಡಿ, “ವಿಶ್ವ ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗಬಾರದು. ಪ್ರತಿದಿನವೂ ಪರಿಸರದ ಬಗ್ಗೆ ಕಾಳಜಿ ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು.ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ನೀರಿನ ಸಂರಕ್ಷಣೆ ಹಾಗೂ ಸ್ವಚ್ಛತೆಯ ಮೂಲಕ ಪರಿಸರ ರಕ್ಷಣೆಗೆ ಕೈಜೋಡಿಸಬೇಕು. ಪ್ರತಿಯೊಬ್ಬರೂ ಕನಿ? ಒಂದು ಗಿಡವನ್ನು ನೆಟ್ಟು ಅದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರೆ ಹಸಿರು ಕ್ರಾಂತಿಗೆ ನಾಂದಿ ಹಾಡಿದಂತಾಗುತ್ತದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪುರಸಭೆಯ ಸಿಬ್ಬಂದಿಗಳಾದ ಪಿ ವಾಯ ಸೊನ್ನದ, ಎಂ ಎಂ ಮುಗಲಕ್ಹೋಡ, ಸಿ ಎಸ್ ಮಠಪತಿ, ರಾಜು ಹೂಗಾರ, ಮನೋಜ ಹಂಚಾಟೆ, ಸುನೀಲ ಬಬಲೇಶ್ವರ, ಎ ಆರ್ ಸಣ್ಣಕ್ಕಿ,ಪಿ ಡಿ ನಾಗನೂರ, ಲಖನ ,ವಿ ಸಿ ಹವಾಲ್ದಾರ, ಮಹಾಲಿಂಗ ಗಸ್ತಿ, ರಾಮು ಮಾಂಗ,ರಾಜೇಶ್ವರಿ ಸೊರಗಂವಿ, ಪ್ರೀತಿ ಹುಲಕುಂದ, ಮಂಜುಳ ಬಂಡಿವಡ್ಡರ ,ಕಾಂತು ಹಡಪದ, ಈರಣ್ಣ ಕೊಪ್ಪದ, ಚಂದ್ರು ಚಿತ್ತರಗಿ, ಜ್ಯೋತಿ ಮೇಟಿ , ಶ್ರೀದೇವಿ ಘೋರ್ಪಡೆ, ಗೀತಾ ಜಂಬಗಿ, ಕವಿತಾ ಜಿಡ್ಡಿಮನಿ ,ಭಾಗವಹಿಸಿದ್ದರು.ಬಳಿಕ ಉದ್ಯಾನವನದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪವನ್ನು ಎಲ್ಲರೂ ಸ್ವೀಕರಿಸಿದರು.ಕಾರ್ಯಕ್ರಮವು ಪರಿಸರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಥಣಿಯಲ್ಲಿ ಅದ್ದೂರಿಯಾಗಿ ವಿಶ್ವ ಯೋಗ ದಿನಾಚರಣೆ ಆಚರಣೆಗೆ ಸಿದ್ಧತೆ: ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಪೂರ್ವಭಾವಿ ಸಭೆಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸ್ವಾಗತ; ಈರಣ್ಣಾ ಕಡಾಡಿ. ನೇಸರಗಿ ಜಿ ಪಂ ಕ್ಷೇತ್ರದ ಅನೇಕ ಕಾರ್ಯಕರ್ತರಿಂದ ಸಚಿವ ಜಾರಕಿಹೊಳಿ ಅವರಿಗೆ ಸತ್ಕಾರ. ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯರಸಗೊಬ್ಬರ ಮಗಳಿಗೆಗಳಿಗೆ ಕೃಷಿ ಅಧಿಕಾರಿ ಭೇಟಿ ಪರಿಶೀಲನೆ*ಮುಳಗಡೆ ಸಂತ್ರಸ್ತರ ಧರಣೆಗೆ : ತಾಲೂಕಿನ ಮಠಾದೀಶರ ಬೆಂಬಲ ಹೆಸ್ಕಾಂ ೧೧೦/೧೧ ಕೆವಿ ಹೊಸ ಪ್ರಸರಣ ಘಟಕದ ೨೧ ಕೋಟಿ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ವಿದ್ಯಾಧರ ಸವದಿ.ಪಾಂಡುರಂಗ ಮಾರುತಿ ಹವಾಲ್ದಾರ ಅವಿರೋಧ ಆಯ್ಕೆವಿಶ್ವ ಪರಿಸರ ದಿನಾಚರಣೆ ಮತ್ತು "ಬೇಟೆ ನಾಯಿಗಳ ಕೋಟೆ ಮುದುವೊಳಲು" ಎಂಬ ಯೋಜನೆಯಡಿ ಕಲಾ ಅಂತರ್ಗತ ಕಲಿಕೆಯ ದೃಡೀಕರಣ