ಹುನಗುಂದ,ಜೂ.೧೩; ನಮ್ಮ ಪಿಂಜಾರ/ನದಾಫ್ ಸಂಘದ ಪದಾಧಿಕಾರಿಗಳು ಸಂಘಟಿತರಾಗಿ ಸಮಾಜದ ಜನರಿಗೆ ಮತ್ತು ವಿದ್ಯಾವಂತ ಬಡ ಮಕ್ಕಳಿಗೆ ಸಹಾಯ ಸಹಕಾರ ಮಾಡಬೇಕೆಂದು ರಾಜ್ಯ ಸಂಘಟನಾ ಕಾರ್‍ಯದರ್ಶಿ ಎಸ್.ಎಚ್. ಮುದಕವಿ ಹೇಳಿದರು.
ಇಲ್ಲಿನ ಖಾಸಗಿ ಕಟ್ಟಡದಲ್ಲಿ ಸಂಘದ ನೂತನ ತಾಲೂಕಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕ್ರೀಯಾಶೀಲರಾಗಿ ಕಾರ್‍ಯನಿರ್ವಹಿಸಬೇಕು. ಹೆಚ್ಚು ಹೆಚ್ಚು ಅಭಿವೃದ್ದಿ ಕಾರ್‍ಯಗಳನ್ನು ಮಾಡಿ ಬಡ ವ್ಯಕ್ತಿಗಳನ್ನು ಮೇಲೇತ್ತುವ ಕೆಲಸ ಮಾಡಬೇಕು ಎಂದರು.
ಸಂಘದ ತಾಲೂಕ ಅಧ್ಯಕ್ಷ ದಾವಲಸಾಬ ನದಾಫ ಮಾತನಾಡಿ ಪಟ್ಟಣ ಮತ್ತು ಗ್ರಾಮಗಳಲ್ಲಿರುವ ನಮ್ಮ ಸಮಾಜ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸಂಘಕ್ಕೆ ಸದಸ್ಯರನ್ನಾಗಿ ಮಾಡಿಕೊಂಡು ಸಂಘಟನೆ ಮಾಡಿ, ಸಮಾಜ ಎದುರಿಸುತ್ತಿರುವ ಸಾಕಷ್ಟು ಸವಾಲುಗಳಿಗೆ ಪರಿಹಾರ ಕಂಡು ಸರ್ಕಾರದ ಸೌಲಭ್ಯಗಳನ್ನು ಪಡೆಯೋಣ ಎಂದರು. ಜಿಲ್ಲಾ ಕಾರ್‍ಯದರ್ಶಿ ಮಹಿಬೂಬ ಪಿಂಜಾರ, ರಂಜಾನ್ ನದಾಫ್ ಮಾತನಾಡಿದರು.
ಸಂಘದ ಉಪಾಧ್ಯಕ್ಷೆ ಖಾಜೇಬಿ ನದಾಫ, ಯಮನೂರಸಾಬ ನದಾಫ್, ಮುರ್ತುಜಸಾಬ ಸಂದೀಮನಿ ಸೇರದಂತೆ ಸಂಘದ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಇದ್ದರು. ಸಮಾಜದ ಉಪಾಧ್ಯಕ್ಷ ಎ.ಆರ್. ನಡುವಿನಮನಿ ಕಾರ್‍ಯಕ್ರಮ ನಿರೂಪಿಸಿ ವಂದಿಸಿದರು.
