ರನ್ನ ಬೆಳಗಲಿ: ಜು.೮, ಸಮೀಪದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಬನಹಟ್ಟಿಯ ಶ್ರೀ ಪ್ರಭುಲಿಂಗೇಶ್ವರ ಅಂತರಾಷ್ಟ್ರೀಯ ಶಾಲೆ ಚಿಮ್ಮಡ ಶಾಲಾ ಅವರಣದಲ್ಲಿ ಸೋಮವಾರ ದಂದು ಅಂತರರಾಷ್ಟ್ರೀಯ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪಂಚ ಮಹಾಭೂತಗಳ ಒಳಗೊಂಡ ಪರಿಸರವು ನಮ್ಮ ಶರೀರದ ರಚನಾ ಕಾರ್ಯಕ್ಕೆ ಅದುವೇ ಮೂಲಾಧಾರವಾಗಿದೆ. ಆದ್ದರಿಂದ ಪರಿಸರದ ಜೀವ ರಾಶಿಯಲ್ಲಿ ಮನು?ನು ಕೂಡಾ ಒಂದು ಜೀವಗಳ ಗುಂಪು ಎಂದು ವಿದ್ಯಾಧರ ಸವದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿವಾನಂದ ಗಾಯಕ್ವಾಡ ಪರಿಸರದ ಪ್ರಾಮುಖ್ಯತೆಯನ್ನು ಕುರಿತು ವಿವರಿಸಿದರು.ಅಶೋಕ ರಾವಳ ,ಸೌಜನ್ಯ ಉರಭಿನ್ನವರ,ವಿವೇಕ ಜಂಬಗಿ,ಪೃಥ್ವಿರಾಜ ಪೂಜಾರಿ, ಪರಿಸರದ ಕುರಿತು ಮಾತನಾಡಿದರು.
ಹಿಪ್ಪೋ ಕ್ಯಾಂಪಸ್ ನಿರ್ದೇಶಕರು, ಸಂಯೋಜಕರು,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
