ಜಮಖಂಡಿ; ಟಿವಿ, ಮಾಧ್ಯಮ, ಚಲನಚಿತ್ರ, ಮೊಬೈಲ್ ಯುಗದಲ್ಲಿ ನಸಿಸಿ ಹೋಗುತ್ತಿರುವ ರಂಗಭೂಮಿ ಕಲೆಯನ್ನು ಉಳಿಸಲು ಎಲ್ಲರೂ ಪ್ರೊತ್ಸಾಹಿಸಬೇಕು ಎಂದು ಕಾಮಿಡಿ ಖಿಲಾಡಿಗಳು ಖ್ಯಾತಿಯ ಸುಜಾತಾ ಜೀವರ್ಗಿ ಮನವಿ ಮಾಡಿದರು. ಬುಧವಾರ ನಗರದ ಮುಧೋಳರಸ್ತೆ ಬಸವೇಶ್ವರ ಸರ್ಕಲ್ ಮೋರೆ ಪ್ಲಾಟ್‌ನಲ್ಲಿ ಅಳವಡಿಸಿರುವ ಪಂಚಾಕ್ಷರಿ ನಾಟ್ಯಸಂಘದ ಸೆಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ 20ಕ್ಕೂ ಹೆಚ್ಚು ನಾಟಕ ಕಂಪನಿಗಳಿದ್ದವು ಸಧ್ಯ 5-6 ಕಂಪನಿಗಳು ಮಾತ್ರ ನಡೆಯುತ್ತಿವೆ. ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸುವ ಅನೇಕ ಜನರಿದ್ದಾರೆ ಆದರೇ ನಿರೀಕ್ಷಿತ ಪ್ರಮಾಣದ ಪ್ರೊತ್ಸಾಹ ದೊರೆಯದ ಕಾರಣ ಕಂಪನಿಗಳು ದಿವಾಳಿಯಾಗುತ್ತಿವೆ ಎಂದು ಹೇಳಿದರು, ನಗರದಲ್ಲಿ ಪಂಚಾಕ್ಷರಿ ನಾಟ್ಯ ಸಂಘ ಜೀವರ್ಗಿಯವರಿಂದ ಜೀವರ್ಗಿ ರಾಜಣ್ಣ ನಿರ್ದೇಶನದ ಮುತ್ತಿನಂಥ ಅತ್ತಿಗೆ ಎಂಬ ಸುಂದರ ಹಾಸ್ಯ ಪ್ರಧಾನ ಸಾಮಾಜಿಕ ನಾಟಕ ಪ್ರದರ್ಶನ ದಿ. 18 ರಿಂದ ಏರ್ಪಡಿಸಲಾಗಿದೆ. ಪ್ರತಿದಿನ 2 ಆಟಗಳು ನಡೆಯಲಿದೆ. ಮಧ್ಯಾಹ್ನ 3 ಹಾಗೂ ಸಂಜೆ 6 ರಿಂದ ನಾಟಕ ಪ್ರದರ್ಶನ ಪ್ರಾರಂಭ ವಾಗಲಿದೆ. ಎಂದು ವಿವರಿಸಿದರು.
ಕಲಾವಿದರಾದ ರಾಘವೇಂದ್ರ ಮುಧೋಳ, ಶಿದ್ರಾಮ ತತ್ರಾಣಿ, ಮಾತನಾಡಿ ಮುತ್ತಿನಂಥ ಅತ್ತಿಗೆ ನಾಟಕ ಪರಿವಾರ ಸಮೇತರಾಗಿ ಬಂದು ನೋಡುವಂತಿದೆ ಯಾವುದೇ ಅಶ್ಲೀಲ ಸಂಭಾಷಣೆ, ನೃತ್ಯ ಮುಂತಾದ ಪ್ರಸಂಗಗಳು ನಾಟಕದಲ್ಲಿ ಇರುವದಿಲ್ಲ ಪ್ರತಿಯೊಬ್ಬರು ಕುಟುಂಬ ಸಮೇತರಾಗಿ ಬಂದು ನೋಡ ಬಹುದಾಗಿದೆ. ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಆನಂದಿಸಬೇಕು ಎಂದು ಮನವಿ ಮಾಡಿದರು. ನಾಟಕ ತಂಡದಲ್ಲಿ 30 ಜನ ಕಲಾವಿದರಿದ್ದಾರೆ. ಕಲಾ ಪ್ರೇಮಿಗಳ ಆಶೀರ್ವಾದ ಯಾವಾಗಲು ಇರಬೇಕು ಇದರಿಂದ ಕಲೆಗಳು ಉಳಿಯುತ್ತವೆ ಎಂದು ಹೇಳಿದರು. ಪ್ರತಿ ಟಿಕೇಟ್‌ಗೆ 100 ರೂ ನಿಗದಿ ಪಡಿಸಲಾಗಿದೆ ನಿಮ್ಮನ್ನು ರಂಜಿಸಲೆಂದೇ ನಗರಕ್ಕೆ ಆಗಮಿಸಿದ ತಂಡವನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು. ಅವಿನಾಶ ಅಕ್ಕಲಕೊಟೆ, ರಾಘವೇಂದ್ರ ಮುಧೋಳ, ಚೇತನ ಬಿರಾದಾರ, ಪುಟ್ಟರಾಜ ಕೊಡ್ಲಿ, ಶರಣು ಶೆಟ್ಟಿ, ಸಿದ್ಧಣ್ಣ ಕಮತಗಿ, ಮಹಂತೇಶ ಬಿರಾದಾರ ಮುಂತಾದವರಿದ್ದರು.
