Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಾ.ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ: ಕಾಂಗ್ರೆಸ್ ಮುಖಂಡ ಜೊತೆಪ್ಪ ಕಪರಟ್ಟಿ ಆಗ್ರಹ


ಮಹಾಲಿಂಗಪುರ:"ಮಾಜಿ ಸಚಿವೆ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಉಮಾಶ್ರೀ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡಬೇಕು ಎಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕುರುಬ ಸಮಾಜದ ಮುಖಂಡರಾದ ಜೊತೆಪ್ಪ ಕಪರಟ್ಟಿ ಅವರು ಆಗ್ರಹಿಸಿದ್ದಾರೆ."
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ಡಾ.ಉಮಾಶ್ರೀ " ಅವರು ತೇರದಾಳ ಮತಕ್ಷೇತ್ರದ ಅಭಿವೃದ್ಧಿಯ ಹರಿಕಾರಿಣಿ.ತಮ್ಮ ಶಾಸಕತ್ವದ ಅವಧಿಯಲ್ಲಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಅನುದಾನವನ್ನು ತರುವ ಮೂಲಕ ಕ್ಷೇತ್ರದ ಸವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಅವರ ಈ ಅಭಿವೃದ್ಧಿಪರ ಕಾಳಜಿಯನ್ನು ಗಮನಿಸಿ, ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರು ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು,"ಎಂದು ಒತ್ತಾಯಿಸಿದ್ದಾರೆ.
*ಅಭಿವೃದ್ಧಿಯ ಹರಿಕಾರಿಣಿ: ತಮ್ಮ ಆಡಳಿತಾವಧಿಯಲ್ಲಿ ಎಲ್ಲಾ ಸಮುದಾಯಗಳಿಗೆ ಸಮಾನವಾದ ಅನುದಾನ ಹಂಚಿಕೆ ಮಾಡುವ ಮೂಲಕ ’ಸರ್ವ ಜನಾಂಗದ ಶಾಂತಿಯ ತೋಟ’ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಕಳೆದ ಐದು ವರ್ಷಗಳ ಕಾಲ ಸಚಿವೆಯಾಗಿ ರಾಜ್ಯದ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ, ಆಡಳಿತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕ್ಷೇತ್ರದಲ್ಲಿ ಕಣ್ಣಿಗೆ ಕಾಣುವ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಪ್ರಿಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು "ಜೊತೆಪ್ಪ ಕಪರಟ್ಟಿ"ಅವರು ಶ್ಲಾಘಿಸಿದರು. 
ಎರಡು ಬಾರಿ ಶಾಸಕಿಯಾಗಿ, ಸಚಿವೆಯಾಗಿ ಮತ್ತು ಸದ್ಯ ವಿಧಾನ ಪರಿಷತ್ ಸದಸ್ಯೆಯಾಗಿ ಜನಸೇವೆ ಮಾಡುತ್ತಿರುವ ಅನುಭವಿ ರಾಜಕಾರಣಿಯಾದ ಶ್ರೀಮತಿ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಮತ್ತು ಸಮಯೋಚಿತವಾದ ನಿರ್ಧಾರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸಿಟಿ ಸೈಕ್ಲಿಂಗ್ ಲೀಗ್ಯರಗಟ್ಟಿ: ಖಾಯಂ ನ್ಯಾಯಾಲಯಕ್ಕೆ ಚಾಲನೆ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಮುಖ್ಯ ಕಾರ್ಯದರ್ಶಿಗಳ  ಆದೇಶ: ನೌಕರರ ಸಂಘದ ಹೋರಾಟಕ್ಕೆ ಸಂದ ಜಯ ಮಹೇಶ ಹುಬ್ಬಳ್ಳಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅವಹೇಳನಕಾರಿ ಹೇಳಿಕೆ: ರಾಸಿಂಗೆ ಉಚ್ಛಾಟನೆಗೆ ದಲಿತ ಮುಖಂಡರ ಆಗ್ರಹಎಸ್.ಡಿ.ಎಂ.ಸಿ ಯ ನೂತನ ಅಧ್ಯಕ್ಷರಾಗಿ ಹನಮಂತ ಮಡಿವಾಳರ ಅವಿರೋಧ ಆಯ್ಕೆ*ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿ ಮಾತು ಉಳಿಸಿಕೊಳ್ಳಿ:  ಮಹಾಂತೇಶ ಬಾಡಗಿ ಆಗ್ರಹಘಟಪ್ರಭಾ ರೇಲ್ವೆ  ಇಲಾಖೆ ಆಯ್  ಜಿ ತಿರಿಪಾಲ  ಮತ್ತು ಮಲ್ಲಿಕಾರ್ಜುನ ಇಂಗಳೆ  ಅವರಿಗೆ ಬೀಳ್ಕೊಡುಗೆ ಸಮಾರಂಭ.ಬಸ್ ನಿಲ್ದಾಣದಲ್ಲಿ ಯರ್ರಾ ಬಿರ್ರಿ ಖಾಸಗಿ ವಾಹನ ನಿಲುಗಡೆ : ಪ್ರಯಾಣಿಕರ ಪರದಾಟನಮ್ಮದು ಭಯೋತ್ಪಾದಕರಿಗೆ ಬಿರಿಯಾನಿಕೊಟ್ಟು ಸಲಹುವ ಸರ್ಕಾರವಲ್ಲ: ಸಿ.ಟಿ.ರವಿ.ಸೂರ್ಯ ನ್ಯೂಸ್ ಕನ್ನಡ ವಾರ್ಷಿಕೋತ್ಸವದಲ್ಲಿ ಹೊನ್ನುರಸ್ವಾಮಿ ಕೆ.ಟಿ. ಅವರಿಗೆ “ನಿರ್ಭೀತ ವರದಿಗಾರ ರತ್ನ” ಪ್ರಶಸ್ತಿ ಪ್ರದಾನ