Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ವೈದ್ಯರ ಮತ್ತು ಪತ್ರಿಕಾ ದಿನಾಚರಣೆ


ಯರಗಟ್ಟಿ,ಜು,೦೩: ಪತ್ರಕರ್ತರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ ಎಮ್.ವಿ.ಗುಂಡಪ್ಪಗೋಳ ಹೇಳಿದರು.
 ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಕಂದಾಯ, ವೈದ್ಯರ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ಕಣ್ಣು ಮತ್ತು ಕಿವಿಯಾಗಿದ್ದು, ಸತ್ಯವನ್ನು ನಿರ್ಭೀತಿಯಿಂದ ಜನರ ಮುಂದಿಡುವ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಸುದ್ದಿಗಳ ಪ್ರಸಾರದಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಆದ್ಯತೆ ಇರಬೇಕು ಎಂದು ಹೇಳಿದರು.
 ಚುನಾವಣೆ ಇಲಾಖೆ ಶೀರಸ್ತುದಾರ ಎಸ್.ಬಿ.ಕುಲಕರ್ಣಿ ಮಾತನಾಡಿ, ಪತ್ರಕರ್ತರು ರಾಜಕೀಯ, ಆರ್ಥಿಕ ಅಥವಾ ವೈಯಕ್ತಿಕ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ವರದಿ ಮಾಡಿದಾಗ ಮಾತ್ರ ಸಮಾಜದಲ್ಲಿ ಮಾಧ್ಯಮಗಳ ಮೇಲಿನ ವಿಶ್ವಾಸ ಉಳಿಯುತ್ತದೆ ಎಂದರು. ತಹಶೀಲ್ದಾರ ಎಮ್.ವಿ.ಗುಂಡಪ್ಪಗೋಳ, ವೈದ್ಯರು ಡಾ.ಸಚೀನ ಉಪ್ಪಿನ, ಡಾ.ವಿಜಯ ಬೆನಕಟ್ಟಿ ಹಾಗೂ ಪತ್ರಕರ್ತರು ಶಿವಾನಂದ ಬಳಿಗಾರ, ಕೆ.ಎಫ್.ನದಾಪ, ಈರಣ್ಣ ಹೂಲ್ಲೂರ, ರವಿಕುಮಾರ ಅಣ್ಣಿಗೇರಿ, ಫಿರೋಜ ಖಾದ್ರಿ, ಶಶಿಧರ ಪಾಟೀಲ, ಬಸವರಾಜ ದಳವಾಯಿ, ಮಹಾಂತೇಶ ಗಿಲಾಕಿ, ಜಗದೀಶ ಕೌಜಲಗಿ, ಮಲ್ಲೇಶ ದಳವಾಯಿ, ಪ್ರದೀಪ ಮಠಪತಿ ಅವರನ್ನು ಸನ್ಮಾನಿಸಿದರು.
 ಗ್ರಾಮ ಆಡಳಿತಾಧಿಕಾರಿ ಎಲ್.ಬಿ.ದಳವಾಯಿ, ಯಲ್ಲಪ್ಪ ಬಾಂಗಿ, ಕೆ.ಎಂ.ಗಡಕರಿ, ಸ್ವರೂಪ ಹಪ್ಪಳಿ, ಲಖನ್ ಪೂಜೇರಿ, ವಿಜಯ ಉಪ್ಪಿನ, ರಾಜು ಜೀವಾಪೂರ, ಮಂಜು ಬಡಿಗೇರ, ರವಿ ತಳವಾರ, ಎಲ್.ಸಿ.ತಳವಾರ ಹಾಗೂ ಸಿಬ್ಬಂದಿ, ಪತ್ರಕರ್ತರು ಇದ್ದರು. 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಲತವಾಡದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ: ಬಿಜೆಪಿ ಮುಖಂಡರಿಂದ ಮನವಿಮತದಾರರ ಪಟ್ಟಿ ಪರಿಷ್ಕರಣೆಗೆ ಸಹಾಯವಾಣಿ ಕೇಂದ್ರಗಳ ಸ್ಥಾಪನೆ - ಎಸಿ"ಧಾರ್ಮಿಕ ಆಚರಣೆಗಳಿಂದ ಮಾತ್ರ ಮನಸ್ಸಿನ ನೆಮ್ಮದಿ ಶಾಂತಿ ದೊರಕುತ್ತದೆ"ಬಸ್ ನಿಲ್ದಾಣದ ಗುಂಡಿ ಮುಚ್ಚಲು ಆಗ್ರಹಸ್ವ  ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮ.22 ವರ್ಷದ ಸೇನೆಯ ಸೇವೆ ಹೆಮ್ಮೆ ತಂದಿದೆ :ರಮೇಶ ನೀರಲಗಿ ಮಳೆಗಾಲದಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಿ ಅಧಿಕಾರಿಗಳಿಗೆ ಸೂಚನೆ ಮಳೆಗಾಲದಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಿ ಅಧಿಕಾರಿಗಳಿಗೆ ಸೂಚನೆ ಜುಲೈ 29ರೊಳಗೆ ಮತದಾರರ ವಿವರ ದೃಢೀಕರಿಸಿ: ಶಾಸಕ ಲಕ್ಷ್ಮಣ ಸವದಿಜನರ ಅರೋಗ್ಯ ರಕ್ಷಣೆ ವೈದ್ಯರ ಅದ್ಯಕರ್ತವ್ಯ :ಡಾ. ಪ್ರಕಾಶ ಹಳ್ಯಾಳ