*ಬಳ್ಳಾರಿ:22: ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ಬಳ್ಳಾರಿ ಒನ್ ತಾಲೂಕಿನ ಶ್ರೀರಾಂಪುರ ವಲಯದ ಶ್ರೀರಾಂಪುರ ಕಾರ್ಯಕ್ಷೇತ್ರದಲ್ಲಿ ಜನಮಂಗಲ ಕಾರ್ಯಕ್ರಮದಡಿ ಮಂಜೂರಾದ ವೀಲ್‌ಚೇರ್‌ನ್ನು ವಿಕಲಚೇತನ ಮಹಿಳೆ ದುರ್ಗಮ್ಮ ಅವರಿಗೆ ವಿತರಿಸಲಾಯಿತು.
ಬಳ್ಳಾರಿ ಜಿಲ್ಲೆಯ ಮಾನ್ಯ ನಿರ್ದೇಶಕರಾದ ರೋಹಿತಾಕ್ಷ ಅವರು ದುರ್ಗಮ್ಮ ಅವರಿಗೆ ವೀಲ್‌ಚೇರ್‌ನ್ನು ಹಸ್ತಾಂತರಿಸಿದರು. ಅಗತ್ಯವಿರುವ ವಿಕಲಚೇತನರಿಗೆ ನೆರವು ಒದಗಿಸುವ ಜನಮಂಗಲ ಕಾರ್ಯಕ್ರಮದ ಸಾಮಾಜಿಕ ಕಾಳಜಿ ಈ ಮೂಲಕ ಮತ್ತೊಮ್ಮೆ ವ್ಯಕ್ತವಾಯಿತು.
ಹಬ್ಬದ ದಿನದಂದೇ ಇಂತಹ ನೆರವು ದೊರೆತಿರುವುದು ತಮಗೆ ಬಹಳ ಸಂತೋಷ ತಂದಿದೆ ಎಂದು ದುರ್ಗಮ್ಮ ಹಾಗೂ ಕುಟುಂಬದವರು ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಒನ್ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಬಸವರಾಜ್ ಉಪಸ್ಥಿತರಿದ್ದರು.