ಬಳ್ಳಾರಿ. ಜೂ. 11: ಸಿಟಿ ವಲಯದ ಗಾಂಧಿನಗರ ಕಾರ್ಯಕ್ಷೇತ್ರದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪುಷ್ಟಾವತಿ ಮಾತನಾಡಿ ತಂಬಾಕು ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳು ಮತ್ತು ಹರಡುವ ಖಾಯಿಲೆಗಳು, ತಂಬಾಕು ಸೇವನೆಯನ್ನು ತಡಗಟ್ಟುವಿಕೆಯ ಕ್ರಮಗಳು, ಮಕ್ಕಳಲ್ಲಿ ಹೆಚ್ಚಿತ್ತಿರುವ ನೀಕೊಟಿನ ಸೇವನೆ ಮಾರಕ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗುತ್ತದೆ ಇತ್ತೀಚಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸೇರಿದಂತೆ ರಾಜ್ಯದಲ್ಲಿ ಹೆಚ್ಚು ಹೆಚ್ಚು ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ ಮೊದಲೇ ಹೇಳಿದಂತೆ ಇದಕ್ಕೆಲ್ಲ ಕಾರಣ ಮೂಲ ತಂಬಾಕು ಸೇವನೆ ಆಗಿದೆ ಕಾರಣ ಯುವಜನತೆ ಗುಟ್ಕಾ ಬಿಡಿ ಸಿಗರೇಟ್ ಸೇರಿದಂತೆ ತಂಬಾಕು ಸೇವನೆಯನ್ನು ತ್ಯಜಿಸಬೇಕು ಇದರಿಂದ ತನ್ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ಅವರು ಕರೆ ನೀಡಿದರು.
ಒಂದು ವೇಳೆ ಕ್ಯಾನ್ಸರ್ ಕಾಯಿಲೆಯ ಪ್ರಕರಣಗಳು ಕಂಡು ಬಂದಲ್ಲಿ ತಡ ಮಾಡದೆ ತಕ್ಷಣ ಜಿಲ್ಲಾ ಆಸ್ಪತ್ರೆ ಅಥವಾ ವಿಮ್ಸ್ ನಲ್ಲಿರುವ ಕ್ಯಾನ್ಸರ್ ಘಟಕಕ್ಕೆ ಭೇಟಿ ನೀಡಿ ಉತ್ತಮ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೌನೇಶ್ ಸೇರಿದಂತೆ ಇತರರಿದ್ದರು.
