ಗದಗ: ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ಗದಗ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ವೇರಿ ಗುಡ್ ಮಾರ್ನಿಂಗ್ ದಿನಪತ್ರಿಕೆ ಸಂಪಾದಕರಾದ ದೇವಪ್ಪ ಎನ್. ಲಿಂಗದಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ..
ಸಂಘದ ರಾಜ್ಯಾಧ್ಯಕ್ಷರಾದ ಶ. ಮಂಜುನಾಥ ಅವರ ನಿರ್ದೇಶನದ ಮೇರೆಗೆ ಸಂಘದ ರಾಜ್ಯ ಕಾರ್ಯದರ್ಶಿ ರಾಜು ಎಂ. ಹೆಬ್ಬಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪಾದಕರ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು..
ಖಜಾಂಚಿಯಾಗಿ ಚಕ್ರವರ್ತಿ ದಿನಪತ್ರಿಕೆ ಸಂಪಾದಕರಾದ ಎನ್.ಆರ್. ಭಾಂಡಗೆ, ಉಪಾಧ್ಯಕ್ಷರಾಗಿ ಗದಗ ಸಂಜೆ ದಿನಪತ್ರಿಕೆ ಸಂಪಾದಕರಾದ ರಮೇಶ ಭಜಂತ್ರಿ ಅವರು ಆಯ್ಕೆಯಾದರು..
ಆಯ್ಕೆ ಬಳಿಕ ಮೂವರೂ ಪದಾಧಿಕಾರಿಗಳಿಗೆ ಸನ್ಮಾನಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ರಾಜು ಎಂ. ಹೆಬ್ಬಳ್ಳಿ ಅವರು, ಈ ಸಂಘವು 1980 ರಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದೆ.
ಹೀಗಾಗಿ ಈ ಸಂಘವು ಪ್ರತಿ ಜಿಲ್ಲೆಯ ಘಟಕ ರಚನೆ ಮಾಡುತ್ತಿದೆ..
ಇಡೀ ದೇಶದಲ್ಲಿಯೇ ಸರ್ಕಾರವೊಂದು ಗೆಜೆಟ್ ಮೂಲಕ ಮಾನ್ಯತೆ ಪಡೆದ ಏಕೈಕ ಸಂಘ ಇದಾಗಿದೆ ಎಂದು ಹೇಳಿದರು.
ನೂತನ ಅಧ್ಯಕ್ಷ ದೇವಪ್ಪ ಅವರು ಮಾತನಾಡಿ, ಸರ್ಕಾರ ಮತ್ತು ವಾರ್ತಾ ಇಲಾಖೆಯಲ್ಲಿ ಮಾನ್ಯತೆ ಹೊಂದಿರುವ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘಕ್ಕೆ ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಸಂಪಾದಕರುಗಳಿಗೆ ಧನ್ಯವಾದಗಳು.
ಈ ಸಂಘವು ಯಾವುದೇ ಸಂಘಕ್ಕೆ ಪರ್ಯಾಯ ಅಲ್ಲ. ಆದರೆ, ಸಂಘಕ್ಕೆ ಯಾರೇ ಬಂದರೂ ಅವರಿಗೆ ಮುಕ್ತವಾಗಿ ಸ್ವಾಗತಿಸುತ್ತೇವೆ. ಪತ್ರಿಕೆಗಳ ಹಿತ ಕಾಪಾಡುವುದು ನಮ್ಮ ಮೂಲ ಉದ್ದೇಶ ಎಂದು ಹೇಳಿದರು.
ಸಭೆಯಲ್ಲಿ ನೂತನ ಖಜಾಂಚಿ ಎನ್.ಆರ್. ಭಾಂಡಗೆ, ಉಪಾಧ್ಯಕ್ಷ ರಮೇಶ ಭಜಂತ್ರಿ, ವಿಭಿನ್ನ ಬರಹ ದಿನಪತ್ರಿಕೆ ಸಂಪಾದಕರಾದ ಸಂತೋಷ ಕುರಿ ಸೇರಿ ಹಲವರಿದ್ದರು..