ರನ್ನ ಬೆಳಗಲಿ, ಸೆ. ೮: ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ’ಕವಿ ಚಕ್ರವರ್ತಿ ರನ್ನ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡಬೇಕು ಎಂದು ರನ್ನನ ಜನ್ಮಸ್ಥಳವಾದ ರನ್ನ ಬೆಳಗಲಿಯ ನಾಗರಿಕರು, ಸಾಹಿತಿಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದರು.ಪಟ್ಟಣದ ಶ್ರೀ ಬಂದ ಲಕ್ಷ್ಮಿ ದೇವಸ್ಥಾನದ ರನ್ನ ಸಾಂಸ್ಕೃತಿಕ ಭವನದಲ್ಲಿ ಇತ್ತೀಚಿಗೆ ನಡೆದ ’ಪ್ರಜಾ ಸೇವಾ ಆಂದೋಲನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಕುರಿತು ಶಾಸಕ ಆರ್.ಬಿ. ತಿಮ್ಮಾಪುರ ಅವರಿಗೆ ಮನವಿ ಸಲ್ಲಿಸಲಾಯಿತು.ಪಟ್ಟಣದ ನಾಗರಿಕರ ಪರವಾಗಿ ಮಾತನಾಡಿದ ಮುತ್ತಪ್ಪ ಅಂಗಡಿ, ಕವಿ ಚಕ್ರವರ್ತಿ ರನ್ನನು ಕನ್ನಡ ಸಾಹಿತ್ಯದ ಹೆಮ್ಮೆಯ ಕವಿಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿಯಲ್ಲೇ ಜನಿಸಿದ್ದಾರೆ. ಹಳಗನ್ನಡ ಸಾಹಿತ್ಯದಲ್ಲಿ ರನ್ನನ ಕೊಡುಗೆ ಅಪಾರವಾಗಿದ್ದು, ಅವರ ಕಾವ್ಯಪ್ರತಿಭೆ, ವೀರರಸದ ಅಭಿವ್ಯಕ್ತಿ ಹಾಗೂ ಶಕ್ತಿಯುತ ಭಾ?ಶೈಲಿ ಕನ್ನಡ ಸಾಹಿತ್ಯಕ್ಕೆ ವಿಶಿ? ಸ್ಥಾನ ನೀಡಿದೆ. ಜಿಲ್ಲಾಡಳಿತದ ಮಾಹಿತಿಯಲ್ಲಿಯೂ ರನ್ನನ ಜನ್ಮಸ್ಥಳ ರನ್ನ ಬೆಳಗಲಿ ಎಂದು ಉಲ್ಲೇಖಿಸಲಾಗಿದೆ.
ರನ್ನನ ಜನ್ಮಸ್ಥಳವಿರುವ ಜಿಲ್ಲೆಯ ವಿಶ್ವವಿದ್ಯಾಲಯಕ್ಕೆ ಅವರ ಹೆಸರಿಡುವುದು ಕೇವಲ ನಾಮಕರಣವಲ್ಲ; ಅದು ಕನ್ನಡ ಸಾಹಿತ್ಯ, ನಾಡು-ನುಡಿ ಮತ್ತು ಬಾಗಲಕೋಟೆ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆಗೆ ಸಲ್ಲಿಸುವ ಗೌರವವಾಗಿದೆ ಎಂದು ಅವರು ಹೇಳಿದರು.
ಜಮಖಂಡಿಯಲ್ಲಿ ಸ್ಥಾಪನೆಯಾದ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ’ಕವಿ ಚಕ್ರವರ್ತಿ ರನ್ನ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡುವ ಮೂಲಕ ರನ್ನನ ಸಾಹಿತ್ಯ ಮತ್ತು ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಮತ್ತ? ಅವಕಾಶ ಕಲ್ಪಿಸಬೇಕು. ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರನ್ನನ ಸಾಹಿತ್ಯವನ್ನು ವಿಶೇ?ವಾಗಿ ಪರಿಚಯಿಸುವ ಕಾರ್ಯಕ್ಕೂ ಇದು ಪ್ರೇರಣೆಯಾಗಲಿದೆ ಎಂದು ಅವರು ತಿಳಿಸಿದರು.
ಬಾಗಲಕೋಟೆ ವಿಶ್ವವಿದ್ಯಾಲಯದ ಅಧಿಕೃತ ಹೆಸರನ್ನು ’ಕವಿ ಚಕ್ರವರ್ತಿ ರನ್ನ ವಿಶ್ವವಿದ್ಯಾಲಯ’ ಎಂದು ಬದಲಾಯಿಸಲು ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಗಮನಕ್ಕೆ ವಿ?ಯವನ್ನು ತಂದು, ನಾಮಕರಣ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ಈರಣ್ಣ ಗಾಣಿಗೇರ, ಲಕ್ಷ್ಮಣ ಹಂಚಿನಾಳ, ಸಿದ್ದು ದೊಡಹಟ್ಟಿ, ಸಾಗರ ಹವಾಲ್ದಾರ, ಶಂಕರ ಅಮಾತಿ, ಶಿವು ಗಾಣಿಗೇರ, ಲಕ್ಷ್ಮಣ ಹಿಕಡಿ ಸೇರಿದಂತೆ ಹಲವರು ಮನವಿ ಪತ್ರ ಸಲ್ಲಿಸಿದರು.ಸರ್ಕಾರದ ಗಮನಕ್ಕೆ ತಂದು ಪ್ರಾಮಾಣಿಕ ಪ್ರಯತ್ನ: ಶಾಸಕ ತಿಮ್ಮಾಪುರಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಆರ್.ಬಿ. ತಿಮ್ಮಾಪುರ, ರನ್ನನ ಜನ್ಮಸ್ಥಳವಾದ ರನ್ನ ಬೆಳಗಲಿ ಪಟ್ಟಣದಲ್ಲಿ ರನ್ನ ವೈಭವ ಕಾರ್ಯಕ್ರಮವನ್ನು ಆಯೋಜಿಸಿ ಕವಿ ರನ್ನನಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಲಾಗಿದೆ. ಇದೀಗ ಸಾರ್ವಜನಿಕರ ಆಶಯದಂತೆ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ’ರನ್ನ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡುವ ಬೇಡಿಕೆಯನ್ನು ಪ್ರಾಮಾಣಿಕವಾಗಿ ಸರ್ಕಾರದ ಗಮನಕ್ಕೆ ತಂದು, ಈ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ಯೋಜನಾ ಪ್ರಾಧಿಕಾರದ ಮಹಾಂತೇಶ ಮಾಚಕನೂರ, ತಹಸೀಲ್ದಾರ್ ಚಿಕ್ಕಪ್ಪ ನಾಯಕ, ತಾಪಂ ಅಧಿಕಾರಿ ರಾಘವೇಂದ್ರ ಕಳ್ಳಿಮನಿ, ಪಪಂ ಮುಖ್ಯಾಧಿಕಾರಿ ಈರಣ ದಡ್ಡಿ, ಧರೆಪ್ಪ ಸಾಂಗ್ಲೀಕರ, ಶಿವನಗೌಡ ಪಾಟೀಲ, ಸದುಗೌಡ ಪಾಟೀಲ, ಪ್ರವೀಣ ಪಾಟೀಲ, ಸಂಗಪ್ಪ ಅಮಾತಿ, ಈರಪ್ಪ ಕಿತ್ತೂರ, ಮಹಾಲಿಂಗಪ್ಪ ಕೊನ್ನೂರ, ಯಮನಪ್ಪ ದೊಡಮನಿ, ಹನಮಂತ ಕಡಪಟ್ಟಿ, ಮುಬಾರಕ್ ಅತ್ತಾರ, ಶಿವಪ್ಪ ಡೊಳ್ಳಿ, ಮುತ್ತಪ್ಪ ಸನ್ನಟ್ಟಿ, ನೀಲಕಂಠ ಸೈದಾಪುರ, ಪ್ರಕಾಶ ಕೊನ್ನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸತೀಶ ಬೇವೂರ ಸ್ವಾಗತಿಸಿದರು. ಯೋಗ ಶಿಕ್ಷಕ ರಾಘವೇಂದ್ರ ನೀಲನ್ನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.