ಜಮಖಂಡಿ,13 : ನಗರದ ಬಿಎಲ್‌ಡಿಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಿಸಲಾಯಿತು. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆ ಅಪರಾಧ ವೆಂದು ಪರಿಗಣಿಸಲಾಗಿದ್ದು ಇಂಥಹ ಪದ್ಧತಿಯನ್ನು ಬೆಂಬಲಿಸಬಾರದು ಎಂದು ತಿಳುವಳಿಕೆ ನೀಡುವ ಮೂಲಕ ಪ್ರಮಾಣವಚನ ಬೋಧಿಸಲಾಯಿತು. ಕಾಲೇಜಿನ ದೈಹಿಕ ನಿರ್ದೇಶಕ ಪ್ರೊ. ಮಹಾದೇವ ಗಲಬಿ ಪ್ರಮಾಣವಚನ ಬೋಧಿಸಿದರು. ಉಪನ್ಯಾಸಕಿ ಪ್ರೊ.ಅಶ್ವಿನಿ ಅನಂತಪೂರ, ಪ್ರೊ.ಪ್ರೇಮಾನಂದ ಹಿರೇಮಠ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.
