ಇಂಡಿ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪಕ್ಷದ ಸ್ಥಳೀಯ ಕಾರ್ಯಕರ್ತರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷದ ಎಲ್ಲಹುದ್ದೆಗಳಿಗೆ ಹಾಗೂ ನಾಮನಿರ್ದೇಶಿತ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಸೋಮವಾರ ಸಾಯಂಕಾಲ ೪ಕ್ಕೆ ಇಂಡಿಯಿಂದ ೧೮ ಬಸ್, ೩೨ ಕಾರು, ೧೬ ಜೀಪುಗಳು ಮತ್ತು ರೈಲಿನಲ್ಲಿ ಅಂದಾಜು ೩೦೦ ಜನ ಸೇರಿ ಬೆಂಗಳೂರಿಗೆ ತೆರಳಿದ ಸಾವಿರಾರು ಕಾರ್ಯಕರ್ತರು ಮಂಗಳವಾರ ಬೆಳಗ್ಗೆ ಪ್ರತಿಭಟಿಸಿದರು. ನಂತರ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲೇ ಇದ್ದ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಅವರಿಗೆ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಸಲ್ಲಿಸಿದರು.
ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾದ ಕಾರ್ಯಕರ್ತರು ಸುಮಾರು ೧೦ ನಿಮಿಷ ಚರ್ಚಿಸಿ, ಇಂಡಿ ಕ್ಷೇತ್ರಕ್ಕೆ ೧೯೫೭ರಿಂದ ಇಲ್ಲಿವರೆಗೆ ಒಮ್ಮೆಯೂ ಸಚಿವ ಸ್ಥಾನ ದೊರೆತಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನೀವು ಕೇಳುತ್ತಿರುವುದು ಸರಿ ಇದೆ. ನಾನು ಹಾಗೂ ಸಿದ್ದರಾಮಯ್ಯ ಸಾಹೇಬರು ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರೆಂದು ಕಾಂಗ್ರೆಸ್ ಪಕ್ಷದ ಇಂಡಿ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಾಲ ತಳಕೇರಿ ದೂರವಾಣಿಯಲ್ಲಿ ತಿಳಿಸಿದ್ದಾರೆ.
ಮಹಿಳೆಯರಿಂದಲೂ ಪ್ರತಿಭಟನೆ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯರು ಸಹ ಪ್ರತಿಭಟನೆ ನಡೆಸಿ
ಇಂಡಿ: ಶಾಸಕ ಯಶವಂತರಾಯಗೌಡರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಬೆಂಗಳೂರಿನ ಕಾಂಗ್ರೆಸ್ ಕಚೇರಿ ಎದುರು ಪಕ್ಷದ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿಗಳ ಕಾಲಿಗೆ ಬಿದ್ದು ಇಂಡಿ ಕ್ಷೇತ್ರಕ್ಕೆ ಸ್ವಾತಂತ್ರ್ಯಾನಂತರ ಮಂತ್ರಿ ಸ್ಥಾನ ಸಿಕ್ಕಿಲ್ಲ. ಈ ಬಾರಿ ನೀವು ಸಚಿವ ಸ್ಥಾನ ನೀಡಲೇಬೇಕೆಂದು ಮನವಿ ಮಾಡಿಕೊಂಡರು. ನಂತರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಯಶವಂತರಾಯಗೌಡರು ನಮಗೂ ಬೇಕಾದವರು ನೋಡೋಣ ಎಂದು ಹೇಳಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
ಶಿವಯೋಗೆಪ್ಪ ಜೋತಗೊಂಡ, ಪ್ರಶಾಂತ ಕಾಳೆ, ಜಾವೀದ ಮೋಮಿನ್, ಬಿ.ಸಿ. ಸಾಹುಕಾರ, ಶ್ರೀಕಾಂತ
ಕೂಡಿಗನೂರ, ಅಜಿತ್ ಧನಶೆಟ್ಟಿ ಹಿರಿಯ ನ್ಯಾಯವಾದಿ ಸಿದ್ದಣ್ಣ ಬೂದಿಹಾಳ, ಡಿ.ಜೆ. ಜೋತಗೊಂಡ, ನೀಲಕಂಠಗೌಡ ಪಾಟೀಲ, ಜಟ್ಟೆಪ್ಪ ರವಳಿ, ಸದಾಶಿವ ಪ್ಯಾಟಿ, ರಂಜಾನ್ ವಾಲೀಕಾರ, ಎಸ್.ಜೆ.ಮಾಡ್ಯಾಳ, ಸಂತೋಶ ಪರಸೇನವರ, ಸುನಂದಾ ಪಾಟೀಲ, ಜಯಶ್ರೀ ಕಾಲೇಬಾಗ, ನಿರ್ಮಲಾ ತಳಕೇರಿ, ಶೈಲಜಾ ಜಾಧವ, ರಾಧಾ ಎಂಟಮನ್, ಚಂದ್ರಕಲಾ ಹೋರ್ತಿ, ಲಕ್ಷ್ಮೀ ಶಿವಶರಣ, ಸುಮಂಗಲಾ ಕ್ಷತ್ರಿ ಸೇರಿದಂತೆ ಅನೇಕರು ಇದ್ದರು.
