Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ಅಭಿನಂದನೆ

ಎಸ್.ಐ.ಆರ್‌ನಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧನೆ 

ಬಾಗಲಕೋಟೆ: ಜುಲೈ ೧೩ : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಪ್ರಗತಿ ಸಾಧಿಸಿ ಮಾದರಿ ಕಾರ್ಯನಿರ್ವಹಣೆ ಮಾಡಿದ ಬೂತ ಮಟ್ಟದ ಅಧಿಕಾರಿ ಅನ್ನಪೂರ್ಣ ಗೌರಿ ಮತ್ತು ಶಾಮಲಾ ಪೂಜಾರಿ ಅವರಿಗೆ ತಾಲೂಕಾ ಆಡಳಿತದ ವತಿಯಿಂದ ಸನ್ಮಾನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಬಾಗಲಕೋಟೆ ತಾಲೂಕಿನ ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸೊಕನಾದಗಿ ಗ್ರಾಮದ ಮತಗಟ್ಟೆ ಸಂಖ್ಯೆ ೧೬೩ರಲ್ಲಿ ಎನ್ಯೂಮರೇಷನ್ ಹಂಚಿಕೆ ಹಾಗೂ ಗಣಕೀಕರಣ ಕಾರ್ಯದಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸಿದ ಅನ್ನಪೂರ್ಣ ಗೌರಿ ಹಾಗೂ ಇದೇ ಹೋಬಳಿಯ ಮುರನಾಳ ವೃತ್ತದ ಆನದಿನ್ನಿ ಗ್ರಾಮದ ಮತಗಟ್ಟೆ ಸಂಖ್ಯೆ ೧೭೧ರಲ್ಲಿ ಎನ್ಯೂಮರೇಷನ್ ಹಂಚಿಕೆ ಹಾಗೂ ಗಣಕೀಕರಣ ಕಾರ್ಯದಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸಿದ ಶಾಮಲಾ ಪೂಜಾರಿ ಅವರಿಗೆ ಉಪ ವಿಭಾಗಾಧಿಕಾರಿ ಮಹೇಶಕುಮಾರ ಮಾಲಗಿತ್ತಿ ಹಾಗೂ ತಹಶೀಲ್ದಾರ ವಾಸುದೇವ ಸ್ವಾಮಿ ಅವರು ಸನ್ಮಾನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು. 
ಅಭಿನಂದನಾ ಕಾರ್ಯದಲ್ಲಿ ಉಪ ತಹಶೀಲ್ದಾರ ಕಲಾದಗಿ, ಕಚೇರಿ ಶಿರಸ್ತೆದಾರ ಎನ್.ಜಿ.ಕುಲಕರ್ಣಿ, ಗ್ರಾಮ ಆಡಳಿತ ಅಧಿಕಾರಿ ಮುರನಾಳ ವೃತ್ತ, ನೋಡಲ್ ಅಧಿಕಾರಿ ಪರಮೇಶ್ವರ ಚಲವಾದಿ, ಸೊಕನಾದಗಿ ಗ್ರಾಮ ಆಡಳಿತ ಅಧಿಕಾರಿ ಪಿರಗನ್ನವರ ಸೇರಿದಂತೆ ಇತರರು ಇದ್ದರು.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST