Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಎರಡನೇ ಹಂತದ ಜನಗಣತಿಯನ್ನೂ ಅಚ್ಚುಕಟ್ಟಾಗಿ ಪೂರ್ಣಗೊಳಿಸಿ: ಜಿಪಂ ಸಿಪಿಒ ವಾಗೀಶ್ ಶಿವಾಚಾರ್ಯ ಕರೆ

ಬಳ್ಳಾರಿ: ಎರಡನೇ ಹಂತದ ಜನಗಣತಿ-2027 ತರಬೇತಿ ಕಾರ್ಯಾಗಾರಕ್ಕೆ ಚಾಲನೆ



ಬಳ್ಳಾರಿ,ನ.04: ಜಿಲ್ಲೆಯಲ್ಲಿ ಈ ಹಿಂದೆ ನಡೆದ ಮೊದಲ ಹಂತದ ಗಣತಿ ಹಾಗೂ ಮನೆ ಗಣತಿ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿವೆ. ಅದೇ ಉತ್ಸಾಹದಲ್ಲಿ ಮುಂಬರುವ ಎರಡನೇ ಹಂತದ ಜನಗಣತಿ ಕಾರ್ಯವನ್ನು ಕೂಡ ಅಚ್ಚುಕಟ್ಟಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಅವರು ಹೇಳಿದರು.
ಜನಗಣತಿ-2027ರ ಅಂಗವಾಗಿ ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಜನ ಗಣತಿ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳಿಗೆ ಮಂಗಳವಾರ ಆಯೋಜಿಸಿದ್ದ ಜನಗಣತಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಗಣತಿ ಕಾರ್ಯಾಚರಣೆ ವೇಳೆ ಎದುರಾಗುವ ಯಾವುದೇ ಸಂದೇಹಗಳಿಗೆ ಸ್ಪಷ್ಟನೆ ಹಾಗೂ ಮಾರ್ಗದರ್ಶನ ನೀಡಲು ನೋಡಲ್ ಅಧಿಕಾರಿಗಳು ಸದಾ ಲಭ್ಯವಿರಲಿದ್ದಾರೆ. ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಪತ್ರಿಬಸಪ್ಪ ಕೆ.ಎನ್ ಅವರು ಮಾತನಾಡಿ, ಜನಗಣತಿಯ ಮೊದಲ ಹಂತದಲ್ಲಿ ಪ್ರತಿ ಕುಟುಂಬಕ್ಕೆ ಸಂಬAಧಿಸಿದAತೆ 34 ಪ್ರಶ್ನೆಗಳ ಮೂಲಕ ವಸತಿ ಸೌಕರ್ಯ ಸೇರಿದಂತೆ ಮೂಲ ವಿವರಗಳನ್ನು ಮೊಬೈಲ್ ಆಪ್ ಮೂಲಕ ಸಂಗ್ರಹಿಸಲಾಗಿತ್ತು. ರಾಜ್ಯದಲ್ಲೇ ಮೊದಲ ಬಾರಿಗೆ ಮನೆಗಳ ಪಟ್ಟಿ ಕಾರ್ಯವನ್ನು ಜಿಲ್ಲೆಯಲ್ಲಿ ನಿಗದಿತ ಅವಧಿಗಿಂತ ಮುಂಚಿತವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿತ್ತು ಎಂದು ಹೇಳಿದರು.
ಎರಡನೇಯ ಜನಗಣತಿ-2027 ರ ಪ್ರಕ್ರಿಯೆಯಲ್ಲಿ ಜನವರಿ 10 ರಿಂದ 24 ರವರೆಗೆ ನಾಗರಿಕರಿಗೆ ಸ್ವತಃ ಮಾಹಿತಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಜನವರಿ 25 ರಿಂದ ಫೆಬ್ರವರಿ 28 ರವರೆಗೆ ಗಣತಿದಾರರು ಮನೆಗಳಿಗೆ ತೆರಳಿ ವಿವರ ಸಂಗ್ರಹಿಸಲಿದ್ದಾರೆ. ಈ ಹಂತದಲ್ಲಿ ಪ್ರತಿ ವ್ಯಕ್ತಿಗೆ ಸಂಬAಧಿಸಿದAತೆ ಶಿಕ್ಷಣ, ಉದ್ಯೋಗ ಸೇರಿದಂತೆ ಒಟ್ಟು 40 ಪ್ರಶ್ನೆಗಳ ಮೂಲಕ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತದೆ. ಫೆಬ್ರವರಿ 28 ರ ರಾತ್ರಿ ನಗರ ಹಾಗೂ ಗ್ರಾಮೀಣ ಭಾಗದ ಸೂರಿಲ್ಲದ ವ್ಯಕ್ತಿಗಳ ಗಣತಿ ಪ್ರಕ್ರಿಯೆ ನಡೆಯಲಿದೆ. ಬಳಿಕ ಮಾರ್ಚ್ 1 ರಿಂದ 5 ರವರೆಗೆ ಜನನ-ಮರಣ ಅಥವಾ ಬಿಟ್ಟುಹೋದ ವಿವರಗಳ ಸೇರ್ಪಡೆ/ತಿದ್ದುಪಡಿಗೆ ಅವಕಾಶವಿರುತ್ತದೆ ಎಂದು ತಿಳಿಸಿದರು.
ಈ ಬಾರಿ ಜನಸಂಖ್ಯೆ ಆಧಾರಿತ ಪ್ರಶ್ನಾವಳಿ ಹೆಚ್ಚಿರುವುದರಿಂದ, ಪ್ರತಿ 800 ಜನಸಂಖ್ಯೆಗೆ ಒಂದು ಬ್ಲಾಕ್ ರಚಿಸುವಂತೆ ನಿರ್ದೇಶನ ನೀಡಲಾಗಿದ್ದು, ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ಸೂಕ್ತವಾಗಿ ವಿಂಗಡಿಸಿ ಹೆಚ್ಚುವರಿ ಶಿಕ್ಷಕರು/ಗಣತಿದಾರರನ್ನು ನಿಯೋಜಿಸಿಕೊಳ್ಳಬೇಕು. ಹಿಂದಿನAತೆ ಕೈಬರಹದ ಮೂಲಕ ದಾಖಲಿಸದೆ, ಎಲ್ಲ ಪ್ರಕ್ರಿಯೆಗಳನ್ನು ಮೊಬೈಲ್ ಆಪ್ ಹಾಗೂ ಆನ್ ಲೈನ್ ಡಿಮಾರ್ಕೇಶನ್ ವ್ಯವಸ್ಥೆಯ ಮೂಲಕವೇ ನಿರ್ವಹಿಸಲಾಗುತ್ತಿದ್ದು, ಡಿಜಿಟಲ್ ವಿಧಾನದಿಂದ ಕಾರ್ಯವು ಪಾರದರ್ಶಕ ಹಾಗೂ ಸುಲಭವಾಗಿರಲಿದೆ ಎಂದು ತಿಳಿಸಿದರು.
ಜನಗಣತಿ-2027 ರ ಜಿಲ್ಲಾ ನೋಡೆಲ್ ಅಧಿಕಾರಿಗಳಾದ ಶ್ರೀನಾಥ್ ಹಾಗೂ ಈರಮ್ಮ ಅವರು, ಜನಗಣತಿಯ ಸಂಪೂರ್ಣ ಪ್ರಕ್ರಿಯೆಯನ್ನು ಸಿಎಂಎAಎಸ್(ಸೆನ್ಸಸ್ ಮ್ಯಾನೇಜ್ಮೆಂಟ್ ಅಂಡ್ ಮಾನಿಟರಿಂಗ್ ಸಿಸ್ಟಮ್) ಪೋರ್ಟಲ್ ಮೂಲಕವೇ ನಿಯಂತ್ರಿಸಲಾಗುತ್ತಿದೆ. ಈ ಹಿಂದಿನ ಸಮೀಕ್ಷೆಗಳಲ್ಲಿ ಎದುರಾಗಿದ್ದ ತಾಂತ್ರಿಕ ಹಾಗೂ ಕ್ಷೇತ್ರಮಟ್ಟದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಈ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿ, ಕ್ಷೇತ್ರಮಟ್ಟದ ಸಿಬ್ಬಂದಿಗೆ ಯಾವುದೇ ತೊಂದರೆಯಾಗದAತೆ ಸರ್ವೇ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ತರಬೇತಿ ಕಾರ್ಯಾಗಾರದ ಸವಿಸ್ತಾರವರ ಮಾಹಿತಿ ನೀಡಿದರು.
ಕಾರ್ಯಗಾರದಲ್ಲಿ ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ನಂದೀಶ್ ಎಲ್.ಎಂ., ಸಿರುಗುಪ್ಪ ತಹಶೀಲ್ದಾರರಾದ ಗೌಸಿಯಾ ಬೇಗಂ, ಕುರುಗೋಡು ತಹಶೀಲ್ದಾರ ನರಸಪ್ಪ, ಕಂಪ್ಲಿ ತಹಶೀಲ್ದಾರ ಜೂಗಲ ಮಂಜುನಾಯಕ ಸೇರಿದಂತೆ ನಗರ, ಸ್ಥಳೀಯ-ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿ- ಸಿಬ್ಬಂದಿ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ. 6 ರಂದು ವಿದ್ಯಾಮಂದಿರ ಪ್ರೌಢಶಾಲೆಯ ಅದ್ದೂರಿ ಅಮೃತ ಮಹೋತ್ಸವ : ಮಹಾಂತೇಶ ದೊಡ್ಡಗೌಡರವಕೀಲರ ಹಿತರಕ್ಷಣೆ ಕಾಯ್ದೆಗೆ ತಿದ್ದುಪಡಿ ತರಲು ಆಗ್ರಹ: ಬಳ್ಳಾರಿಯಲ್ಲಿ ವಕೀಲರ ಪ್ರತಿಭಟನೆಕೃಷಿ ಪರಿಕರಗಳ ಮಾರಾಟಗಾರರ ಹಿತ ಕಾಯಲು ಬದ್ಧ: ಸನ್ಮಾನ ಕಾರ್ಯಕ್ರಮದಲ್ಲಿ  ರಾಜ್ಯಾಧ್ಯಕ್ಷ  ಹೆಚ್.ತಿಮ್ಮನಗೌಡನಿರಂತರ ಪ್ರಯತ್ನ, ಆತ್ಮವಿಶ್ವಾಸ ಮತ್ತು ತೃಪ್ತಿಯೇ ಯಶಸ್ಸಿನ ನಿಜವಾದ ಮೆಟ್ಟಿಲುಗಳು: ಅಮೃತಾನಂದ ಸ್ವಾಮೀಜಿಮುಖ್ಯಮಂತ್ರಿಗಳ 100 ದಿನಗಳ ಕಾರ್ಯಕ್ರಮ: ಐಟಿಐ ತರಬೇತಿದಾರರಿಗೆ ಹೆಚ್ಚುವರಿ ಕೌಶಲ್ಯ ತರಬೇತಿಗೆ ಚಾಲನೆಎರಡನೇ ಹಂತದ ಜನಗಣತಿಯನ್ನೂ ಅಚ್ಚುಕಟ್ಟಾಗಿ ಪೂರ್ಣಗೊಳಿಸಿ: ಜಿಪಂ ಸಿಪಿಒ ವಾಗೀಶ್ ಶಿವಾಚಾರ್ಯ ಕರೆಮುದ್ದೇಬಿಹಾಳ ಸೆರಕಾರಿ ಆಸ್ಪತ್ರೆಗೆ ಅಚ್ಚರಿಯ ಭೇಟಿ ನೀಡಿದ ಜಿಲ್ಲಾ ವೈದ್ಯಾಧಿಕಾರಿ.ಕಾನೂನು ಶಿಕ್ಷಣವು ನ್ಯಾಯಯುತ ಸಮಾಜ ನಿರ್ಮಾಣದ ಪ್ರಮುಖ ಸಾಧನ: ಹಿರಿಯ ನ್ಯಾಯವಾದಿ ಕೆ.ಎಲ್. ಪಾಟೀಲ’ನನ್ನ ದೇಹ, ನನ್ನ ಸುರಕ್ಷತೆ’ ಪರಿಕಲ್ಪನೆಯಡಿ ಮಕ್ಕಳಿಗೆ ಜಾಗೃತಿ ಮೂಡಿಸಿದ ಸಂಪನ್ಮೂಲ ವ್ಯಕ್ತಿಗಳು "ಫಲಾಪೇಕ್ಷೆಯಿಲ್ಲದ ಕಾರ್ಯ ಶ್ಲಾಘನೀಯ" -ಶ್ರೀಗುರುಸಿದ್ದೇಶ್ವರ ಶ್ರೀ