LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

 ಚುಕ್ಕಿ ನಂಜುಂಡಸ್ವಾಮಿ ಚಾಲನೆ : ಈರಪ್ಪಯ್ಯ 

ಗಾಂಧಿ ಭವನದಲ್ಲಿ ನಮ್ದು ಸಂತೆ ಆರಂಭ 

 ಬಳ್ಳಾರಿ ಆ. 25 : ನಗರದ ರಾಯಲ್ ಸರ್ಕಲ್ ನಲ್ಲಿರುವ  ಗಾಂಧಿ ಭವನದಲ್ಲಿ ರೈತ ಸಂಘದಿಂದ ನಮ್ದು ಸಂತೆ ಎಂಬ ವಿನೂತನ ಮಾರುಕಟ್ಟೆಯನ್ನು  ಸಂಪೂರ್ಣ ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಪದಾರ್ಥಗಳ ರೈತ ಸಂತೆಯನ್ನು ಆರಂಭಿಸಲಾಗುವುದು ಎಂದು ಈರಪ್ಪಯ್ಯ ತಿಳಿಸಿದರು.
 ಈ ಕುರಿತು ಇಂದು ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯನ್ನು ನಡೆಸಿದ ಅವರು ಬುಧವಾರ ಮುಂಜಾನೆ 11 ಗಂಟೆಗೆ ನಮ್ದು ಸಂತೆ  ಆರಂಭಿಸಲಾಗುವುದು ಈ ಸಂತೆಯಲ್ಲಿ ನಮ್ಮ ಬೆಳೆ ನಮ್ಮದು ಬೆಲೆ ನಮ್ಮದೇ ಮಾರುಕಟ್ಟೆ ಎಂಬ ಧ್ಯೇಯ ವಾಕ್ಯದೊಂದಿಗೆ ವಿಷಮುಕ್ತ ಭೂಮಿ ಹಾಗೂ ವಿಷಮುಕ್ತ ಆಹಾರದಿಂದ ಆರೋಗ್ಯವಂತ ಭಾರತವನ್ನು ಕಟ್ಟುವ ಕಡೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದೊಂದಿಗೆ ನಮ್ದು ರೈತ ಉತ್ಪಾದಕರ ಸಂಸ್ಥೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷೀಯ ಮಂಡಳಿಯ ಸದಸ್ಯರಾದ ಹೊನ್ನೂರು ಪ್ರಕಾಶ್ ವಹಿಸಿಕೊಳ್ಳಲಿದ್ದಾರೆ ರೈತ ಸಂತೆಯನ್ನು ಮಹಾನಗರ ಪಾಲಿಕೆ ಮೇಯರ್ ಪಿ ಗಾದೆಪ್ಪ ಉದ್ಘಾಟಿಸಲಿದ್ದಾರೆ ಮಹಿಳಾ ರೈತ ಸಾಲ ವಿಮೋಚನಾ ಸಂಘಗಳ ಉದ್ಘಾಟನೆಯನ್ನು ಪೊಲೀಸ್ ಜಿಲ್ಲಾ ಅಧೀಕ್ಷಕರಾದ ಸುಮನ್  ಡಿ ಪನ್ನೇಕರ್ ಉದ್ಘಾಟಿಸುವರು ಇವರ ಜೊತೆಗೆ ಮಂಜಮ್ಮ ಜೋಗತಿ ಮಾಳಮ್ಮ ಮಲ್ಲಿಕಾರ್ಜುನ ಇವರು ಕೈಜೋಡಿಸಲಿದ್ದಾರೆ. ಅತ್ಯಂತ ಮುಖ್ಯವಾಗಿ ಈ  ಈ ಸಂತೆಯನ್ನು ರಾಜ್ಯ ಅಧ್ಯಕ್ಷೀಯ ಮಂಡಳಿಯ ಸದಸ್ಯರಾದ ಚುಕ್ಕಿ ನಂಜುಂಡಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು.
 ಈ ಸಂತೆಯಲ್ಲಿ ಸುಮಾರು 40 ಜನ ಸಾವಯವ ಕೃಷಿಕರು ಭಾಗವಹಿಸಲಿದ್ದು 40 ಮಳಿಗೆಗಳನ್ನು ಹಾಕಲಾಗುವುದು ಈ ಎಲ್ಲಾ ಮಳಿಗೆಗಳಲ್ಲಿ ವಿಷಮುಕ್ತ ಮತ್ತು ಸಾವಯವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುವುದು ನಗರದ ಮತ್ತು ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರು ಈ ಸಾವಯವ ಪದಾರ್ಥಗಳನ್ನು ಖರೀದಿಸಿ ಉತ್ತಮ ಆರೋಗ್ಯ ಪಡೆಯಲು ಕರೆ ನೀಡಿದರು.
 ಈ ಪತ್ರಿಕಾಗೋಷ್ಠಿಯಲ್ಲಿ ಹುಲಿಕೆರೆ ಸಜ್ಜನ್ ವಿವೇಕಾನಂದ ರವಿ ಮೋಹನ್ ಗಾಯಕ್ವಾಡ್ ದೊಡ್ಡ ಬಸವನಗೌಡ ಬದರಿ ನಾರಾಯಣ ಗುಪ್ತ ಮಂಜುನಾಥ್ ಸೇರಿದಂತೆ ಇತರರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್