Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಬೆಳಗಾವಿಯಲ್ಲಿ ಮೊದಲ ಮಳಿಗೆ ಆರಂಭಿಸಿದ ಚೈನೀಸ್ ವೋಕ್


ಬೆಳಗಾವಿ, ೨೦ ಜೂನ್ ೨೦೨೬: ‘ಲೆನೆಕ್ಸಿಸ್ ಫುಡ್‌ವರ್ಕ್ಸ್ನ ಭಾರತದ ಪ್ರಮುಖ ದೇಸಿ ಚೈನೀಸ್ ಕ್ಯುಎಸ್‌ಆರ್(ತ್ವರಿತ ಸೇವಾ ರೆಸ್ಟೋರೆಂಟ್) ಬ್ರ್ಯಾಂಡ್‌ಗಳಲ್ಲಿ ಒಂದಾದ ಚೈನೀಸ್ ವೋಕ್, ಬೆಳಗಾವಿಯಲ್ಲಿ ತನ್ನ ಮೊದಲ ಮಳಿಗೆ ಆರಂಭಿಸಿರುವುದಾಗಿ ಘೋಷಿಸಿದೆ, ಇದು ಭಾರತದಾದ್ಯಂತ ತನ್ನ ೫೦ನೇ ನಗರದಲ್ಲಿ ಬ್ರ್ಯಾಂಡ್‌ನ ಪ್ರವೇಶವನ್ನು ಗುರುತಿಸುತ್ತಿದೆ. ಈ ಉದ್ಘಾಟನೆಯು ಕರ್ನಾಟಕದಲ್ಲಿ ಚೈನೀಸ್ ವೋಕ್‌ನ ಉಪಸ್ಥಿತಿಯನ್ನು ೩೮ ಮಳಿಗೆಗಳಿಗೆ ವಿಸ್ತರಿಸಿದೆ. ದಕ್ಷಿಣ ಭಾರತದಲ್ಲಿ ಮಳಿಗೆಗಳ ಸಂಖ್ಯೆ ೮೯ಕ್ಕೆ ಏರಿಕೆ ಕಂಡಿದೆ, ಇದರೊಂದಿಗೆ, ಬ್ರ್ಯಾಂಡ್‌ನ ರಾಷ್ಟ್ರೀಯ ವಿಸ್ತರಣಾ ಕಾರ್ಯತಂತ್ರದಲ್ಲಿ ಈ ಪ್ರದೇಶದ ಪ್ರಾಮುಖ್ಯತೆಯನ್ನು ಬಲಪಡಿಸಿದೆ.

ಬೆಳಗಾವಿಯ ಖಾನಾಪುರ ಮುಖ್ಯ ರಸ್ತೆಯ ಜನದಟ್ಟಣೆಯ ಮೃತ್ಯುಂಜಯ ನಗರದಲ್ಲಿ ಚೈನೀಸ್ ವೋಕ್, ತನ್ನ ಮಳಿಗೆ ತೆರೆದಿದೆ. ಬೆಳೆಯುತ್ತಿರುವ ವಿದ್ಯಾರ್ಥಿ ಜನಸಂಖ್ಯೆ, ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಸಮುದಾಯ ಮತ್ತು ವಿಕಸನ ಹೊಂದುತ್ತಿರುವ ರುಚಿಕರ ಊಟದ ಸಂಸ್ಕೃತಿಗೆ ಹೆಸರುವಾಸಿಯಾದ ಬೆಳಗಾವಿಯಲ್ಲಿ ಗ್ರಾಹಕರು ಕೈಗೆಟುಕುವ ಬೆಲೆಗೆ ಆರೋಗ್ಯಕರ ಮತ್ತು ರುಚಿಕರವಾದ ಊಟದ ಆಯ್ಕೆಗಳನ್ನು ಹೆಚ್ಚಾಗಿ ಹುಡುಕುತ್ತಿರುವುದರಿಂದ ಸಂಘಟಿತ ಕ್ಯುಎಸ್‌ಆರ್ ಬ್ರ್ಯಾಂಡ್‌ಗಳಿಗೆ ಬಲವಾದ ಅವಕಾಶ ಒದಗಿಸುತ್ತಿದೆ.

ಚೈನೀಸ್ ವೋಕ್‌ಗೆ ದಕ್ಷಿಣ ಭಾರತವು ಪ್ರಮುಖ ಬೆಳವಣಿಗೆಯ ಚಾಲನಾಶಕ್ತಿಯಾಗಿ ಮುಂದುವರೆದಿದೆ, ಬಲವಾದ ಊಟ ಸಂಸ್ಕೃತಿ, ಹೆಚ್ಚಿನ ನಗರಾಭಿವೃದ್ಧಿ ಬಳಕೆ ಮತ್ತು ಮಾರುಕಟ್ಟೆಗಳಲ್ಲಿ ದೇಸಿ ಚೈನೀಸ್ ಪಾಕ ಪದ್ಧತಿಯ ಹೆಚ್ಚುತ್ತಿರುವ ಜನಸ್ವೀಕಾರದಿಂದ ಬೆಂಬಲಿತವಾಗಿದೆ.

ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಪಿ. ಅರವಿಂದ್, "ಬೆಳಗಾವಿ ನಗರವು ಭಾರತದ ಕ್ಯುಎಸ್‌ಆರ್ ಉದ್ಯಮದ ಮುಂದಿನ ಹಂತದ ಬೆಳವಣಿಗೆಗೆ ಚಾಲನೆ ನೀಡುತ್ತಿರುವ ಉನ್ನತ ಸಾಮರ್ಥ್ಯದ ೨ನೇ ಶ್ರೇಣಿಯ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ. ನಗರವು ಗ್ರಾಹಕ ನೆಲೆ, ಬಲವಾದ ಆಹಾರ ಸಂಸ್ಕೃತಿ ಮತ್ತು ಸಂಘಟಿತ ಊಟದ ಸ್ವರೂಪಗಳಿಗೆ ಹೆಚ್ಚುತ್ತಿರುವ ಆದ್ಯತೆಯನ್ನು ಹೊಂದಿದೆ. ಕರ್ನಾಟಕ ಮತ್ತು ದಕ್ಷಿಣ ಭಾರತದಾದ್ಯಂತ ನಮ್ಮ ನಿರಂತರ ವಿಸ್ತರಣೆಯ ಭಾಗವಾಗಿ ಚೈನೀಸ್ ವೋಕ್ ನ್ನು ಬೆಳಗಾವಿಗೆ ತರಲು ನಾವು ಉತ್ಸುಕರಾಗಿದ್ದೇವೆ. "ಶಿಸ್ತುಬದ್ಧ ಮತ್ತು ಅಳೆಯಬಹುದಾದ ಬೆಳವಣಿಗೆ ಮಾದರಿಯ ಮೂಲಕ ವ್ಯವಹಾರ ವಿಸ್ತರಿಸುವಾಗ ಗ್ರಾಹಕರಿಗೆ ಉತ್ತಮ ರುಚಿ, ಕೈಗೆಟುಕುವ ಬೆಲೆ, ಗುಣಮಟ್ಟ ಮತ್ತು ಸ್ಥಿರತೆಯ ಸಂಯೋಜನೆ ನೀಡುವ ಮೂಲಕ ದೇಸಿ ಚೈನೀಸ್ ಪಾಕ ಪದ್ಧತಿಯನ್ನು ಸಾರ್ವತ್ರಿಕಗೊಳಿಸುವ ಮೇಲೆ ನಮ್ಮ ಗಮನ ಉಳಿದಿದೆ" ಎಂದು ಹೇಳಿದರು.

ಬೆಳಗಾವಿ ಮಳಿಗೆಯು ತನ್ನ ಮೌಲ್ಯಯುತ ಮೆನು ಮತ್ತು ವಿಶಿಷ್ಟ ಕೊಡುಗೆಗಳ ಮೂಲಕ ಅಧಿಕ ಸಂಖ್ಯೆಯ ಗ್ರಾಹಕರ ನೆಲೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ. ೯೯ ರೂ.ನಿಂದ ಆರಂಭವಾಗುವ ವ್ಯಾಲ್ಯೂ ವೋಕ್ಸ್, ಹಕ್ಕಾ ನೂಡಲ್ಸ್, ವಿಶಿಷ್ಟ ಕುರ್ಕುರೆ ಮೊಮೊಸ್, ಹೊಸದಾಗಿ ಪ್ರಾರಂಭಿಸಲಾದ ಚೀಸ್ ಮತ್ತು ಶೇಜ್ವಾನ್ ಫ್ರೈಸ್, ಕುಟುಂಬಗಳು ಮತ್ತು ಸ್ನೇಹಿತರು ಸವಿಯಲು ವಿನ್ಯಾಸಗೊಳಿಸಲಾದ ವಿವಿಧ ಊಟದ ಕಾಂಬೊಗಳು ಜನಪ್ರಿಯ ಮೆನು ಐಟಂಗಳಲ್ಲಿ ಸೇರಿವೆ.

ಈ ಮಳಿಗೆಯು ಡೈನ್-ಇನ್ ಮತ್ತು ಟೇಕ್‌ಅವೇ ವಿತರಣೆಗಾಗಿ ಕಾರ್ಯ ನಿರ್ವಹಿಸಲಿದ್ದು, ಬೆಳಗಾವಿಯಲ್ಲಿ ಗ್ರಾಹಕರಿಗೆ ಮೊದಲ ಬಾರಿಗೆ ಚೈನೀಸ್ ವೋಕ್‌ನ ವಿಶಿಷ್ಟರುಚಿ , ಮೌಲ್ಯ ಮತ್ತು ಅನುಕೂಲತೆಯ ಮಿಶ್ರಣವನ್ನು ನೀಡುತ್ತದೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾನೂನು ಶಿಕ್ಷಣವು ನ್ಯಾಯಯುತ ಸಮಾಜ ನಿರ್ಮಾಣದ ಪ್ರಮುಖ ಸಾಧನ: ಹಿರಿಯ ನ್ಯಾಯವಾದಿ ಕೆ.ಎಲ್. ಪಾಟೀಲ’ನನ್ನ ದೇಹ, ನನ್ನ ಸುರಕ್ಷತೆ’ ಪರಿಕಲ್ಪನೆಯಡಿ ಮಕ್ಕಳಿಗೆ ಜಾಗೃತಿ ಮೂಡಿಸಿದ ಸಂಪನ್ಮೂಲ ವ್ಯಕ್ತಿಗಳು "ಫಲಾಪೇಕ್ಷೆಯಿಲ್ಲದ ಕಾರ್ಯ ಶ್ಲಾಘನೀಯ" -ಶ್ರೀಗುರುಸಿದ್ದೇಶ್ವರ ಶ್ರೀದೇಶನೂರ ಬಂಗಲೆ ರಸ್ತೆ, ದೇವಸ್ಥಾನದ ಅಭಿವೃದ್ಧಿ ಆದಷ್ಟು ಬೇಗ  ಪ್ರಾರಂಭ : ಬಾಬಾಸಾಹೇಬ ಪಾಟೀಲ ಹತ್ತರಗಿ : ದೀಪ ಸಂಜೀವಿನಿ ಉತ್ಪನ್ನಗಳ ಮಳಿಗೆ ಉದ್ಘಾಟನೆ,"ನಾಡು ನುಡಿ, ಗಡಿ ವಿಚಾರದಲ್ಲಿ ಒಗ್ಗಟ್ಟಿನಿಂದ ಶ್ರಮಿಸಿ  / ನಾಡು ನುಡಿಯ ರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗ ಮುಂದಾಗಬೇಕು"  *ಶಾಲಾ ದಾಖಲಾತಿಯಲ್ಲಿ ಗಣನೀಯ ಏರಿಕೆ: ಸರ್ಕಾರಿ ಶಾಲೆಗಳತ್ತ ಪೋಷಕರ ಒಲವು*ವಕೀಲರ ಸಂರಕ್ಷಣೆಯ ಕಾಯ್ದೆ ಪರಿಣಾಮಕಾರಿ ಜಾರಿಗೆ ಸವದತ್ತಿ ವಕೀಲರ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮನವಿ  ಇಂಡಿ: ಸಿದ್ದೇಶ್ವರ ಸ್ವಾಮೀಜಿ ಮಳಿಗೆಗಳ ಬಹಿರಂಗ ಹರಾಜು – ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆವಿದ್ಯುತ್‌ ಸಮಸ್ಯೆಗಳಿಗೆ ಶೀಘ್ರ ಪರಿಹರಿಸಲು ಆಗ್ರಹಿಸಿ ಅನಿರ್ದಿಷ್ಟ ಹೋರಾಟ