Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚನ್ನಾಪುರ ಗ್ರಾಮ; ನರೇಗಾ ಯೋಜನೆ ಕಾಮಗಾರಿ ಪರಿಶೀಲನೆ

 

ಹುಬ್ಬಳ್ಳಿ,ಜೂ.೧೦: ಇಂದು ಚನ್ನಾಪುರ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆರೆ,ಕಾಲುವೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಸ್ಥಳಕ್ಕೆ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ಸದಾನಂದ ಅಮರಾಪುರ ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ವಿಬಿಜಿ ರಾಮಜಿ ಯೋಜನೆಯ ಹೊಸ ನಿಯಮಗಳು ಹಾಗೂ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು. ಅಲ್ಲದೇ ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು.
ಇಂತಹ ಕಾಮಗಾರಿಗಳು ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗಾವಕಾಶ ಒದಗಿಸುವುದರ ಜೊತೆಗೆ ಜಲ ಸಂರಕ್ಷಣೆ, ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಳ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತವೆ. ಕಾಮಗಾರಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇಲಾಖೆಯಿಂದ ನಿರಂತರವಾಗಿ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ತಾಲೂಕು ಪಂಚಾಯತ ಅಧಿಕಾರಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ, ಕಾರ್ಮಿಕರು ಹಾಜರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆರೆ ಹಾವಳಿ ತಡೆಗೆ ಪೂರ್ವಭಾವಿ ಸಭೆ; ಅಧಿಕಾರಿಗಳೇ ಕೇಂದ್ರ ಸ್ಥಾನದಲ್ಲಿಯೇ ಇರಿ: ತಹಶೀಲ್ದಾರ ರವೀಂದ್ರ ಹಾದಿಮನಿ ಸೂಚನೆ..!ಡಾ. ಹೆಚ್. ಸಿ. ಮಹಾದೇವಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಆಗ್ರಹ* ಬಿಜೆಪಿಯ ಕೇಂದ್ರ ಸರ್ಕಾರ ಸಧೃಢ ಭಾರತ ನಿರ್ಮಿಸುತ್ತಿದೆ : ಮಹಾದೇವ ಶೇಕ್ಕಿಸಚಿವ ಸ್ಥಾನ ಇಲ್ಲದಿದ್ದರೂ ಜನಸ್ಪಂದನೆ ಅಚಲ: ಲಕ್ಷ್ಮೀ ಹೆಬ್ಬಾಳಕರ್ ಜನತಾ ದರ್ಶನದಲ್ಲಿ ಅಪಾರ ಜನಸಾಗರಜನರ ಮನ ರಂಜಿಸಿದ ತೊಗಲು ಗೊಂಬೆಯಾಟ, ಜನಪದ ಸಂಗೀತಮುನ್ನಚ್ಚರಿಕಾ ಕ್ರಮ ಕೈಗೊಳ್ಳಲು ಶಾಸಕ ಉಮೇಶ ಮೇಟಿ ಸೂಚನೆಅಕ್ರಮ ಅದಿರು ದಾಸ್ತಾನು, ಮಣ್ಣು ಸಾಗಣೆಗೆ ಲಂಚ ಆರೋಪ: ಸಿಪಿಐ ಉದಯರವಿ ಅಮಾನತುವೃದ್ದಾಶ್ರಮಕ್ಕೆ ಅಕ್ಕಿ, ಬೆಳೆ ವಿತರಿಸಿ ಹುಟ್ಟಹಬ್ಬ ಆಚರಿಸಿಕೊಂಡ ದಸ್ತಗಿರಸಾಬ ನಿಟ್ಟಾಲಿಚನ್ನಾಪುರ ಗ್ರಾಮ; ನರೇಗಾ ಯೋಜನೆ ಕಾಮಗಾರಿ ಪರಿಶೀಲನೆ  ಮಲ್ಲಿಕಾರ್ಜುನಗೌಡ ರವರಿಗೆ ಪಿಎಚ್ ಡಿ ಪದವಿ