ರಾಮದುರ್ಗ,ಜು,೦೩: ೧೮೯೧ ಜೂ.೩೦ ರಂದು ಪ್ರಾರಂಭವಾದ ಕೆನರಾ ಬ್ಯಾಂಕ ೧೨೧ ವರ್ಷಗಳನ್ನು ಪೂರೈಸುತ್ತಿದ್ದು. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸ್ಥಳೀಯ ಕೆನರಾ ಬ್ಯಾಂಕ ಹಿರಿಯ ಪ್ರಬಂಧಕ ಅಜಿತ್ ರಾಜನ್ನವರ ಹರ್ಷವ್ಯಕ್ತಪಡಿಸಿದರು.
ಸ್ಥಳೀಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ೧೨೧ನೇ ವರ್ಷದ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ೧೦ ಸಾವಿರ ಶಾಖೆಗಳು, ೧೨ ಕೋಟಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ತಿಳಿಸಿದರು.
ರಾಮದುರ್ಗ ಶಾಖೆ ೧೯೬೧ ರಲ್ಲಿ ಪ್ರಾರಂಭವಾಗಿದ್ದು, ೫೦ ಸಾವಿರಕ್ಕೂ ಅಧಿಕ ಗ್ರಾಹಕರನ್ನು ಹೊಂದಿದ್ದು, ಮುಂಗಡ ಹಾಗೂ ಠೇವಣಿಯೊಂದಿಗೆ ೨೨೦ ಕೋಟಿ ವಹಿವಾಟ ಮಾಡಿದೆ. ಇನ್ನಷ್ಟು ಉತ್ತಮ ಸೇವೆ ನೀಡಲು ಬ್ಯಾಂಕ್ ಸದಾ ಭದ್ಧವಾಗಿದೆ ಎಂದು ಅವರು ಹೇಳಿದರು.
ಬ್ಯಾಂಕ ಅಧಿಕಾರಿಗಳಾದ ಕಾಶಿನಾಥ ಬೂತಾಳಿ, ಮಸಲಿನ್, ದಿವ್ಯಾಂಶ ಭಟ್ನಾಗರ್, ಟಿ.ಎಸ್. ಜೀನು, ಪ್ರಶಾಂತ ಕುಲಕರ್ಣಿ, ಭರಮಪ್ಪ ಖಾನಪೇಟ, ಲಕ್ಷ್ಮಣ ಭಜಂತ್ರಿ, ಸಿಂಧೂರ ಹಲಗಿ, ಮಲ್ಲಪ್ಪ ರಾಮದುರ್ಗ, ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಉಪಸ್ಥಿತರಿದ್ದರು.
