ಯರಗಟ್ಟಿ,ಸೆ,೦೧ : ಶಿಕ್ಷಕರ ದಿನ ಅಂಗವಾಗಿ, ತಾಲೂಕ ಪಂಚಾಯತ, ತಾಲೂಕು ಆಡಳಿತ ವತಿಯಿಂದ ಸೆಪ್ಟೆಂಬರ್ ೩ರಂದು ತಾಲ್ಲೂಕಿನಾದ್ಯಂತ ಹಮ್ಮಿಕೊಂಡಿರುವ ರಕ್ತದಾನ ಶಿಬಿರದ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ ಕಚೇರಿಯಲ್ಲಿ ಜರುಗಿತು.
ತಹಶೀಲ್ದಾರ ಎಮ್. ವ್ಹಿ. ಗುಂಡಪ್ಪಗೋಳ ಮಾತನಾಡಿ ರಕ್ತದಾನ ಶಿಬಿರದ ಮೂಲಕ ಶಿಕ್ಷಕರ ದಿನವನ್ನು ವಿಭಿನ್ನವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿ?ಯ. ದೇಶದಲ್ಲೇ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರೂ ಸ್ವಯಂಪ್ರೇರಿತರಾಗಿ ಶಿಬಿರದಲ್ಲಿ ಭಾಗವಹಿಸಬೇಕು’ ಎಂದು ಕೋರಿದರು.
‘ತಾಲೂಕು ಪಂಚಾಯಿತಿ, ತಾಲೂಕಾ ಆಡಳಿತ ಮತ್ತು ವಿವಿಧ ಇಲಾಖೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಶಿಬಿರದಲ್ಲಿ ಭಾಗವಹಿಸುವರು’ ಎಂದರು.
ಈ ವೇಳೆ ತಾ.ಪಂ. ಇಓ ಬಸವರಾಜ ಅಯ್ಯನಗೌಡರ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಪಶು ವೈದ್ಯಾಧಿಕಾರಿ ಎಮ್. ವ್ಹಿ. ಪಾಟೀಲ, ಶಿಕ್ಷಣ ಸಂಯೋಜಕ ಎಂ. ಬಿ. ಕಡಕೋಳ, ಸಿಆರ್.ಪಿಗಳಾದ ವಸಂತ ಬಡಿಗೇರ, ಎಮ್. ಎನ್. ಮಲ್ಲಕನ್ನವರ, ಬಿ. ಎಸ್. ಸಿದ್ದಬಸನ್ನವರ, ಸೋಮು ಪೂಜೇರ, ಶ್ರೀಮತಿ ಜಿ. ಎನ್. ಮಲಕನ್ನವರ, ಶಿಕ್ಷಕ ಸಂಘದ ನಿರ್ದೇಶಕರಾದ ಎಸ್. ಬಿ. ಮಿಕಲಿ, ಡಿ. ಎಚ್. ಭಜಂತ್ರಿ, ಎಲ್. ವಾಯ್. ನಂದಿ, ಶ್ವೇತಾ ನೈನಾರ, ಎಸಿಡಿಪಿಓ ಚೇತನಾ ಹಳ್ಳಿ, ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಎಂ. ಎಂ. ಚೀಲದ, ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ, ಉಪನ್ಯಾಸಕ ಎಮ್. ಡಿ. ಸರದಾರ, ನಸಿಂಗ್ ಆಫೀಸರ ಸುನೀಲ ಕಾಶನ್ನವರ, ಹೇಸ್ಕಾಂ ಅಧಿಕಾರಿ ಮಹಾಂತೇಶ ಯರಗಟ್ಟಿ ಸೇರಿದಂತೆ ಅನೇಕರು ಇದ್ದರು.