ಮೂಡಲಗಿ : ಕೇಂದ್ರದಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಧೃಢ ಭಾರತ ನಿರ್ಮಾಣದೊಂದಿಗೆ ಒಳ್ಳೆಯ ಆಡಳಿತ ನೀಡುತ್ತ ಪ್ರತಿ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ ಹೇಳಿದರು.
ಬುಧವಾರವಾರದಂದು ಪಟ್ಟಣದ ಗಾಂಧಿಚೌಕಿನಲ್ಲಿರುವ ವಿಠ್ಠಲ-ರುಕ್ಮಿಣಿ ದೇವಸ್ಥಾನದಲ್ಲಿ ಬಿಜೆಪಿ ಅರಭಾವಿ ಮಂಡಲವತಿಯಿಂದ ಮಾನ್ಯ ಪ್ರಧಾನಮಂತ್ರಿಗಳ ಉತ್ತಮ ಆರೋಗ್ಯ,ಕ್ಕಾಗಿ ವಿಶೇ? ಪೂಜೆ ಸಲ್ಲಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರದಾನಿಯಾಗಿ ಯಶಸ್ವಿ ೧೨ ವಸಂತಗಳನ್ನು ಪೂರೈಸುವುದರೊಂದಿಗೆ ೨೦೨೬ರ ಜೂನ್ ವೇಳೆಗೆ ಅತಿ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದ ಭಾರತದ ಚುನಾಯಿತ ಪ್ರಧಾನಮಂತ್ರಿ ಎಂಬ ವಿಶಿ? ಗೌರವಕ್ಕೆ ಪಾತ್ರರಾಗಲಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಒಂದು ಅವಿಸ್ಮರಣೀಯ ಸಂಗತಿ ಎಂದು ಸಂತಸ ವ್ಯಕ್ತ ಪಡಿಸಿದರು.
ಈ ಸಂಧರ್ಭದಲ್ಲಿ ಡಾ.ಬಸವರಾಜ ಪಾಲಬಾಂವಿ, ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಪಾಂಡುರಂಗ ಮಹೇಂದ್ರಕರ, ಒಬಿಸಿ ಮೋರ್ಚಾ ಅಧ್ಯಕ್ಷ ಕೇದಾರಿ ಭಸ್ಮೆ, ಪ್ರಭು ಹಡಪದ, ಚಂದ್ರಶೇಖರ್ ಪತ್ತಾರ್, ಈಶ್ವರ್ ಮುರಗೊಡ, ರಂಗಪ್ಪ ಕುಲಗೋಡ ಸೇರಿದಂತೆ ಬಿಜೆಪಿಯ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
