Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಬಳ್ಳಾರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2027: ವೇಳಾಪಟ್ಟಿ ಪ್ರಕಟ


ಬಳ್ಳಾರಿ,ನ.19: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2027ನೇ ಸಾಲಿನ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬAಧಿಸಿದ ವೇಳಾಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯವು ಪ್ರಕಟಿಸಿದ್ದು, ಅರ್ಹ ಮತದಾರರು ಈ ಪ್ರಕ್ರಿಯೆಯ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
*ದಿನಾಂಕಗಳ ವಿವರ:*
ಮತಗಟ್ಟೆಗಳ ತಾರ್ಕೀಕರಣ: ನವೆಂಬರ್ 23, 2026ರೊಳಗೆ ಪೂರ್ಣಗೊಳ್ಳಲಿದೆ.
ಸಂಯೋಜಿತ ಕರಡು ಮತದಾರರ ಪಟ್ಟಿ ಪ್ರಕಟಣೆ: ಡಿಸೆಂಬರ್ 01, 2026.
ಆಕ್ಷೇಪಣೆ ಹಾಗೂ ಹಕ್ಕುಗಳ ಸಲ್ಲಿಕೆ ಅವಧಿ: ಡಿಸೆಂಬರ್ 01 ರಿಂದ ಡಿಸೆಂಬರ್ 31 ರವರೆಗೆ.
ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ: ಜನವರಿ 14, 2027ರೊಳಗೆ.
ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ಜನವರಿ 20, 2027.
*ಅರ್ಜಿಗಳ ಸಲ್ಲಿಕೆ ವಿವರ:*
ಹೊಸ ಹೆಸರು ಸೇರ್ಪಡೆ: ಅರ್ಹತಾ ದಿನಾಂಕಗಳಾದ 01.01.2027, 01.04.2027, 01.07.2027 ಹಾಗೂ 01.10.2027ಕ್ಕೆ 18 ವರ್ಷ ಪೂರ್ಣಗೊಂಡ ಅಥವಾ ಪೂರ್ಣಗೊಳ್ಳುವ ಎಲ್ಲಾ ಅರ್ಹ ಹಾಗೂ ನಿರೀಕ್ಷಿತ ಮತದಾರರು ನಮೂನೆ-6ನ್ನು ತಮ್ಮ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಅಥವಾ ತಾಲೂಕು ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.
ತಿದ್ದುಪಡಿಗಳಿಗೆ: ಹೆಸರು, ವಿಳಾಸ, ಭಾವಚಿತ್ರ ಹಾಗೂ ಇನ್ನೀತರೆ ವಿವರಗಳ ತಿದ್ದುಪಡಿಗೆ ನಮೂನೆ-8 ಅರ್ಜಿ ಸಲ್ಲಿಸಬಹುದು.
ಹೆಸರು ತೆಗೆದುಹಾಕಲು: ಮರಣ ಹೊಂದಿದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಸಂಬAಧಿಕರು ನಮೂನೆ-7ರ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬಳ್ಳಾರಿ ಜಿಲ್ಲೆಯ ಎಲ್ಲಾ ಅರ್ಹ ಮತದಾರರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಹಕರಿಸಬೇಕಾಗಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2027: ವೇಳಾಪಟ್ಟಿ ಪ್ರಕಟಯುವ ಪೀಳಿಗೆಯೇ ದೇಶದ ಭವಿಷ್ಯ: ಮಾದಕ ವಸ್ತುಗಳ ವ್ಯಸನದಿಂದ ದೂರವಿರಲು ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಕರೆಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಅವರ ಬಳ್ಳಾರಿ ಜಿಲ್ಲಾ ಪ್ರವಾಸಹೊಸ ಗೆಣಿಕೆಹಾಳ್ ಗ್ರಾಮದಲ್ಲಿ ನವಜಾತ ಶಿಶು ಆರೈಕೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮನೇಕಾರರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ: ಶಾಸಕ ಭರತ್ ರೆಡ್ಡಿ ಭರವಸೆನೇಕಾರರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ: ಶಾಸಕ ಭರತ್ ರೆಡ್ಡಿ ಭರವಸೆಒಂದು ದೇಶ ಹಲವು ವೈವಿಧ್ಯಮಯ ಸಂಸ್ಕೃತಿ  ಆದರ್ಶ ವಿದ್ಯಾಲಯದಲ್ಲಿ ಕಾಣಬಹುದು : ಡಾಕ್ಟರ್ ಶಿವಲಿಂಗಪ್ಪ ಹಂದಿಹಾಳ್ ಗೃಹಲಕ್ಷ್ಮಿ ಹಣದಲ್ಲಿ ಸ್ವಾವಲಂಬನೆ, ಆರೋಗ್ಯ ರಕ್ಷಣೆ: ಫಲಾನುಭವಿಗಳೊಂದಿಗೆ ಸಂವಾದ22ರಂದು ಡಾ.ಅಶೋಕಕುಮಾರ ಜಾಧವಗೆ ಸಿರಿಗನ್ನಡ ಸಾಧಕ ಪ್ರಶಸ್ತಿ ಪ್ರದಾನಹ್ಯಾಂಡ್‌ಬಾಲ್ ಕ್ರೀಡಾಕೂಟದಲ್ಲಿ ಅಥಣಿ ಜೆ.ಎ. ಕಾಲೇಜಿಗೆ ದ್ವಿಪ್ರಥಮ/ ಬಾಲಕ ಮತ್ತು ಬಾಲಕಿಯರ ತಂಡ ರಾಜ್ಯಮಟ್ಟಕ್ಕೆ ಆಯ್ಕೆ