ವಿಜಯಪುರ, ಸೆ.೧೬ : ರಾಜ್ಯ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಮೇಲ್ಮನವಿಗಳ ವಿಚಾರಣೆ ನಡೆಸಿ, ಮಾಹಿತಿಯನ್ನು ನೀಡುವಲ್ಲಿ ಕರ್ತವ್ಯ ಲೋಪ ಎಸಗಿದ ಹಾಗೂ ಆಯೋಗದ ಮೇಲ್ಮನವಿ ವಿಚಾರಣೆಗಳಿಗೆ ನೋಟಿಸ್‌ಗೆ ಸ್ಪಂದಿಸದೆ ಗೈರುಹಾಜರಾದ ಕಾರಣ ಬೆಳಗಾವಿ ವಿಭಾಗದ ಪೊಲೀಸ್, ಕಂದಾಯ, ಪಂಚಾಯತ್ ರಾಜ್ ಮತ್ತು ಹಲವು ಇಲಾಖೆಗಳ ಅಧಿಕಾರಿಗಳಿಗೆ ದಂಡ ವಿಧಿಸಿ, ಆಯೋಗಕ್ಕೆ ತಕ್ಷಣ ಭರಣಾ ಮಾಡಲು ಆದೇಶಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ಆಯೋಗದ ವಿಚಾರಣೆಗೆ ಗೈರುಹಾಜರಾದ ಪ್ರಕರಣಗಳನ್ನು ಪರಿಗಣಿಸಿ ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಆಯೋಗಕ್ಕೆ ತಕ್ಷಣ ಭರಣಾ ಮಾಡುವಂತೆ ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಶ್ರೀ ಪ್ರಕಾಶ್ ನಾರಾಯಣ ಚನ್ನಾಳ ಅವರು ಆದೇಶಿಸಿದ್ದಾರೆ.