ಬಳ್ಳಾರಿ,ಜೂ.12
ರಾಷ್ಟಿçÃಯ ಶಸ್ತçಚಿಕಿತ್ಸಕರ ವಾರಾಚರಣೆಯ ಅಂಗವಾಗಿ ನಗರದ ಆಶೀರ್ವಾದ ಹೈಸ್ಕೂಲ್‌ನಲ್ಲಿ ಕೆಎಸ್‌ಸಿಎಎಸ್‌ಐ -ಬಳ್ಳಾರಿ ಶಾಖೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ‘ಮಕ್ಕಳ ಕಲಾ ಸ್ಪರ್ಧೆ’ ಆಯೋಜಿಸಲಾಗಿತ್ತು.
ಶಾಲಾ ಮಕ್ಕಳಲ್ಲಿ ಸೃಜನಾತ್ಮಕತೆಯನ್ನು ಉತ್ತೇಜಿಸುವುದು ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿತ್ತು. ವಿದ್ಯಾರ್ಥಿಗಳು ಅತ್ಯಂತ ಹರ್ಷಭರಿತರಾಗಿ ಭಾಗವಹಿಸಿದ್ದ ಈ ಚಿತ್ರಕಲೆ ಸ್ಪರ್ಧೆಯನ್ನು ಎರಡು ಪ್ರತ್ಯೇಕ ವಿಭಾಗಗಳಲ್ಲಿ ನಡೆಸಲಾಯಿತು.
1ನೇ ವಿಭಾಗದಲ್ಲಿ 1ನೇ ತರಗತಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ, 2ನೇ ವಿಭಾಗದಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಎರಡೂ ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಷಯಗಳನ್ನು ನೀಡಲಾಗಿದ್ದು, ಅವರು ತಮ್ಮ ಕಲ್ಪನಾ ಶಕ್ತಿಯ ಮುಖಾಂತರ ಪ್ರಾಯೋಗಿಕವಾಗಿ ಆರೋಗ್ಯದ ಮಹತ್ವವನ್ನು ಚಿತ್ರಗಳಲ್ಲಿ ಅಭಿವ್ಯಕ್ತಪಡಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಬಣ್ಣ ಬಣ್ಣದ ಹಾಗೂ ಅರ್ಥಪೂರ್ಣ ಚಿತ್ರಗಳ ಮೂಲಕ ತಮ್ಮ ಅಪಾರ ಸೃಜನಶೀಲತೆ, ಕಲ್ಪನಾ ಸಾಮರ್ಥ್ಯ ಮತ್ತು ಆರೋಗ್ಯಕ್ಕೆ ಸಂಬAಧಿಸಿದ ವಿಷಯಗಳ ಬಗ್ಗೆ ತಮಗಿರುವ ಅರಿವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಈ ಸಕ್ರಿಯ ಭಾಗವಹಿಸುವಿಕೆ ಮತ್ತು ಉತ್ಸಾಹವನ್ನು ಶಾಲೆಯ ಶಿಕ್ಷಕರು ಹಾಗೂ ಕಾರ್ಯಕ್ರಮದ ಆಯೋಜಕರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಸಿಎಎಸ್‌ಐ ಬಳ್ಳಾರಿ ಶಾಖೆಯ ಅಧ್ಯಕ್ಷ ಡಾ. ಶೇಖಪ್ಪ ಮಾಳಗಿಮನಿ, ಕಾರ್ಯದರ್ಶಿ ಡಾ. ಗುಡೇಕೋಟೆ ರವಿಕುಮಾರ್, ಸಹಕಾರ್ಯದರ್ಶಿ ಡಾ. ಶೈಕ್ ಫರ್ಹಾನ್ ಎಂ.ಬಿ ಸೇರಿದಂತೆ ಜನರಲ್ ಸರ್ಜರಿ ವಿಭಾಗದ ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿ, ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲೆಯ ಮೂಲಕ ಆರೋಗ್ಯ ಜಾಗೃತಿಯನ್ನು ಮೂಡಿಸುವಲ್ಲಿ ಈ ವೇದಿಕೆಯು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿತು.
