LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ



ತಾಳಿಕೋಟೆ,   ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು, ತಾಲೂಕು ಘಟಕ ತಾಳಿಕೋಟೆ ವತಿಯಿಂದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವು ಶುಕ್ರವಾರರಂದು ಸ್ಥಳೀಯ ಬಾಲಭಾರತಿ ವಿದ್ಯಾಮಂದಿರ ಸಭಾಭವನದಲ್ಲಿ ನಡೆಯಿತು.
     ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ. ದಮ್ಮೂರಮಠ ಮಾತನಾಡಿ, ಶಿಕ್ಷಕರ ಸಂಘಟನೆಗಳು ಶಿಕ್ಷಕರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯವು ವಿಶೇಷ ಮಹತ್ವ ಹೊಂದಿದೆ ಎಂದು ಹೇಳಿದರು.
     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಭಾರತಿ ವಿದ್ಯಾಮಂದಿರ ಸಂಸ್ಥೆಯ ತಮ್ಮಣ್ಣ ದೇಶಪಾಂಡೆ ವಹಿಸಿದ್ದರು.
      ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವೆಂಕೋಬ ನಾಯ್ಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
     ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅಲ್ಲದೆ, ಸೇವೆಯಿಂದ ನಿವೃತ್ತರಾದ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
    ಈ ಸಮಯದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಮುತ್ತು ಬಿರಾದಾರ, ಪ್ರದೀಪ ಗೊಂಡ್, ಪ್ರೇಮಾ ನಡಹಳ್ಳಿ, ಜಗದೀಶ್ ಕೊನ್ನೂರ್, ಸಿ.ಜಿ. ಗೌಡರ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಶಿಕ್ಷಕಿ ರೂಪಾ ನಾಗಾವಿ ಪ್ರಾರ್ಥಿಸಿದರು. ಬಾಲಭಾರತಿ ವಿದ್ಯಾಮಂದಿರ ಶಾಲೆಯ ಮುಖ್ಯಗುರು ಮಹೇಶ್ ಓದಿ ನಿರೂಪಿಸಿದರು. ಶಿಕ್ಷಕ ಸಿದ್ಧಾರೂಢ ಹೊರ್ತಿ ವಂದಿಸಿದರು. 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚೆನ್ನಮ್ಮನವರ ಆದರ್ಶ, ಧೈರ್ಯ ಜೀವನಕ್ಕೆ ದಾರಿದೀಪವಾಗಲಿ: ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿವೀರರಾಣಿ ಚೆನ್ನಮ್ಮಳ ಧೈರ್ಯ, ಸಾಹಸ ಮತ್ತು ದೇಶಪ್ರೇಮ ಯುವ ಜನರಿಗೆ ಪ್ರೇರಣೆ ವೀರಮಾತೆ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪನಮನ ಸಲ್ಲಿಕೆಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ-2026; ಕೊಪ್ಪಳ ಜಿಲ್ಲೆಯಲ್ಲಿ ಶೇ.92.59 ರಷ್ಟು ಮತದಾನಚೆನ್ನಮ್ಮಾಜಿಯ ಶೌರ್ಯ, ಆದರ್ಶ ಯುವ ಪೀಳಿಗೆಗೆ ದಾರಿದೀಪ: ತಹಶೀಲ್ದಾರ ಪ್ರಕಾಶ ಗಾಯಕವಾಡರಾಮದುರ್ಗ: ವಾಸವಿ ಸಮಾಜದ ಮಹಿಳಾ ಬಳಗದಿಂದ ವಾರ್ಷಿಕ ವಾಸವಿ ಪೂಜಾ ಕಾರ್ಯಕ್ರಮಬ್ರಿಟಿಷರಿಗೆ ತಕ್ಕ ಪ್ರತ್ಯುತ್ತರ ನೀಡಿದ ಕಿತ್ತೂರು ರಾಣಿ ಚೆನ್ನಮ್ಮ-ಹಿಪ್ಪರಗಿಎಪಿಎಂಸಿ 17ನೇ ವಾರ್ಡ್ನಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ. 10 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ; ಗುಣಮಟ್ಟಕ್ಕೆ ಆದ್ಯತೆ: ಶಿವಲೀಲಾ ಬುಟಾಳಿಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮುತಗಾ ಗ್ರಾಮದ ಸ್ವಾತಿಕ್ ಪಾಟೀಲ್‌ಗೆ ಕಂಚಿನ ಪದಕ: ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆಕಿತ್ತೂರು ಉತ್ಸವ-2026: ಜಲ ಕ್ರೀಡೆ, ದೋಣಿ ವಿಹಾರಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ