LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ವೈಭವದ ರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವ ಸಂಪನ್ನ

 

ಜಮಖಂಡಿ, ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆದ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನೋತ್ಸವ ಸೋಮವಾರ ಸಂಪನ್ನಗೊಂಡಿತು, ತಾಲುಕಿನಾದ್ಯಂತ ವೈಭವ ದಿಂದ ಭಕ್ತಾಧಿಗಳು ಉತ್ಸವದಲ್ಲಿ ಭಾಗವಹಿಸಿದ್ದರು, ನಗರದ ಹುಲ್ಯಾಳಕರಗಲ್ಲಿ, ಸಾಬಡೆಗಲ್ಲಿ, ಪ್ರಭಾತನಗರ ಹಾಗೂ ಪೋಸ್ಟ ಕಾಲನಿಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿದಿನ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಪಲ್ಲಕ್ಕಿ ಸೇವೆ, ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆದವು. ಪಂಡಿತರಿಂದ ಉಪನ್ಯಾಸ, ಹೋಮ - ಹವನಗಳನ್ನು ಆಯೋಜಿಸಲಾಗಿತ್ತು. ಮೂರನೇ ದಿನವಾದ ಸೋಮವಾರ ರಥೋತ್ಸವ ಆಯೋಜಿಲಾಗಿತ್ತು, ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಿತು, ತಳಿರು, ತೋರಣ, ಪುಷ್ಪಹಾರಗಳಿಂದ ಸಾಲಂಕೃತ ರಥೋತ್ಸವ ಕಣ್ಮನ ಸೆಳೆಯಿತು, ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು, ಎಲ್ಲ ಮಠಗಳಲ್ಲಿ ತೀರ್ಥ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು, ಪ್ರಧಾನ ಅರ್ಚಕರಾದ ರಾಘವೇಂದ್ರ ಜೋಷಿ, ಪೂರ್ಣಪ್ರಜ್ಞ ಜೋಷಿ ಹಾಗೂ ಸಾಬಡೆ ಗಲ್ಲಿ ಮಠದ ರಘೋತ್ತಮಾಚಾರ್ಯ, ಅಶೋಕಾಚಾರ್ಯ, ಪೋಸ್ಟ ಕಾಲೊನಿ ಮಠದ ಗೋವಿಂದಾಚಾರ್ಯ, ಹಿರೇಪಡಸಲಗಿಯ ಮಧ್ವಾಚಾರ್ಯ ಕಟ್ಟಿ ಮುಂತಾದವರು ಉತ್ಸವದ ನೇತೃತ್ವ ವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಾ ಪುರುಷರ ಆದರ್ಶ ಅಳವಡಿಸಿಕೊಳ್ಳೊಣ-ಡಾ.ಬಿರಾದಾರವಿಹಾನ ಮಲಪ್ರಭಾ ಹಾರ್ಟ್ ಕೇರ್‌ನಲ್ಲಿ ಅತ್ಯಾಧುನಿಕ ಹೃದಯ ಚಿಕಿತ್ಸಾ ಸೌಲಭ್ಯಗಾಣಿಗ ಸಮಾಜದಲ್ಲಿ ಒಗ್ಗಟ್ಟು ಹೆಚ್ಚಾಗಲಿ - ಬೆಳ್ಳುಬ್ಬಿ  ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಹಾಗೂ ಸ್ವಚ್ಛತೆಗೆ ಒತ್ತು ನೀಡುವಂತೆ ಸೂಚನೆಇಂಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ: ಸೆ. 3ರಂದು ಬೃಹತ್ ಹೋರಾಟಕ್ಕೆ ಕರೆಇಂಡಿ: 67 ನಿವೃತ್ತ ಶಿಕ್ಷಕರಿಗೆ ಅದ್ಧೂರಿ ಸನ್ಮಾನ – ಶಿಕ್ಷಕ ವೃತ್ತಿ ಸಮಾಜದಲ್ಲೇ ಅತ್ಯಂತ ಶ್ರೇಷ್ಠ ಎಂದ ತಹಶೀಲ್ದಾರ್ ನಾಗೇಶ ಕೋಳಶೆಟ್ಟಿಮಾಹಿತಿ ಹಕ್ಕು ಕಾಯ್ದೆ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವಕ್ಕೆ ಪ್ರಮುಖ ಕಾಯ್ದೆ : ಪ್ರಕಾಶ್ ನಾರಾಯಣ ಚೆನ್ನಾಳನೇಸರಗಿ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟನೆಕಸಾಪ ಕಾಯಕಲ್ಪಕ್ಕೆ ‘ಹಾರ್ಟ್ ಸರ್ಜನ್’ ಸಜ್ಜು: ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಗೆದ್ದರೆ 111 ವರ್ಷಗಳ ಇತಿಹಾಸದಲ್ಲಿ ಹೊಸ ಅಧ್ಯಾಯ!   ೧೮೭ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ