LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

"ಮೂಡಲಗಿಯಲ್ಲೊಂದು ಪರಿಸರಸ್ನೇಹಿ ಮಣ್ಣಿನ ಗಣಪ"


ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಪುರಾತನ ಸಾರ್ವಜನಿಕ ಗಣೇಶ ಮಂಡಳಿಗಳಲ್ಲೊಂದಾದ ವಿದ್ಯಾನಗರದ ಶ್ರೀ ಗಜಾನನ ಯುವಕ ಮಂಡಳಿಯವರು, ಮಣ್ಣಿನ ಗಣಪನನ್ನು ಕೂರಿಸುವುದರ ಜೊತೆಗೆ ಏಳು ದಿನಗಳ ಕಾಲ ಗಣೇಶ ಹಬ್ಬದ ಆಚರಣೆನ್ನೂ ಕೂಡ ಪರಿಸರ ಸ್ನೇಹಿಯಾಗಿಯೇ ಆಚರಿಸುವ ಪಣ ತೊಟ್ಟು ಇತರರಿಗೆ ಮಾದರಿಯಾಗಿದ್ದಾರೆ.
ಸೋಮವಾರದಂದು ಗಣೇಶ ಚತುರ್ಥಿ ಅಂಗವಾಗಿ ಮಣ್ಣಿನ ಗಣಪತಿಯನ್ನು ಕರೆತರುವ ಮೆರವಣಿಗೆಯಲ್ಲಿ ಕೂಡ ವಾಯು ಹಾಗೂ ಶಬ್ಧ  ಮಾಲಿನ್ಯಕ್ಕೆ ಕಾರಣವಾದ ಯಾವುದೇ ಪಟಾಕಿಗಳನ್ನು ಸಿಡಿಸದೇ, ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಡಿಜೆ ಸಂಗೀತ ಬಳಸದೇ, ಕೇವಲ ದೇಸಿ ವಾದ್ಯಗಳನ್ನು ನುಡಿಸುವುದರೊಂದಿಗೆ ಯುವಕ  ಮಂಡಳಿಯ ಸದಸ್ಯರು, ಸಮಸ್ತ ವಿದ್ಯಾನಗರ ನಿವಾಸಿಗಳು ಹಾಗೂ ಸುಮಂಗಲಿಯರು ಆರತಿಯನ್ನು ಹಿಡಿದು ಗಣೇಶನ ಸ್ತುತಿಗಳನ್ನು ಹಾಡುವುದರೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ೭ ದಿನಗಳ ಕಾಲ ಕೂರುವ ಗಣಪ ಇದಾಗಿದ್ದು, ಪ್ರತಿದಿನ ಸಾಯಂಕಾಲ ಪ್ರವಚನ ಕಾರ್ಯಕ್ರಮ ಆಯೋಜಿಸುವುದರೊಂದಿಗೆ, ಅನ್ನ ಪ್ರಸಾದ ಜರುಗುವುದು ವಿಶೇ?ವಾಗಿದೆ.
ಮಾನವ ಮಾಡುವ ಸ್ವಯಂಕೃತ ಅಪರಾಧದಿಂದ ಪರಿಸರ ಅಸಮತೋಲನವಾಗಿ, ರಾಜ್ಯ ಮಳೆ-ಬೆಳೆಯಿಲ್ಲದೇ, ಬರಗಾಲದಿಂದ ತತ್ತರಿಸುತ್ತಿರುವ ಈ ಸಂಧರ್ಭದಲ್ಲಿ, ಪ್ರಜ್ಞಾವಂತರಾದ ಮೂಡಲಗಿಯ ವಿದ್ಯಾನಗರದ  ಶ್ರೀ ಗಜಾನನ ಯುವಕ ಮಂಡಳಿಯವರು , ಸಾಮಾಜಿಕ ಜಾಗೃತಿಗಾಗಿ ನಿಸರ್ಗದ ಮಾದರಿಯ ಮಂಟಪ ಮಾಡಿ, ಮಣ್ಣಿನ ಗಣಪನನ್ನು ಕೂಡಿಸುವುದರ ಮೂಲಕ ಪರಿಸರಸ್ನೇಹಿಯಾಗಿಯೇ ಗಣೇಶನ ಹಬ್ಬವನ್ನು ಆಚರಿಸುತ್ತಿರುವುದು, ಮೂಡಲಗಿ ತಾಲೂಕಾ ಆಡಳಿತ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್