LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಬಡ ಕುಶಲಕರ್ಮಿಗಳಿಗೆ ಉಚಿತ ಯಂತ್ರೋಪಕರಣ ವಿತರಣೆಯಲ್ಲಿ ತೊಂದರೆ ಆರೋಪ

ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅಂಬೇಡ್ಕರ್ ಸೇನೆ ಆಗ್ರಹ




ತಾಳಿಕೋಟೆ: ಸರ್ಕಾರವು ಗ್ರಾಮೀಣ ಪ್ರದೇಶದ ಬಡ ಕುಶಲಕರ್ಮಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಉಚಿತವಾಗಿ ಹೊಲಿಗೆ ಯಂತ್ರ ಹಾಗೂ ಬಡಗಿತನದ ಯಂತ್ರಗಳನ್ನು ವಿತರಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಫಲಾನುಭವಿಗಳಿಗೆ ಕಚೇರಿಗೆ ಬಂದು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸುವ ಮೂಲಕ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಅಂಬೇಡ್ಕರ್ ಸೇನೆ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
      ಅಂಬೇಡ್ಕರ್ ಸೇನೆ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಸರ್ಕಾರವು ಬಡ ಕುಶಲಕರ್ಮಿಗಳಿಗೆ ಸುಲಭವಾಗಿ ಸೌಲಭ್ಯ ತಲುಪಿಸುವ ಉದ್ದೇಶದಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಆದರೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಎಲ್ಲ ದಾಖಲೆಗಳ ಪ್ರತಿಗಳನ್ನು ಹಾಗೂ ಭಾವಚಿತ್ರವನ್ನು ತೆಗೆದುಕೊಂಡು ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಗೆ ಖುದ್ದಾಗಿ ಬಂದು ಸಲ್ಲಿಸುವಂತೆ ಸೂಚಿಸಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
       ವಿಜಯಪುರ ಜಿಲ್ಲೆಯಲ್ಲಿ ದೂರದ ಗ್ರಾಮಗಳಿಂದ ನೂರಕ್ಕೂ ಹೆಚ್ಚು ಕಿಲೋಮೀಟರ್ ಪ್ರಯಾಣಿಸಿ ಕಚೇರಿಗೆ ಬಂದು ಹೋಗುವುದು ಬಡವರಿಗೆ ಆರ್ಥಿಕವಾಗಿ ಹಾಗೂ ದೈಹಿಕವಾಗಿ ತೊಂದರೆಯಾಗುತ್ತಿದೆ. ಸರ್ಕಾರದ ಆನ್‌ಲೈನ್ ಅರ್ಜಿ ವ್ಯವಸ್ಥೆಯ ಉದ್ದೇಶವನ್ನೇ ಕೆಲ ಅಧಿಕಾರಿಗಳ ಕಾರ್ಯವೈಖರಿ ವಿಫಲಗೊಳಿಸುತ್ತಿದೆ. ಅರ್ಜಿಗಳಲ್ಲಿ ಲೋಪಗಳಿವೆ ಎಂದು ಹೇಳಿ ಕೆಲವು ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಿದೆ.
       ಈ ಕುರಿತು ಮಾತನಾಡಿದ ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಬಸ್ಸು ಕಟ್ಟಿಮನಿ ಸರ್ಕಾರವು ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆನ್‌ಲೈನ್ ಅರ್ಜಿ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಫಲಾನುಭವಿಗಳನ್ನು ಕಚೇರಿಗೆ ಕರೆಸಿಕೊಂಡು ದಾಖಲೆಗಳನ್ನು ಸಲ್ಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಅರ್ಜಿದಾರರು ಕಚೇರಿಗೆ ಭೇಟಿ ನೀಡದಿದ್ದರೆ ದಾಖಲೆಗಳು ಸರಿಯಾಗಿ ಸ್ಕ್ಯಾನ್ ಆಗಿಲ್ಲ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಿದರು.
      ಬಡ ಕುಶಲಕರ್ಮಿಗಳಿಗೆ ಸರ್ಕಾರದ ಸೌಲಭ್ಯಗಳು ಯಾವುದೇ ಅಡೆತಡೆಯಿಲ್ಲದೆ ತಲುಪಬೇಕು. ಆದ್ದರಿಂದ ಜಿಲ್ಲಾಧಿಕಾರಿಗಳು ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ, ಅರ್ಜಿಗಳ ವಿಲೇವಾರಿ ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಬೇಕು. ಫಲಾನುಭವಿಗಳಿಗೆ ಅನಗತ್ಯ ತೊಂದರೆ ನೀಡುತ್ತಿರುವುದು ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
     ಬಡವರಿಗೆ ನ್ಯಾಯ ದೊರಕದಿದ್ದರೆ ಅಂಬೇಡ್ಕರ್ ಸೇನೆ ಸಂಘಟನೆಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
     ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಮನವಿ ಸ್ವೀಕರಿಸಿದರು. 
       ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ರಮೇಶ್ ದೊಡ್ಡಮನಿ, ಶಂಕರ್ ಮಾದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಲಿಷ್ಠ ಭಾರತದತ್ತ ಸಾಗಲು ಚನ್ನಮ್ಮನ ದೇಶಭಕ್ತಿ ಅಳವಡಿಸಿಕೊಳ್ಳಿಬಳ್ಳಾರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭ: ಕ್ವಿಂಟಾಲ್‌ಗೆ ರೂ.8,343 ನಿಗದಿಅಕ್ಟೋಬರ್ ೧೯ ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಬಳ್ಳಾರಿ ಜಿಲ್ಲೆಯಾದ್ಯಂತ ಅ. ೨೧ರಿಂದ ೨೩ರ ವರೆಗೆ ‘ಶುಷ್ಕ ದಿನ’ (ಡ್ರೈ ಡೇ) ಘೋಷಣೆ: ಮದ್ಯ ಮಾರಾಟ ನಿಷೇಧಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಕಟ್ಟುನಿಟ್ಟಿನ ಸೂಚನೆಮೈಸೂರು ದಸರಾ ಸಿಎಂ ಕಪ್ ವುಶು ಕ್ರೀಡಾಕೂಟದಲ್ಲಿ ಎಂ.ಕೆ. ಹುಬ್ಬಳ್ಳಿಯ ಮೂವರು ಬಾಲಕಿಯರಿಗೆ ಬೆಳ್ಳಿ ಪದಕದ ಗರಿ!ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸನ್ಮಾನಬಡ ಕುಶಲಕರ್ಮಿಗಳಿಗೆ ಉಚಿತ ಯಂತ್ರೋಪಕರಣ ವಿತರಣೆಯಲ್ಲಿ ತೊಂದರೆ ಆರೋಪನವರಾತ್ರಿ ಉತ್ಸವದಲ್ಲಿ ಕೋಚರಿ ಯುವಪಡೆ,ಕುರಣಿ ಗ್ರಾಮದ ವ್ಯಕ್ತಿ ಕಾಣೆ