ಮುದ್ದೇಬಿಹಾಳ:2026 ಸಾಲಿನ ಮುಂಗಾರು ಮಳೆ ಆರಂಭಗೊಂಡಿದ್ದು,ರೈತರು ಬಿತ್ತನೆ ಪ್ರಾರಂಭ ಮಾಡಿದ್ದಾರೆ,ಈ ವರ್ಷ ಯುದ್ಧ ನಡೆದಿರುವುದರಿಂದ ರಸಗೊಬ್ಬರ,ಡಿಎಪಿ ಗಳನ್ನು ಸರಿಯಾಗಿ ಬಳಸಲು ಕೇತ್ ಬಚಾವ್ ಆಂದೋಲನ ಮೂಲಕ ರೈತರಿಗೆ ತಿಳಿಹೇಳುವ ಮೂಲಕ ರೈತರು ಅಗತ್ಯಕ್ಕೆ ತಕ್ಕಂತೆ ಗೊಬ್ಬರ ಬಳಸಬೇಕು,ಎಂದು ಮುದ್ದೇಬಿಹಾಳ ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಾವಿಕಟ್ಟಿ ತಿಳಿಸಿದ್ದಾರೆ. ಅವರು ಇಲಾಖೆಯ ಆದೇಶದಂತೆ ಸೋಮವಾರ ಪಟ್ಟಣದ ಬೀಜ ಮತ್ತು ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು,ರೈತರು ನಿಮ್ಮ ಮಳಿಗೆಗೆ ಬಂದಾಗ ಯಾವ ಬೆಳೆ ಬೆಳೆಯುತ್ತಿರಿ ಎಂದು,ಪರಿಶೀಲಿಸಿ ಅದಕ್ಕೆ ತಕ್ಕಂತೆ ರಸಗೊಬ್ಬರ ಬಳಸಲು ತಿಳಿಸಬೇಕು, ಮತ್ತು ರಸಗೊಬ್ಬರಕ್ಕೆ ಸರ್ಕಾರ ನಿಗದಿಪಡಿಸಿದ ದರವನ್ನು ಮಾತ್ರ ರೈತರಿಂದ ಪಡೆಯಬೇಕು, ಹೆಚ್ಚಿಗೆ ದರ ವಸೂಲಿ ಮಾಡಿದ್ದು,ಮಾಹಿತಿ ಬಂದರೆ,ಅಂತಹ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ,ಎಂದು ಎಚ್ಚರಿಸಿದರು.
ನಾವು ಮುದ್ದೇಬಿಹಾಳ ನಾಲತ್ತವಾಡ ಢವಳಗಿ ಭಾಗದಲ್ಲಿ ತಂಡ ಮಾಡಿಕೊಂಡು ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ,ರೈತರು ಯಾವುದೇ ಕಾರಣಕ್ಕೂ ಭೀಜ ಮತ್ತು ರಸಗೊಬ್ಬರ ನಮಗೆ ಸಿಗುವುದಿಲ್ಲ ಎಂದು ತಿಳಿಯಬಾರದು,ದಾಸ್ತಾನು ಇದೆ,ಅದನ್ನು ಅಗತ್ಯಕ್ಕೆ ತಕ್ಕಂತೆ ರಶೀದಿ ಪಡೆದು ಬಳಸಬೇಕು.
ತಮ್ಮ ತಾಲ್ಲೂಕಿನ ಮಳಿಗೆಗಳಲ್ಲಿ ಇರುವ ರಸಗೊಬ್ಬರ ತಾಲ್ಲೂಕು ಮಟ್ಟದಲ್ಲಿ ಬಳಸಬೇಕು, ಅದನ್ನು ಬೇರೆ ತಾಲ್ಲೂಕಿಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಮಾರಾಟಗಾರರಿಗೆ ತಿಳಿಸಲಾಗಿದೆ,ಮಾನ್ಯ ಜಿಲ್ಲಾ ಅಧಿಕಾರಿಗಳ ಆದೇಶದಂತೆ ತಂಡ ರಚನೆ ಮಾಡಿದ್ದಾರೆ, ಅದರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಕೃಷಿ ಅಧಿಕಾರಿ ರಾಜೇಶ್ವರಿ ನಾಡಗೌಡ, ಸೋಮನಗೌಡ ಬಿರಾದಾರ, ಮಾರಾಟಗಾರರಾದ ಶಿವಶಂಕರಗೌಡ ಹಿರೇಗೌಡರ,ರೈತರು ಇದ್ದರು.
