LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಮುರಕೀಭಾವಿ  ಪಿಕೆಪಿಎಸ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅಡಿವಪ್ಪ ಕುಂದರನಾಡ, ಈರನಗೌಡ ಪಾಟೀಲ

 
ನೇಸರಗಿ. ಇಲ್ಲಿಗೆ ಸಮೀಪದ ಮದನಭಾವಿ ಗ್ರಾಮದ  ಮುರಕೀಭಾವಿ  ವಿವಿದೊದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘ ನಿ.ಮದನಭಾವಿ  ಇದರ ನೂತನ ಅಧ್ಯಕ್ಷರಾಗಿ ಅಡಿವಪ್ಪ ವೀರಪ್ಪ ಕುಂದರನಾಡ ಮತ್ತು ಉಪಾಧ್ಯಕ್ಷರಾಗಿ ಈರನಗೌಡ ಬಸವಂತರಾಯ ಪಾಟೀಲ ಅವರು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಅವರ ಮಾರ್ಗದರ್ಶನದಲ್ಲಿ ಮತ್ತು  ಮದನಭಾವಿ , ಮುರಕೀಭಾವಿ , ಲಕ್ಕುಂಡಿ ಗ್ರಾಮದ ಹಿರಿಯರ, ರೈತರ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆಯಾದರು.
     ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಸಭೆ  ನಂತರ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ 3 ಗ್ರಾಮಗಳ ರೈತರಿಗೆ ಯಾವುದೇ ತೊಂದರೆ ಆಗದಂತೆ ಬೀಜ, ಗೊಬ್ಬರ, ರೈತ ಸಲಕರಣೆ, ಸರಿಯಾದ ಸಮಯಕ್ಕೆ ಸಾಲ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರು ಕೆಲಸ ಮಾಡಬೇಕು, ಅದರಂತೆ ರೈತ ಉದ್ದಾರಕ್ಕೆ ನೂತನ ಕಾರ್ಯಕ್ರಮಗಳನ್ನು ಆಡಳಿತ ಮಂಡಳಿ ಸದಸ್ಯರು ಹಾಗೂ  ಹಿರಿಯರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು. ರೈತರ ಮತ್ತು ಸಂಘದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರಿ ಎಂದರು.
     ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು  ಹಾಗೂ ಗ್ರಾಮಗಳ  ಹಿರಿಯರಾದ ಈಶ್ವರ ಮಿಡಕನಟ್ಟಿ, ಸೋಮಪ್ಪ ಮಲ್ಲಾರಿ,ರಾಮನಗೌಡ ದೊಡ್ಡಗೌಡರ,  ಶಿವಪ್ಪ ಕೊಳದೂರ,ರುದ್ರಗೌಡ ಪಾಟೀಲ,  ಯಲ್ಲನಗೌಡ ದೊಡ್ಡಗೌಡರ, ಶಿವಪ್ಪ ಗುಜನಾಳ,ನಿಂಗನಗೌಡ ದೊಡ್ಡಗೌಡರ, ಶಿವಾನಂದ ಪಾಟೀಲ,ಮಹಾಂತೇಶ ದೊಡ್ಡಗೌಡರ,ವೀರನಗೌಡ ದೊಡ್ಡಗೌಡರ, ಶ್ರೀಶೈಲ ಕುಲಕರ್ಣಿ,ಶಂಕರ ಅಂಗಡಿ, ಅಡಿವಪ್ಪ ಪಾಟೀಲ, ಅಣ್ಣಯ್ಯ  ನಂಜರಗಿ,ಗೌಡಪ್ಪ ದೊಡಗೌಡರ    , ಶೇಖರಪ್ಪ, ಭದ್ರಿ, ಹಣಮಂತ ಹಳೆಮನಿ,ಬಾಬು ಶೇಬನ್ನವರ, ಸಿದ್ರಾಮ ಸಾವಳಗಿ ಸೇರಿದಂತೆ ಮದನಬಾವಿ, ಮುರಕೀಬಾವಿ, ಲಕ್ಕುಂಡಿ ಗ್ರಾಮಗಳ ಮುಖಂಡರು, ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.ಚುನಾವಣೆ ಅಧಿಕಾರಿಯಾಗಿ ಬಸವರಾಜ ಹಡಪದ ಕಾರ್ಯನಿರ್ವಹಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್