ರಾಯಬಾಗ: ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಬಾಜೀರಾವ ಮಗದುಮ್ಮ ಪ್ರೌಢಶಾಲೆ ಮುಖ್ಯಾಧ್ಯಾಪಕ ಅರುಣ ಸಲಗರೆ ಅವರನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈರಗೌಡ ಪಾಟೀಲ ಬುಧವಾರ ಸತ್ಕರಿಸಿದರು. ಕಾರ್ಯದರ್ಶಿ ಎ.ಟಿ.ಕೂಗೆ, ಸದಸ್ಯರಾದ ಅಜಿತ ಕಾಮಗೌಡ, ರಾಜಗೌಡ ಪಾಟೀಲ, ಅರಿಹಂತ ಕಾಮಗೌಡ, ಕುಮಾರ ಕಾಮಗೌಡ ಯುವ ಧುರೀಣ ಉತ್ತಮ ಕಾಮಗೌಡ ಇದ್ದರು.