Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ರಾಜಪೂತ ಸಮಾಜದಿಂದ ಅದ್ಧೂರಿ ಶೋಭಾಯಾತ್ರೆ

೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಅವರ ಭವ್ಯ ಕಂಚಿನ ಪ್ರತಿಮೆ ಅನಾವರಣ




ತಾಳಿಕೋಟೆ,ನ,೧೨ : ಐತಿಹಾಸಿಕ ನಗರ ತಾಳಿಕೋಟೆಯಲ್ಲಿ ಹಿಂದೂ ಸೂರ್ಯ, ಮೇವಾಡದ ಸಿಂಹ, ಸೂರ್ಯವಂಶಿ ರಾಜಪೂತ ದೊರೆ ಮಹಾರಾಣಾ ಪ್ರತಾಪ್ ಸಿಂಹ ಅವರ ಭವ್ಯ ಕಂಚಿನ ಪ್ರತಿಮೆ ಅನಾವರಣ ಸಮಾರಂಭವು ನವೆಂಬರ್ ೧೫ರಂದು ಭಾನುವಾರ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಈ ಐತಿಹಾಸಿಕ ಸಮಾರಂಭದ ಅಂಗವಾಗಿ ಅಂದು ಬೆಳಿಗ್ಗೆ ೮ ಗಂಟೆಗೆ ನಗರದ ರಾಜಪೂತ ಓಣಿಯಿಂದ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಸಕಲ ವಾದ್ಯ ವೈಭವ, ವಿವಿಧ ಕಲಾತಂಡಗಳು ಹಾಗೂ ಸಮಾಜ ಬಾಂಧವರ ಉತ್ಸಾಹದೊಂದಿಗೆ ಹೊರಡುವ ಶೋಭಾಯಾತ್ರೆಯು ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳ ಮೂಲಕ ಸಾಗಿ ಮಹಾರಾಣಾ ಪ್ರತಾಪ್ ಸಿಂಹ ವೃತ್ತವನ್ನು ತಲುಪಲಿದೆ. 
ಕನ್ನಡ ಶಾಲಾ ಮೈಧಾನದಲ್ಲಿ ನಡೆಯಲಿರುವ ಅನಾವರಣ ಸಮಾರಂಭದ ದಿವ್ಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಪರಮಪೂಜ್ಯ ಶ್ರೀ ಸಿದ್ಧಲಿಂಗ ದೇವರು, ವಿದ್ವಾನ್ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯರು, ಬಾಲ ತಪಸ್ವಿ ಶ್ರೀ ಸೋಮಲಿಂಗ ಮಹಾಸ್ವಾಮಿಗಳು, ಹಾಗೂ ಮೇ.ಮೂ. ಶ್ರೀ ಭೀಮಾಶಂಕರ ಜೋಶಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಭಾರತ ಸರ್ಕಾರದ ಸಚಿವರಾದ ಪ್ರಲ್ಹಾದ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಅನುರಾಗ್ ಸಿಂಗ್ ಠಾಕೂರ್ ಅವರು ಮಹಾರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿ, ಅಧ್ಯಕ್ಷರಾದ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಸಚಿವರಾದ ಡಾ. ಅಜಯಸಿಂಗ್ ಧರ್ಮಸಿಂಗ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ವಿಜಯಪುರ ನಗರ ಶಾಸಕ ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ(ಯತ್ನಾಳ), ಮಾಜಿ ಸಚಿವ ಶಿವಾನಂದ ಪಾಟೀಲ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ), ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಈಶ್ವರಸಿಂಗ್ ಠಾಕೂರ, ಡಾ.ಬಿ.ವೆಂಕಟಸಿಂಗ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಆರ್.ಬಾಲಾಜಿಸಿಂಗ್, ಕೆಕೆಓದ ಅಧ್ಯಕ್ಷ ಉದಯಸಿಂಗ್, ಸುಭಾಸಸಿಂಗ್ ಜಮಾದಾರ, ಶಿವಾಶುಸಿಂಗ್ ರಜಪೂತ, ಶ್ರೀಮತಿ ಸಂದ್ಯಾತಾಯಿ ರಜಪೂತ, ಸುಜೀತಸಿಂಗ್ ಠಾಕೂರ, ಮಹಾವೀರ ಭಾರತಿ, ತಾಳಿಕೋಟೆ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಆಗಮಿಸಲಿದ್ದಾರೆ. 
ಮಹಾರಾಣಾ ಪ್ರತಾಪ್ ಸಿಂಹ ಅವರು ತಮ್ಮ ಶೌರ್ಯ, ಸ್ವಾಭಿಮಾನ, ದೇಶಪ್ರೇಮ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದ ಮೂಲಕ ಭಾರತೀಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಸಾಹಸಗಾಥೆ ಮತ್ತು ಆದರ್ಶಗಳು ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ಸ್ಮರಣಾರ್ಥ ತಾಳಿಕೋಟೆಯಲ್ಲಿ ಕಂಚಿನ ಪ್ರತಿಮೆ ಸ್ಥಾಪನೆಯಾಗಿದ್ದು ಅನಾವರಣದೊಂದಿಗೆ ನಗರದಲ್ಲಿ ಐತಿಹಾಸಿಕ ಮಹತ್ವ ಪಡೆಯಲಿದೆ. 
     

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಮೂಡಲಗಿ ವಲಯದ ವಿದ್ಯಾರ್ಥಿಗಳಿಗೆ ಚಿಣ್ಣರ ವನ ದರ್ಶನಕ್ಕೆ ಚಾಲನೆ"ರಾಜಪೂತ ಸಮಾಜದಿಂದ ಅದ್ಧೂರಿ ಶೋಭಾಯಾತ್ರೆವಸತಿ ಸಹಿತ ಶಾಲಾ, ಕಾಲೇಜು, ವಸತಿ ನಿಲಯಗಳ ನೋಂದಣಿ ಮತ್ತು ಸುರಕ್ಷತಾ ಪರಿಶೀಲನೆ ಚುರುಕುಗೊಳಿಸಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನೂತನ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಗಂಗಾಧರ ಬಡಕುಂದ್ರಿ ಆಯ್ಕೆ.*ಶಿವಾನಂದ ಕೌಜಲಗಿ ನಿಧನ: ನಿವಾಸಕ್ಕೆ ಭೇಟಿ ನೀಡಿ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ*ಅರಭಾವಿಯಲ್ಲಿ ಪ್ರಥಮ ಬಾರಿಗೆ ಶ್ರೀ ಭುವನೇಶ್ವರಿ ದೇವಿ ಹಾಗೂ ನವಗ್ರಹಗಳ ಮೂರ್ತಿ ಪ್ರತಿಷ್ಠಾಪನೆ.ವ್ಯಕ್ತಿ ನಾಪತ್ತೆ- ಪತ್ತೆಗಾಗಿ ಮನವಿರಾಯದುರ್ಗ  ಶಾಸಕ  ಕಾಲುವ ಶ್ರೀನಿವಾಸ್ ಇವರೊಂದಿಗೆ ತುಂಗಭದ್ರಾ ಜಲಾಶಯ ಕುರಿತು ಪುರುಷೋತ್ತಮ್ ಗೌಡ ಚರ್ಚೆ ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ: ರಾಜಕಾರಣಿಗಳ ವಿರುದ್ಧ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಆಕ್ರೋಶಪುಡಕಲಕಟ್ಟಿಯಲ್ಲಿ ಮೃಣಾಲ್ ಶುಗರ್ಸ್ ನೂತನ ಕಾರ್ಖಾನೆ ಲೋಕಾರ್ಪಣೆ