ಗದಗ, ೧೭ : ಜ್ಞಾನ ಜ್ಯೋತಿ ಪಂಡಿತ ಪುಟ್ಟರಾಜ ಗವಾಯಿಗಳವರ ಸೇವಾ ಟ್ರಸ್ಟ್ ವತಿಯಿಂದ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪಂಚಾಕ್ಷರ ಗವಾಯಿಗಳವರ ಕಾಲೇಜಿನ ಆವರಣದಲ್ಲಿ ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿಗಳವರ ೮೬ ನೇ ಪುಣ್ಯಸ್ಮರಣೋತ್ಸವ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳವರ ೧೬ ನೇ ಪುಣ್ಯಸ್ಮರಣೋತ್ಸವ ಮತ್ತು ಗುರುಪೂರ್ಣಿಮೆಯ ಅಂಗವಾಗಿ ಸಂಗೀತೋತ್ಸವ ಹಾಗೂ ಉಪನ್ಯಾಸ ಮತ್ತು ನುಡಿನಮನ ಕಾರ್ಯಕ್ರಮ ಜರುಗಿತು.
ಸಸಿಗೆ ನೀರುಣಿಸುವ ಮೂಲಕ ಸಂಗೀತ ಪಾಠಶಾಲೆಯ ಮುಖ್ಯೋಪಾಧ್ಯಾಯ ಮಂಜಯ್ಯ ಎಸ್. ಹಿರೇಮಠ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪೂಜ್ಯ ಹೆಸರಿನಲ್ಲಿ ಇಂತಹ ಕಾರ್ಯಕ್ರಮಗಳು ಸದಾ ಜರುಗುತ್ತಿರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಂಗೀತ ಕಲಾವಿದರಾದ ಪಂ. ವೆಂಕಟೇಶಕುಮಾರ ಅಲ್ಕೋಡ ಅವರು ಮಾತನಾಡಿ, ಜ್ಞಾನ ಜ್ಯೋತಿ ಪಂಡಿತ ಪುಟ್ಟರಾಜ ಗವಾಯಿಗಳವರ ಸೇವಾ ಟ್ರಸ್ಟ ನಿರಂತರ ಜ್ಞಾನ ಜ್ಯೋತಿಯಾಗಿ ಅಂಧ ಅನಾಥರ ಹಾಗೂ ನಾಡಿನ ಕಲ್ಯಾಣ ಕೆಲಸ ಮಾಡುತ್ತಿರಲಿ ಎಂದರು.
ಸಂಗೀತ ಉಪನ್ಯಾಸಕರಾದ ಅಂಬಾದಾಸ ಎಸ್. ಜಮಾದಾರ ಅವರು ಉಪನ್ಯಾಸ ನೀಡಿದರು.
ಮುಖ್ಯೋಪಾಧ್ಯಾಯ ಪಿ. ಎಸ್. ಹಿರೇಮಠ, ತಬಲಾ ಶಿಕ್ಷಕರಾದ ರಾವುತಪ್ಪ ಹೂಗಾರ, ಶೇಖಣ್ಣ ರೋಣಿ, ಕುಮಾರಸ್ವಾಮಿ ವೆಂಕಟಾಪುರಮಠ, ಕಳಕಪ್ಪ ಕುರ್ತಕೋಟಿ, ಶಿವಚಲಕುಮಾರ ಸಾಲಿಮಠ, ಕಳಕಪ್ಪ ಮದ್ಲಾಪೂರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಅಂಧ ಅನಾಥ ಮಕ್ಕಳ ಸೇವೆಗಾಗಿ
ಸಮಾಜ ಕಲ್ಯಾಣ ಇಲಾಖೆಯಿಂದ ೨೦೨೬ ರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕಳಕಪ್ಪ ವೀರಪ್ಪ ಮದ್ಲಾಪೂರ ಅವರನ್ನು ಸನ್ಮಾನಿಸಲಾಯಿತು.
ಪುಟ್ಟರಾಜ ವೆಂಕಟಾಪುರಮಠ, ಸಂಕೇಶ್ವರ ಮಸಣಿ, ಸೋಹಿನಿ ವಿ. ಅಲ್ಕೋಡ, ರೇಣುಕಾ ಲಕ್ಕುಡಿ, ಶ್ರೇಯಸ್ ಮಂಡ್ಯ, ಮಲ್ಲು, ಆದರ್ಶ ಜಾಧವ, ರಾಹುಲ ಅಮ್ಮಿನಗಡ ಸಂಗೀತ ಕಾರ್ಯಕ್ರಮ ನೀಡಿದರು.
ರಾಮಯ್ಯ ಸಂಬಾಳಮಠ ಪ್ರಾರ್ಥಿಸಿದರು. ಶಿವಚಲಕುಮಾರ ಸಾಲಿಮಠ ಹಾಗೂ ಕಳಕಪ್ಪ ಕುರ್ತಕೋಟಿ ನಿರೂಪಿಸಿದರು. ಕುಮಾರಸ್ವಾಮಿ ವೆಂಕಟಾಪುರಮಠ ವಂದಿಸಿದರು.