ಬಳ್ಳಾರಿ, ನ.03: ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ‘ಸಾಧಕರ ಸಂಭ್ರಮಾಚರಣೆ’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ 18 ಜನಾಂಗಗಳಿಗೆ ಸೇರಿದ ವಿವಿಧ ಕ್ಷೇತ್ರಗಳ ಒಟ್ಟು 640 ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಣ, ಕೃಷಿ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ಸಾಧಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ ಮೂಲಕ ಅವರ ಸೇವೆ ಹಾಗೂ ಸಾಧನೆಯನ್ನು ಗುರುತಿಸಲಾಯಿತು.
ಈ ಸಂದರ್ಭದಲ್ಲಿ ಸಂಗನಕಲ್ಲು ಹೇಮಂತ್ ರಾಜ್, ಇಂಜಿನಿಯರ್ ದಾಸರಿ ವೆಂಕಟರಮಣ, ಕಟ್ಟೇಗೌಡ, ಮೇಟಿ ಬಸವರಾಜ್ ಗೌಡ, ದಾಸರಿ ಗೋವಿಂದ, ರೈತ ಸಂಘದ ಅಕ್ಕಿ ಕೃಷ್ಣ, ಪ್ರಸಾದ್, ಯುಧಿಷ್ಠಿರ, ಗಣೇಶ್, ನಾಗರಾಜ್, ಭಾಷಾ (ಆಪ್ತಮಿತ್ರ), ಭೀಮೇಶ್, ಈರೇಶ್, ರಾಮಕೃಷ್ಣ, ಶೇಖರ್, ಶೇಖಣ್ಣ, ಸುಂಕಯ್ಯ, ಮಲ್ಲಿಕಾರ್ಜುನ ಕರಡಳ್ಳಿ, ಈಶ್ವರ, ನಾಗನಗೌಡ, ಜಡೆಯಪ್ಪ, ಜಡೇಗೌಡ, ಬುಗ್ಗಾಯ್ಯ, ಶೀನಾ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.
ಗ್ರಾಮದ ವಿವಿಧ ಜನಾಂಗಗಳ ಸಾಧಕರನ್ನು ಒಗ್ಗೂಡಿಸಿ ಗೌರವಿಸಿದ ಈ ಕಾರ್ಯಕ್ರಮ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮೂಡಿಸಿತು.