ಮಹಾಲಿಂಗಪುರ: ತೇರದಾಳ ಮತಕ್ಷೇತ್ರದ ಅಭಿವೃದ್ಧಿಗೆ ಬದ್ಧರಾಗಿರುವ ಜನಪ್ರಿಯ ಶಾಸಕ ಸನ್ಮಾನ್ಯ ಶ್ರೀ ಸಿದ್ದು ಸವದಿ ಅವರು, ಮಹಾಲಿಂಗಪುರ ನಗರದ ವ್ಯಾಪ್ತಿಯ ಬುದ್ನಿ ಪಿಡಿ ಗ್ರಾಮದ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
೨೦೨೫-೨೬ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ (ಅಒIಆP) ಮಂಜೂರಾದ ?೫ ಲಕ್ಷ ಅನುದಾನದಲ್ಲಿ ಈ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಈ ಕಾಮಗಾರಿಯು ಬುದ್ನಿ ಪಿಡಿ ಗ್ರಾಮದ ಹುಳ್ಳಾಳ ಮತ್ತು ಕಲ್ಲಟ್ಟಿ ತೋಟದಿಂದ ಆರಂಭಗೊಂಡು, ಶಾಲೆಯ ಮಾರ್ಗವಾಗಿ ಪರಪ್ಪ ಮಲ್ಲಪ್ಪ ಖೋತ ಅವರ ತೋಟದವರೆಗೆ ಸಂಪರ್ಕ ಕಲ್ಪಿಸಲಿದೆ.
ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಸಿದ್ದು ಸವದಿ ಅವರು, "ರೈತರ ಮತ್ತು ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಅನುಕೂಲವಾಗುವಂತೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು," ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ ಹಾಗೂ ಬಿಜೆಪಿ ಮುಖಂಡರಾದ ಈರಪ್ಪ ದಿನ್ನಿಮನಿ, ಶೇಖರ ಅಂಗಡಿ,ಶಿವಾನಂದ ಅಂಗಡಿ, ಆನಂದ ಖೋತ, ನಾಗಪ್ಪ ಖೋತ, ವಕೀಲ ರವಿ ಬಾಗಿ, ಲಕ್ಷ್ಮಣ ಖೋತ , ಶನೂರ ತೇರದಾಳ , ಮಾರುತಿ ಹಂದಿಗುಂದ, ಮಲ್ಲಿಕ ಸನದಿ, ಮಲ್ಲಿಕಾರ್ಜುನ ಹಂದಿಗುಂದ, ಬಸವರಾಜ ಹಂದಿಗುಂದ , ಮಲ್ಲಪ್ಪ ಹಂದಿಗುಂದ , ರಜಾಕ ಸನದಿ, ರಫೀಕ ಸನದಿ, ಹನಮಂತ ಕಾರಜೋಳ , ಮಹಾದೇವ ಕಾರಜೋಳ , ಮಹಾಲಿಂಗ ಖೋತ, ಮಹೇಶ ಖೋತ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.ಈ ರಸ್ತೆ ಸುಧಾರಣೆಯಿಂದ ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಬಹಳಷ್ಟು ಅನುಕೂಲವಾಗಲಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.
೧೪ mಟಠಿ ೦೧ ಫೋಟೋ
