ಬಳ್ಳಾರಿ. ಆ. 28 : ಶ್ರೀ ರಾಘವೇಂದ್ರತರ‍್ಥ ಗುರುಸರ‍್ವಭೌಮರ ೩೫೫ನೇ ಆರಾಧನಾ ಮಹೋತ್ಸವವನ್ನು ಜಗದ್ಗುರು ಶ್ರೀ ಮನ್ಮಧ್ವಾಚರ‍್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರರಾದ ಪ್ರಾತಃ ಸ್ಮರಣೀಯ ಶ್ರೀ ಶ್ರೀ ಸುಯತೀಂದ್ರ ತರ‍್ಥ ಶ್ರೀಪಾದಂಗಳವರ ಕರಕಮಲ ಸಂಜಾತರು, ಪ್ರಸ್ತುತ ಮಂತ್ರಾಲಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ೧೦೦೮ ಶ್ರೀ ಶ್ರೀ ಡಾ. ಸುಬುಧೇಂದ್ರ ತರ‍್ಥ ಶ್ರೀಪಾದಂಗಳವರ ಆಜ್ಞಾನುಸಾರ ಇದೇ ಶ್ರೀ ಪರಾಭವನಾಮ ಸಂವತ್ಸರದ ಶ್ರಾವಣ ಬಹುಳ ಪ್ರತಿಪದ, ದ್ವಿತೀಯ ಹಾಗೂ ತೃತೀಯ ದಿನತ್ರಯಗಳಲ್ಲಿ ನಡೆಸಲು ಸಿದ್ಧತೆಗಳು ನಡೆದಿವೆ.
ಈ ಕುರಿತು ನಗರದ ಶ್ರೀ ಸತ್ಯನಾರಾಯಣ ಪೇಟೆಯ ರಾಯರ ಮಠದ ಅಧ್ರ‍್ಯುಗಳು ಪ್ರಕಟಣೆ ನೀಡಿದ್ದು, ಆಗಸ್ಟ್ ೨೯, ೩೦ ಮತ್ತು ೩೧ರ ಶನಿವಾರ, ಭಾನುವಾರ, ಸೋಮವಾರದಂದು ಶ್ರೀ ಹರಿವಾಯು ಗುರುಗಳ ಪ್ರೇರಣಾನುಸಾರ ಶ್ರೀ ಸತ್ಯನಾರಾಯಣ ಪೇಟೆಯ ೧ನೇ ಅಡ್ಡರಸ್ತೆಯಲ್ಲಿರುವ ಜಗದ್ಗುರು ಶ್ರೀಮನ್ಮಧ್ವಾಚರ‍್ಯ ಮೂಲಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮೂಲ ಮೃತ್ತಿಕ ಬೃಂದಾವನ ಸನ್ನಿಧಾನದಲ್ಲಿ ನೆರವೇರಿಸಲಾಗುತ್ತಿದೆ. ಆ.೨೯ರ ಶನಿವಾರ ಪರ‍್ವಾರಾಧನೆ, ೩೦ರ ಭಾನುವಾರ ಮಧ್ಯಾರಾಧನೆ ಮತ್ತು ೩೧ರ ಸೋಮವಾರ ಉತ್ತರಾರಾಧನೆಯನ್ನು ಅತ್ಯಂತ ವೈಭವ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.
ಶ್ರೀಹರಿ ಆಜ್ಞೆಯಂತೆ ಶ್ರೀಶಂಕುರ‍್ಣರೇ ಶ್ರೀ ಪ್ರಹ್ಲಾದರಾಜರಾಗಿ, ಶ್ರೀ ಪಾಕ್ಷೀಕರಾಜರಾಗಿ, ಶ್ರೀ ವ್ಯಾಸರಾಜರಾಗಿ ಅವತರಿಸಿ ವೈದಿಕ ಸಿದ್ಧಾಂತ ತತ್ವ ರ‍್ಮಗಳ ಪ್ರಚಾರಕ್ಕಾಗಿ ಲೋಕಮಾನ್ಯ ಗ್ರಂಥಗಳನ್ನು ರಚಿಸಿ ಸತತ ಪವನ ಆವೇಶಯುಕ್ತರಾದ ವಿಭೂತಿಪುರುಷರೇ ಶ್ರೀಶ್ರೀಶ್ರೀರಾಘವೇಂದ್ರತರ‍್ಥ ಶ್ರೀಪಾದಂಗಳವರು. ಈ ಮಹಾ ಮಹಿಮರು ತಮ್ಮನ್ನು ಆಶ್ರಯಿಸಿ ಬಂದ ಎಲ್ಲಾ ಭಕ್ತರ ರೋಗರುಜಿನಗಳನ್ನು ನಾಶಮಾಡಿ ಸಕಲ ಸಂಪತ್ತನ್ನು ನೀಡಿ ಭಕ್ತರ ಹಾಗೂ ಮಾನವ ಜನಾಂಗದ ಕಲ್ಯಾಣ ಮಾಡುತ್ತಾ ಜಗತ್ತಿನ ಶಾಂತಿ ಸ್ಥಾಪನೆಗಾಗಿ ತಮ್ಮ ಅಖಂಡ ಪುಣ್ಯ ರಾಶಿಯನ್ನು ಕಾಮಧೇನು ಕಲ್ಪವೃಕ್ಷವಂತೆ ಧಾರೆಯೆರೆಯುತ್ತಾ ಮಂತ್ರಾಲಯ ಮಹಾಕ್ಷೇತ್ರದಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿರುವ ಅಗಮ್ಯ ಮಹಿಮರು.
ಆಗಸ್ಟ್ ೨೬ ರಂದು ಬುಧವಾರ ಋಗ್ವೇದ ನಿತ್ಯ ನೂತನ ಉಪಾರ‍್ಮ, ೨೮ರಂದು ಶುಕ್ರವಾರ ಯಜರ‍್ವೇದ ನಿತ್ಯ ನೂತನ ಉಪಾರ‍್ಮ, ಬೆಳಿಗ್ಗೆ ೧೦ ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ೬.೦೦ ಗಂಟೆಗೆ ಧ್ವಜಾರೋಹಣ ಗೋಪೂಜಾ, ಪ್ರರ‍್ಥನೋತ್ಸವ, ಶಾಕೋತ್ಸವ, ಧನ-ಧಾನ್ಯಪೂಜಾ, ಶ್ರೇಯಃ ಪ್ರರ‍್ಥನೆ, ಮಹಾಮಂಗಳಾರತಿ. ಆ.೩೧ರಂದು ಸೋಮವಾರ ಉತ್ತರಾರಾಧನೆ ನಿಮಿತ್ತ ಬೆಳಗ್ಗೆ ೯.೦೦ ಕ್ಕೆ ಮಹಾ ರಥೋತ್ಸವ, ಸೆ. ೦೧ರಂದು ಮಂಗಳವಾರ ಸಾಮಾಹಿಕ ಶ್ರೀ ಪವಮಾನ ಹೋಮ ಬೆಳಗ್ಗೆ ೯.೦೦ ರಿಂದ ೧೧.೩೦ ರ ವರೆಗೆ ಜರುಗಲಿದೆ.
ಈಗಾಗಲೇ ಆ.೧೮ರ ಮಂಗಳವಾರ ದಿಂದ ಆ.೨೨ರ ಶನಿವಾರದ ವರೆಗೆ ಪ್ರತಿದಿನ ಸಂಜೆ ೬.೩೦ ರಿಂದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠ ಮತ್ತು ಶ್ರೀ ಮಧ್ವಸಂಘ ಬಳ್ಳಾರಿ ಸಹಯೋಗದಲ್ಲಿ ಪಂಡಿತರಾದ ವಿದ್ವಾನ್ ಪಿ. ವಿಜಯೇಂದ್ರಾಚಾರ್ ಇವರಿಂದ ಪ್ರವಚನ ಜರುಗಿದೆ. ಆರಾಧನೆ ನಿಮಿತ್ತ ಪ್ರತಿನಿತ್ಯ ಬೆಳಗಿನ ಜಾವ ೦೫ರಿಂದ ೦೫.೩೦ರವರೆಗೆ ಸುಪ್ರಭಾತ, ೦೫.೩೦ ರಿಂದ ೦೬.೦೦ ನರ‍್ಮಾಲ್ಯ ವಿರ‍್ಜನೆ, ೬ ರಿಂದ ೭ ಗಂಟೆಯವರೆಗೆ ವೇದ ಪಾರಾಯಣ, ೭ರಿಂದ ೮ ಗಂಟೆಯವರೆಗೆ ಪಂಚಾಮೃತಾಭಿಷೇಕ, ೧೦ ರಿಂದ ೧೧ ಗಂಟೆಯವರೆಗೆ ಕನಕ ಮಹಾಪೂಜೆ, ೧೧.೦೦ ಕ್ಕೆ ರ‍್ಚನೆ ನೈವೇದ್ಯ, ಅಲಂಕಾರ, ಹಸ್ತೋದಕ ಮತ್ತು ಮಹಾ ಮಂಗಳಾರತಿ, ಸಾಯಂಕಾಲ ೬ ರಿಂದ ೭ರವರೆಗೆ ಉತ್ಸವ, ಸ್ವಸ್ತಿ ವಾಚನ ಮತ್ತು ಮಹಾಮಂಗಳಾರತಿ, ಪ್ರತಿ ನಿತ್ಯ ಸಂಜೆ ೭ ಗಂಟೆಗೆ ದಾಸವಾಣಿ ಹಾಗೂ ಸಾಂಸ್ಕೃತಿಕ ಕರ‍್ಯಕ್ರಮಗಳು ಜರುಗಲಿವೆ.
ಈ ದಿನಗಳಲ್ಲಿ ಸದ್ಭಕ್ತರು ಶ್ರೀ ಗುರುರಾಯರ ಸೇವೆಮಾಡಿ ತರ‍್ಥ-ಪ್ರಸಾದ, ಫಲಮಂತ್ರಾಕ್ಷತೆಗಳನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ತರ‍್ಥ ಗುರುಸರ‍್ವಭೌಮರ ಸಂಪರ‍್ಣ ಅನುಗ್ರಹಕ್ಕೆ ಪಾತ್ರರಾಗಬೇಕೆಂದು
ಗೌರವ ವಿಚಾರಣಾರ‍್ತರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ತಿಳಿಸಿದ್ದಾರೆ.