ರಬಕವಿ -ಬನಹಟ್ಟಿ ಸೆ. 14ತಾಲೂಕಿನ ನಾವಲಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣಸಭೆ ದಿನಾಂಕ 12-92026ರಂದು ಶ್ರೀ ನೀಲಕಂಠಶ್ವರ ಸಭಾ ಭುವನದಲ್ಲಿ ಸಂಘದ ಅಧ್ಯಕ್ಷ ಸಿದ್ದರಾಮೇಶ್ವರ ಗಂ. ಲೆಂಡಿ ಇವರ ಅಧ್ಯಕ್ಷತೆಯಲ್ಲಿ ಮುಂಜಾನೆ 10-00ಘಂಟೆಗೆ ಜರುಗಿತು. ಪ್ರಾರಂಭದಲ್ಲಿ ಎಂ ಎಸ್ ಚಿಚಖಂಡಿ ಸ್ವಾಗತಿಸಿದರು.ಆನಂದ ಕಂಪು ಪ್ರಾಸ್ತವಿಕವಾಗಿ ಮಾತನಾಡಿ ಸಹಕಾರಿ ಸಂಘದ ಅಭಿವೃದ್ಧಿಗೆ ರೈತರು,ಮತ್ತು ಗ್ರಾಹಕರೇ ಬೆನ್ನೆಲುಬಾಗಿದ್ದು ರೈತರು ತಾವು ಪಡೆದಂತಾ ಸಾಲವನ್ನು ಸಕಾಲದಲ್ಲಿ ಪಾವತಿಸಿ ಸಹಕಾರ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದು ಹೇಳಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಎಂ ವಿ ಬಿದರಿ ಇವರು ಸನ್ 2025-26ನೇ ಸಾಲಿನ ಸಂಘದ ಲಾಭ ಹಾನಿ ಗ್ರಾಹಕರಿಗೆ ವಿವರಿಸಿದರು. 2026-27ನೇ ಸಾಲಿನ ಮುಂಗಡ ಬಜೆಟ್ ಕುರಿತು ಸಭೆಯಲ್ಲಿ ಗ್ರಾಹಕರ ಅಭಿಪ್ರಾಯ ಪಡೆಯಲಾಯಿತು. ಈ ವರ್ಷ 2025-26ನೇ ಸಾಲಿನಲ್ಲಿ ಸಂಘವು 35.13ಲಕ್ಷ ಪಡೆದುಕೊಂಡು ಪ್ರತಿಷ್ಠಿತ ಸಂಘಗಳ ಸಾಲಿನಲ್ಲಿ ಬೆಳೆದು ಮುಂಚೂಣಿ ಸ್ಥಾನದಲ್ಲಿದೆ ಎಂದು ಸಭೆಗೆ ತಿಳಿಸಿದರು. ಇದೆ ಸಂಧರ್ಭದಲ್ಲಿ ನಾವಲಗಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭೆಯಲ್ಲಿ
ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿದ್ದರಾಮೇಶ್ವರ ಗಂ. ಲೆಂಡಿ, ಉಪಾಧ್ಯಕ್ಷರಾದ ವಿಠ್ಠಲ್ ಚ. ಜನವಾಡ, ನಿರ್ದೇಶಕರಾದ ಆನಂದ ಶ್ರೀ. ಕಂಪು, (ಚಿಚಖಂಡಿ )ಸುರೇಶ ಸಿ. ಬಿರಡಿ, ಅಲ್ಲಪ್ಪ ಪ. ಮುಗಳಖೊಡ, ಗಿರೀಶ ಅ. ಕಾಂತಿ,ಹನಮಂತ ವೆಂ. ಕುಂದರಗಿ, ಬಡಪ್ಪ ಮ. ಮೆಟಗುಡ್ಡ, ರೇಣುಕಾ ಹ. ರಂಜನಗಿ, ಶಾಂತ ಸಂ ಹಿರೇಮಠ, ಪಾರ್ವತಿ ಪ್ರಕಾಶ.ವಾಬನ್ನವರ, ಗಿರೀಶ ಹ. ಬರಗಾಲ, ಎಂ ಎಸ್ ಪಾಟೀಲ (ಕ್ಷೆತ್ರ ಸಿಬ್ಬಂದಿ ಬಿಡಿ ಸಿಸಿ )ಲೆಕ್ಕ ಸಹಾಯಕ ಎಂ ಎಸ್ ಚಿಚಖಂಡಿ, ಪಿ ಜಿ ಆಸಂಗಿ ಕ್ಲರ್ಕ್, ಎಸ್ ಕೆ ಕಾಂತಿಮಠ ಕ್ಲರ್ಕ್, ಎಂ ಪಿ ಹಳ್ಳಿ ಕ್ಲರ್ಕ್,ಬಿ ವಿ ಗುರವ, ಡಿ ಎಸ್ ಮುಂಡಗನೂರ, ಮುಂತಾದವರು ಉಪಸ್ಥಿತರಿದ್ದರು.