ಅಥಣಿ: ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಟಿ ಲಿ., ಯಕ್ಸಂಬಾ (ಮಲ್ಟಿ-ಸ್ಟೇಟ್) ಅಥಣಿ ಶಾಖೆಯ ಅಮೂಲ್ಯ ಸಾಲದ ಸದಸ್ಯರಾಗಿದ್ದ ಶ್ರೀಮತಿ ಮಂಗಲ ರಾಜೇಂದ್ರ ಬಾಗಡಿ ಅವರು ನಿದನರಾದ ಹಿನ್ನೆಲೆಯಲ್ಲಿ ಸಂಸ್ಥೆಯ ಸದಸ್ಯರ ಮರಣೋತ್ತರ ಪರಿಹಾರ ನಿಯಿಂದ ೩೦ ಸಾವಿರ ರೂ.ಗಳ ಮೊತ್ತದ ವಿಮಾ ಪರಿಹಾರ ಚೇಕ್‌ನ್ನು ಅವರ ವಾರಸುದಾರ ಮನ ಅಕ್ಷಯ ಬಾಗಡಿ ಅವರಿಗೆ ವಿತರಿಸಲಾಯಿತು.
ಅಥಣಿ ಪಟ್ಟಣದಲ್ಲಿ ಶುಕ್ರವಾರ : ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಟಿ ಸಂಸ್ಥೆಯ ಸ್ಥಾನಿಕ ಸಲಹಾ ಸಮಿತಿ ಸದಸ್ಯರು ಮರಣೋತ್ತರ ಪರಿಹಾರ ಹಣದ ಚೇಕ್‌ನ್ನು ವಾರಸುದಾರರಿಗೆ ಹಂಚಿಕೆ ಮಾಡಿದರು
ಈ ವೇಳೆ ಮಾತನಾಡಿದ ಉದಯಕುಮಾರ ಗುಂಡಾ ಅವರು ಸಂಸ್ಥೆಯ ಸಂಸ್ಥಾಪಕರು ಭಾರತೀಯ ರಾಷ್ಟ್ರೀಯ ಸಹಕಾರ ಸಂಘ ನವದೆಹಲಿ ನಿರ್ದೇಶಕರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮತ್ತು ಸಹ ಸಂಸ್ಥಾಪಕಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಮರಣೋತ್ತರೆ ನೆರವನ್ನು ವಾರಸುದಾರರಿಗೆ ಹಂಚಿಕೆ ಮಾಡಲಾಗಿದೆ. ಸದಸ್ಯರ ಕುಟುಂಬಗಳಿಗೆ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಮರಣೋತ್ತರ ಪರಿಹಾರ ನಿಯಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಸದಸ್ಯತ್ವದ ಜೊತೆಗೆ ಕುಟುಂಬದ ಹಿತಾಸಕ್ತಿಗೂ ಸಂಸ್ಥೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸಲಹಾ ಸಮಿತಿ ಅಧ್ಯಕ್ಷ ಉದಯಕುಮಾರ ಗುಂಡಾ, ಸದಸ್ಯರಾದ ಮಲ್ಲಿಕಾರ್ಜುನ ಗೋಟಖಿಂಡಿ, ಭರತ ಸೋಮಯ್ಯ, ಮನೋಹರ ಹಂಜಿ, ರಾಜೇಂದ್ರ ಜಕನೂರ, ಪ್ರಸನ್ನ ಸಗರಿ, ಆನಂದ ಟೋನಪಿ, ಜಗದೀಶ ಧರ್ಮದಾಸನಿ ಹಾಗೂ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.